Advertisement

ಗೋವಾ: ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್,ಪಬ್ ತೆರೆಯಲು ಅವಕಾಶ

12:31 PM Jul 04, 2021 | Team Udayavani |

ಪಣಜಿ: ರಾಜ್ಯದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‍ಗಳಲ್ಲಿ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಪರವಾನಗಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ರಾಜ್ಯದಲ್ಲಿ ಈ ವಾರದಿಂದಲೇ ಹೋಟೆಲ್ ರೆಸ್ಟೊರೆಂಟ್ ಆರಂಭಕ್ಕೆ ಪರವಾನಗಿ ಲಭಿಸುವ ಸಾಧ್ಯತೆಯಿದೆ.

Advertisement

ರಾಜ್ಯದಲ್ಲಿ ಕರ್ಫ್ಯೂಜಾರಿಯಲ್ಲಿದ್ದರೂ ಕೂಡ ಕೆಲ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಆದರೆ ಸಿನೆಮಾ ಥಿಯೇಟರ್, ಕ್ಯಾಸಿನೊ ಇವುಗಳು ಮಾತ್ರ ಬಂದ್ ಆಗಿಯೆ ಉಳಿಯಲಿದೆ. ರಾಜ್ಯದಲ್ಲಿ ಹೋಟೆಲ್,ರೆಸ್ಟೊರೆಂಟ್ ಮಾಲೀಕರು ಹೋಟೆಲ್ ರೆಸ್ಟೊರೆಂಟ್ ಆರಂಭಿಸಲು ಪರವಾನಗಿ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾರೆ. ಶೇ 50 ಗ್ರಾಹಕರೊಂದಿಗೆ ಹೋಟೆಲ್ ರೆಸ್ಟೊರೆಂಟ್ ಆರಂಭಕ್ಕೆ ಪರವಾನಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ನಾವು ಮತ್ತೆ ಕಾಂಗ್ರೆಸ್ ಗೆ ಬರುತ್ತೇವೆ ಎಂಬ ಆತಂಕ ಸಿದ್ದರಾಮಯ್ಯಗೆ ಬೇಡ: ಎಚ್. ವಿಶ್ವನಾಥ್

ರಾಜ್ಯದಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದಂತೆಯೇ ಹಂತ ಹಂತವಾಗಿ ನಿರ್ಬಂಧ ಸಡಿಲಿಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next