Advertisement

ಲಾಕ್‌ಡೌನ್‌ ಮದ್ಯ ಪಾರ್ಟಿ; ವಿಡಿಯೋ-ಚಿತ್ರಗಳು ವೈರಲ್‌

09:35 AM May 18, 2020 | Suhan S |

ಧಾರವಾಡ: ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿಯೇ ನಿಯಮ ಉಲ್ಲಂಘಿಸಿ ನಗರದ ಕೆಸಿ ಪಾರ್ಕ್‌ ಬಳಿಯ ಪ್ರವಾಸಿ ಮಂದಿರದಲ್ಲಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Advertisement

ಈ ಕುರಿತು ಫೇಸ್‌ಬುಕ್‌ ಹಾಗವಾಟ್ಸ್‌ಆ್ಯಪ್‌ಗ್ಳಲ್ಲಿ ಹಸಿಬಿಸಿ ಸುದ್ದಿಗಳು ಹರಿದಾಡುತ್ತಿದ್ದು, ಬಿಜೆಪಿ ಶಾಸಕರೊಬ್ಬರ ಹತ್ತಾರು ಬೆಂಬಲಿಗರು ಧಾರವಾಡ ಕೆಸಿ ಪಾರ್ಕ್‌ ಬಳಿಯಿರುವ ಹಳೆಯ ಪ್ರವಾಸಿ ