Advertisement
ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಅವಧಿಯಲ್ಲಿ ತೆರೆದಿದ್ದ ಅಂಗಡಿಗಳಿಂದ ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. ಸೂಪರ್ ಮಾರುಕಟ್ಟೆ, ಸುಭಾಸ ರಸ್ತೆ ಸೇರಿದಂತೆ ವಿವಿದೆಡೆ ತೆರೆದಿದ್ದ ಅಂಗಡಿಗಳಿಂದ ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಜನರು ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡಿದರು. ಇನ್ನೂ ಹೊಸ ಎಪಿಎಂಸಿ ಆವರಣಕ್ಕೆ ಇಡೀ ಕಾಯಿಪಲ್ಯ ಮಾರುಕಟ್ಟೆ ಸ್ಥಳಾಂತರ ಮಾಡಿದ್ದು, ಇಲ್ಲಿ ಬೆಳಿಗ್ಗೆ 10 ಗಂಟೆವರೆಗೆ ಜನರು ಕಾಯಿಪಲ್ಯ ಖರೀದಿಸಿದರು. ಇದಾದ ಬಳಿಕ ಪೊಲೀಸರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದರೆ, ಅಗತ್ಯ ವಸ್ತುಗಳ ಅಂಗಡಿಗಳನ್ನು ಮುಚ್ಚಿಸಿದರು.
Related Articles
Advertisement