ಬೆಳಗಾವಿ: ಜಿಲ್ಲೆಯಾದ್ಯಂತ ಜಾರಿಯಾಗಿದ್ದ ಲಾಕ್ ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ಸುಮಾರು 679 ದ್ವಿಚಕ್ರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಪೊಲೀಸ್ ಕಮೀಷನರೇಟ್ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸರು ಸೋಮವಾರ(ಮೇ. 10) ರಸ್ತೆಗಿಳಿದು ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ಅನಗತ್ಯವಾಗಿ ವಾಹನ ಓಡಾಡದಂತೆ ಎಚ್ಚರಿಕೆ ನೀಡಿದ್ದರೂ, ಸಾರ್ವಜನಿಕರು ವಾಹನಗಳೊಂದಿಗೆ ರಸ್ತೆಗಿಳಿದಿದ್ದು, ಸರ್ಕಾರ ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಓದಿ : 5 ವರ್ಷಗಳ ಹಿಂದೆ “ಕೋವಿಡ್” ಬಗ್ಗೆ ಚರ್ಚೆ ನಡೆಸಿದ್ದರು ಚೀನಾ ವಿಜ್ಞಾನಿಗಳು..! : ವರದಿ
ಇನ್ನು, ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿ 140 ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ 539 ವಾಹನಗಳನ್ನು ಸೀಜ್ ಮಾಡಲಾಗಿದೆ. ಚಿಕ್ಕೋಡಿ ಉಪ ವಿಭಾಗದಲ್ಲಿ 86, ಅಥಣಿ ಉಪವಿಭಾಗದಲ್ಲಿ 112, ಬೈಲಹೊಂಗಲ ಉಪ ವಿಬಾಗದಲ್ಲಿ 111, ಗೋಕಾಕ ಉಪ ವಿಭಾಗದಲ್ಲಿ 182 ಮತ್ತು ರಾಮದುರ್ಗ ಉಪ ವಿಭಾಗದಲ್ಲಿ 48 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಂದ 490 ಕೇಸ್ ದಾಖಲಿಸಿ 43600 ರೂ. ದಂಡ ವಸೂಲಿ ಮಾಡಲಾಗಿದೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ 230 ಕೇಸು ದಾಖಲಿಸಲಾಗಿದೆ.
ಓದಿ : ವಿಶೇಷ ಅಧಿವೇಶನ; ವಿಶ್ವಾಸ ಮತಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾಗೆ ಸೋಲು