Advertisement

ಸಂಪೂರ್ಣ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

09:47 AM May 22, 2021 | Team Udayavani |

ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶುಕ್ರವಾರದಿಂದ ಜಾರಿಗೊಳಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಕರ್ಫ್ಯೂ ನಿರೀಕ್ಷಿತ ಪ್ರಮಾಣದ ಫಲಿತಾಂಶ ನೀಡದ ಹಿನ್ನೆಲೆ ಮತ್ತು ಸಂಪೂರ್ಣ ಲಾಕ್‌ಡೌನ್‌ಗೆ ಹೆಚ್ಚುತ್ತಿರುವ ಒತ್ತಡದ ಕಾರಣಕ್ಕೆ ಜಿಲ್ಲಾಡಳಿತ ಮೇ 21 ರ ಶುಕ್ರವಾರ ಬೆಳಗ್ಗೆ 10 ರಿಂದ ಮೇ 24ರ ಸೋಮವಾರ ಬೆಳಗ್ಗೆ 6 ರವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ.

ಮೂರು ದಿನ ಸಂಪೂರ್ಣ ಲಾಕ್‌ಡೌನ್‌ ಕಾರಣಕ್ಕೆ ಜನರು ಶುಕ್ರವಾರ ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳನ್ನು ಮುಗಿ ಬಿದ್ದು ಖರೀದಿಸಿದರು. ಕೆ.ಆರ್‌. ಮಾರ್ಕೆಟ್‌, ಗಡಿಯಾರ ಕಂಬದ ರಸ್ತೆ,ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ,ಮಂಡಿಪೇಟೆ, ವಿನೋಬ ನಗರ 2 ಮತ್ತು 3ನೇ ಮುಖ್ಯ ರಸ್ತೆ, ನಿಟುವಳ್ಳಿ, ವಿದ್ಯಾನಗರ,ಆಂಜನೇಯ ಬಡಾವಣೆ, ತರಳಬಾಳು ಬಡಾವಣೆಹೀಗೆ ಅನೇಕ ಕಡೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನಸಂದಣಿ, ವಾಹನ ಸಂಚಾರ ಹೆಚ್ಚಾಗಿರುವುದು ಸಾಮಾನ್ಯವಾಗಿತ್ತು.

ಇನ್ನು ಮೂರು ದಿನ ತರಕಾರಿ ದೊರೆಯುವುದಿಲ್ಲಎಂದು ಜನರು ತರಕಾರಿ ಖರೀದಿಗೆ ಹೆಚ್ಚಿನ ಗಮನನೀಡಿದರ ಪರಿಣಾಮ ಕೆಲವಾರು ಅಂಗಡಿಗಳಲ್ಲಿಕೆಲ ಹೊತ್ತಿನಲ್ಲೇ ತರಕಾರಿ ಖಾಲಿ ಖಾಲಿ. ಹಾಲಿನಕೇಂದ್ರ ತೆರೆಯಲು ಅವಕಾಶವಿದ್ದರೂ ಕೆಲವಾರು ಕಡೆ ಹಾಲಿನ ಕೇಂದ್ರಗಳು ಬಂದ್‌ ಆಗಿದ್ದವು. ಸೋಮವಾರದವರೆಗೆ ಮಾಂಸ, ಮೀನು ಮಾರಾಟಕ್ಕೆ ಅವಕಾಶ ಇಲ್ಲದ ಕಾರಣಕ್ಕೆ ವಿನೋಬ ನಗರ 2ನೇ ಮುಖ್ಯ ರಸ್ತೆ, ಕೆಟಿಜೆ ನಗರ, ಡಾಂಗೇಪಾರ್ಕ್‌, ಭಾರತ್‌ ಕಾಲೋನಿ, ಹೊಂಡದ ವೃತ್ತ,ಹಗೇದಿಬ್ಬ ವೃತ್ತ ಇತರೆ ಭಾಗದಲ್ಲಿ ಮಾಂಸದ ಅಂಗಡಿಗಳ ಮುಂದೆ ಜನಸಂದಣಿ ಕಂಡು ಬಂತು. ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿದ ನಂತರವೂ ಜನರು ಅಲ್ಲಲ್ಲಿ ಅಂಗಡಿಗಳಿಗೆ ಎಡತಾಕುವುದು ನಡೆಯುತ್ತಲೇ ಇತ್ತು.

