ತುಮಕೂರು: 2020-21ನೇ ಸಾಲಿನಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ಯಲ್ಲಿ ಲಾಕ್‌ಡೌನ್ ಆದ ಪರಿಣಾಮ ಜಿಲ್ಲೆಯಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದ ಸಮಯದಲ್ಲಿ ನರೇಗಾ ಸಂಜೀವಿನಿಯಾಗಿ ಕೈತುಂಬಾ ಕೆಲಸವನ್ನು ನೀಡಿ ಧೈರ್ಯ ತುಂಬಿದೆ. ಕೊರಟಗೆರೆ, ಮಧುಗಿರಿ, ಶಿರಾ ಸೇರಿ ದಂತೆ ಜಿಲ್ಲೆಯ ತಾಲೂಕುಗಳಲ್ಲಿ ಜಿಪಂ ವತಿಯಿಂದ ನರೇಗಾ ಯೋಜನೆಯಡಿ ಯಲ್ಲಿ ದನದ ಕೊಟ್ಟಿಗೆ ನಿರ್ಮಾಣ, ಕೃಷಿಹೊಂಡ, ಮನೆ ನಿರ್ಮಾಣ, ಗೋಕಟ್ಟೆ ಅಭಿವೃದಿಟಛಿ, ಕೆರೆ-ಕಾಲುವೆಗಳ ಹೂಳೆತ್ತು ವುದು,
ರಸ್ತೆ ಬದಿಗಳಲ್ಲಿ ಸಸಿ ನೆಡುವುದು ಹೀಗೆ ಹಲವಾರು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ದುಡಿಯುವ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಮಧುಗಿರಿ ತಾಲೂಕಿನಲ್ಲಿ ಮೇ ತಿಂಗಳ ಮೊದಲ ವಾರದ ಅಂತ್ಯಕ್ಕೆ 32623 ಮಾನವ ದಿನಗಳನ್ನು ನರೇಗಾದಡಿ ಸೃಜನೆ ಮಾಡಲಾಗಿದೆ. ಮಧುಗಿರಿ ತಾಲೂಕಿನಲ್ಲಿ 39 ಗ್ರಾಪಂಗಳ ವ್ಯಾಪ್ತಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ದನದ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡ, ಮನೆ ನಿರ್ಮಾಣ, ಸಮುದಾಯ ಕಾರ್ಯಕ್ರಮಗಳಾದ ಗೋಕಟ್ಟೆ ಅಭಿವೃದಿ ಸೇರಿದಂತೆ 159 ಕಾಮಗಾರಿ ಗಳು ಚಾಲ್ತಿ ಯಲ್ಲಿವೆ.
ಕೊರಟಗೆರೆ ತಾಲೂಕಿನ ಪ್ರಸಕ್ತ ಸಾಲಿನಲ್ಲಿ ಮೇ ಮೊದಲ ವಾರದೊಳಗೆ 23,039 ಮಾನವ ದಿನಗಳನ್ನು ಸೃಜನೆ ಮಾಡಿ 29 ಗ್ರಾಪಂ ವ್ಯಾಪ್ತಿಯಲ್ಲಿ 20 ದನದ ಕೊಟ್ಟಿಗೆ ನಿರ್ಮಾಣ, 12 ಕೃಷಿ ಹೊಂಡ ಹಾಗೂ 68 ಮನೆ ಕಾಮಗಾರಿ ಗಳು ಪ್ರಗತಿಯಲ್ಲಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಳೀಯ ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ದೊರೆತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಪಂಯ ಗಟ್ಲಳ್ಳಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಸಸಿ ನೆಡುವ ಕಾಮಗಾರಿ ಕೈಗೊಳ್ಳಲಾಗಿದೆ.
ಇದರಿಂದ 15 ಮಂದಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆತು ಉತ್ತಮ ಜೀವನ ಮುಂದುವರಿಸಲು ಅನುಕೂಲವಾಗಿದೆ. ಶಿರಾ ತಾಲೂಕಿನಲ್ಲಿ ಸಂಕಷ್ಟದಲ್ಲಿದ್ದ ಕೂಲಿ ಕಾರ್ಮಿಕರಿಗೆ ನರೇಗಾ ವರದಾನವಾಗಿದೆ. ಈ ಬಗ್ಗೆ ಜಿಪಂ ಸಿಇಒ ಶುಭಾ ಕಲ್ಯಾಣ್ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕಾಮಗಾರಿ ಕೈಗೊಂಡು ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ ಎಂದರು.
ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಾಗ ಕೂಲಿ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಕೆಲಸದ ಸಮಯ ದಲ್ಲಿ ಸೂಕ್ತ ನೆರಳಿನ ವ್ಯವಸ್ಥೆ, ಕುಡಿವ ನೀರು ಒದಗಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದರ ಬಗ್ಗೆ ಅವರಿಗೆ ಅರಿವು ಮೂಡಿಸಲಾಗಿದೆ.
-ಶುಭಾ ಕಲ್ಯಾಣ್, ಜಿಪಂ ಸಿಇಒ