Advertisement

Watch Live: ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಕಂಟಿನ್ಯೂ: ಪ್ರಧಾನಿ ನರೇಂದ್ರ ಮೋದಿ

09:08 AM Apr 15, 2020 | Nagendra Trasi |

ಮಾರಣಾಂತಿಕ ಕೋವಿಡ್ 19 ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಂಗಳವಾರ ಅಭಿನಂದನೆ ಸಲ್ಲಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಜನರಿಗೆ ತುಂಬಾ ಕಷ್ಟವಾಗಿದೆ. ಮುಖ್ಯವಾಗಿ ವಲಸೆ, ದಿನಗೂಲಿ ಕಾರ್ಮಿಕರಿಗೆ. ಭಾರತ ಸಕಾಲದಲ್ಲಿ ಲಾಕ್ ಡೌನ್ ನಿರ್ಧಾರ ಕೈಗೊಂಡಿದ್ದರಿಂದ ಕೋವಿಡ್ ಅತೀ ಹೆಚ್ಚು ಹರಡದಂತೆ ತಡೆಯಲು ಯಶಸ್ವಿಯಾಗಿದ್ದೇವೆ.

Advertisement

ಜನರ ಕಠಿಣ ಹೋರಾಟದ ಪ್ರತಿಫಲದಿಂದ ದೇಶವನ್ನು ರಕ್ಷಿಸಿದ್ದೀರಿ. ನನಗೂ ತಿಳಿದಿದೆ ನೀವೆಷ್ಟು ಕಷ್ಟ ಎದುರಿಸಿದ್ದೀರಿ ಎಂಬುದು. ನಿಮ್ಮ ತ್ಯಾಗಕ್ಕೆ ನಾನು ತಲೆಬಾಗಿ ಗೌರವಿಸುತ್ತೇವೆ. ಏಪ್ರಿಲ್ 20ರವರೆಗೆ ಕೋವಿಡ್ ಬಗ್ಗೆ ಸಂಪೂರ್ಣ ಅವಲೋಕಿಸುತ್ತೇವೆ. ಬಳಿಕ ಕೋವಿಡ್ ವಿರುದ್ಧದ ಹೋರಾಟ ಮತ್ತಷ್ಟು ಕಠಿಣಗೊಳಿಸುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಏ.14ವರೆಗಿನ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಕೋವಿಡ್ ಕುರಿತು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ವೀಕ್ಷಿಸಿ….

Advertisement

Udayavani is now on Telegram. Click here to join our channel and stay updated with the latest news.

Next