ಹೆಚ್ಚು ವಾಹನ, ಜನರ ಸಂಚಾರದಿಂದ ಕೆಲ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಸಹ ಆಗಿತ್ತು.ಅಗತ್ಯ ವಸ್ತುಗಳ ಖರೀದಿ ನೀಡಲಾಗಿದ್ದ ಸಮಯದ ನಂತರ ಪೊಲೀಸರು ಮತ್ತು ನಗರಪಾಲಿಕೆ ಅಧಿಕಾರಿಗಳು ಫೀಲ್ಡ್‌ಗೆ ಇಳಿದರು. ವಿನಾಕಾರಣ ಓಡಾಡದಂತೆ ಸೂಚನೆ ನೀಡಿದರು. ಕೆಲವರಿಗೆ ಎಚ್ಚರಿಕೆ ನೀಡಿದರು. ಪೊಲೀಸರು ಕೆಲವರಿಗೆ ಬಿಸಿ ಮುಟ್ಟಿಸಿದರು.

Advertisement

ದಾವಣಗೆರೆಯ ಪ್ರಮುಖ ವೃತ್ತ, ರಸ್ತೆಗಳ ಬಂದ್‌ ಮಾಡಲಾಗಿತ್ತು. ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಲಾಕ್‌ಡೌನ್‌ ನಡುವೆಯೂ ಸಂಚರಿಸುತ್ತಿದ್ದ ವಾಹನ ಸವಾರರ ತಡೆದು, ಕಾರಣ ಕೇಳಿದರು. ಸಕಾರಣ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು.ಅನೇಕ ವಾಹನಗಳನ್ನು ವಶಕ್ಕೆ ಪಡೆದು, ಜಿಲ್ಲಾಕವಾಯತ್‌ ಮೈದಾನಕ್ಕೆ ರವಾನಿಸಿದರು. ಔಷಧಿ ಅಂಗಡಿ, ಆಸ್ಪತ್ರೆಗಳನ್ನ ಹೊರತುಪಡಿಸಿದರೆದಿನಸಿ, ತರಕಾರಿ, ಎಲೆಕ್ಟ್ರಿಕಲ್‌, ಹೋಟೆಲ್‌, ಗ್ಯಾರೇಜ್‌, ಸಲೂನ್‌, ಬ್ಯೂಟಿಪಾರ್ಲರ್‌, ಸ್ಪಾ,ವಾಣಿಜ್ಯ ಸಂಕೀರ್ಣ, ಆಟೋ ಸಂಚಾರ ಎಲ್ಲವೂ ಬಂದ್‌ ಆಗಿದ್ದವು. ಹೋಟೆಲ್‌ಗ‌ಳಲ್ಲಿ ಆನ್‌ಲೈನ್‌ಪಾರ್ಸೆಲ್‌, ಕೃಷಿ ಚಟುವಟಿಕೆಗೆ ಮಾತ್ರ ಅವಕಾಶ ಇತ್ತು. ಜನ, ವಾಹನ ಸಂಚಾರ ಇಲ್ಲದೆ ಪ್ರಮುಖ ರಸ್ತೆ, ವೃತ್ತಗಳು ಬಿಕೋ ಎನ್ನುತ್ತಿದ್ದವು. ಸಮಯಕಳೆಯುತ್ತಿದ್ದಂತೆ ವಾಣಿಜ್ಯ ನಗರಿ ದಾವಣಗೆರೆ ಅಕ್ಷರಶಃ ಸ್ತಬ್ದವಾಯಿತು. ಸಂಪೂರ್ಣ ಲಾಕ್‌ಡೌನ್‌ ನ ಮೊದಲ ದಿನ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next