Advertisement

ಮೇ 17ರವರೆಗೆ ಎಲ್ಲಾ ವಲಯಗಳಲ್ಲಿ ಈ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ- ಇಲ್ಲಿದೆ ಮಾಹಿತಿ

08:23 AM May 02, 2020 | Hari Prasad |

ನವದೆಹಲಿ: ಕೋವಿಡ್ ವೈರಸ್ ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ಅನ್ನು ಮೇ 4ರಿಂದ ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಿ ಕೇಂದ್ರ ಸರಕಾರ ಇಂದು ಆದೇಶ ಹೊರಡಿಸಿದೆ.

Advertisement

ಕೋವಿಡ್ ವೈರಸ್ ಹರಡುವಿಕೆಯ ತೀವ್ರತೆ ಹಾಗೂ ಕೋವಿಡ್ ಸೋಂಕಿತರ ಪ್ರಕರಣಗಳ ಆಧಾರದಲ್ಲಿ ದೇಶಾದ್ಯಂತ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಕೆಂಪು ವಲಯ (ರೆಡ್ ಝೋನ್), ಕಿತ್ತಳೆ ವಲಯ (ಆರೆಂಝ್ ಝೋನ್) ಹಾಗೂ ಹಸುರು ವಲಯ (ಗ್ರೀನ್ ಝೋನ್).

ಇದೀಗ ಮೇ 14ರವರೆಗೆ ವಿಸ್ತರಣೆಯಾಗಿರುವ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಿಗೆ ಕೆಲವೊಂದು ವಿನಾಯಿತಿ ನೀಡಲಾಗಿದ್ದರೂ ಕೆಲವು ನಿರ್ಬಂಧಗಳು ಈ ಮೂರೂ ವಲಯಗಳಿಗೆ ಸಾಮಾನ್ಯವಾಗಿರಲಿದೆ. ಇವುಗಳ ಮಾಹಿತಿ ಇಲ್ಲಿದೆ.

ದೇಶಾದ್ಯಂತ ಮೇ 14ರವರೆಗೆ ವಿಮಾನ ಸಂಚಾರ, ರೈಲು ಸಂಚಾರ , ಮೆಟ್ರೋ ಸೇವೆಗಳು ಹಾಗೂ ಅಂತರ್ ರಾಜ್ಯ ರಸ್ತೆ ಸಂಚಾರಕ್ಕೆ ನಿರ್ಬಂಧ ಇರಲಿದೆ. ಇನ್ನು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಶಾಲೆ, ಕಾಲೇಜುಗಳು, ಇನ್ನಿತರ ಶಿಕ್ಷಣ/ತರಬೇತಿ ಹಾಗೂ ಕೋಚಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುವಂತಿಲ್ಲ. ಇನ್ನು ಹೊಟೇಲ್ ಗಳು, ರೆಸ್ಟೋರೆಂಟ್ ಗಳು, ಪ್ರವಾಸೋದ್ಯಮ ಚಟುವಟಿಕೆಗಳಿಗೆ ನಿರ್ಬಂಧ ಇರಲಿದೆ.

ಇನ್ನು, ಸಾರ್ವಜನಿಕ ಸಮಾರಂಭಗಳು, ಶಾಪಿಂಗ್ ಮಾಲ್ ಗಳು, ಚಿತ್ರಮಂದಿರಗಳು, ಸ್ಪೋರ್ಟ್ ಕಾಂಪ್ಲೆಕ್ಸ್ ಗಳು ಹಾಗೂ ಜಿಮ್ ಗಳಲ್ಲಿ ಜನ ಸೇರುವಿಕೆಯನ್ನು ಕಡ್ಡಾಯವಾಗಿ ಮೇ 14ರವರೆಗೆ ನಿರ್ಬಂಧಿಸಲಾಗಿದೆ. ಮಾತ್ರವಲ್ಲದೇ ದೇಶಾದ್ಯಂತ ರಾಜಕೀಯ, ಸಾರ್ವಜನಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಜನ ಸೇರುವಂತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next