Advertisement

ಲಾಕ್‌ಡೌನ್‌ ಒಂದು, ಆಟ ಹಲವು…

04:19 AM Jun 10, 2020 | Team Udayavani |

ಜರ್ಮನಿಯ ಮ್ಯುನಿಕ್‌ನಲ್ಲಿರುವ ಮೊಮ್ಮಗ ಪ್ರಣವ್‌ಗೆ ಐದು ವರ್ಷ. ಅಲ್ಲಿಯೂ ದೊಡ್ಡ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಕಿಂಡರ್‌ ಗಾರ್ಡನ್‌ನ ಪ್ರಣವನಿಗೆ ರಜೆ. ತಂಟೆ- ತುಂಟಾಟಗಳ ಜೊತೆಗೆ ಸಣ್ಣಪುಟ್ಟ ಕೆಲಸವನ್ನೂ ಮಾಡುತ್ತಿದ್ದಾನೆ ಅವನು. ಬಟ್ಟೆಗಳನ್ನು ಮಡಿಸುವುದು, ಪುಸ್ತಕಗಳನ್ನು ಜೋಡಿಸುವುದು, ಶ್ಲೋಕ- ಹಾಡು ಹೇಳುತ್ತಾ, ಡ್ಯಾನ್ಸ್‌ ಮಾಡುವುದು… ಅಮ್ಮ ವಿಶೇಷ ತಿಂಡಿ ಮಾಡಿದಾಗ, ದೇವರ ಮುಂದಿಟ್ಟು “ನೀನೂ ತಿನ್ನು’ ಎನ್ನುತ್ತಾನೆ.  ಸ್ನಾನದ ನಂತರ “ಹನುಮಾನ್‌ ಚಾಲೀಸ್‌’ ಹೇಳಿ, ಕೊರೊನಾ ಹೋಗಲಪ್ಪಾ ಎಂದು ಬೇಡಲು ಮರೆಯುವುದಿಲ್ಲ. ತನ್ನ ನೆಚ್ಚಿನ ಟೆಡ್ಡಿಗೆ, ಸಾಮಾಜಿಕ ಅಂತರದ ಮಹತ್ವದ ಪಾಠವನ್ನೂ ಮಾಡುತ್ತಿದ್ದಾನೆ…

Advertisement

ಫೋಟೋ ಕಳಿಸಿದವರು: ಎಸ್‌.ಪಿ. ವಿಜಯಲಕ್ಷ್ಮೀ, ದೆಹಲಿ

Advertisement

Udayavani is now on Telegram. Click here to join our channel and stay updated with the latest news.

Next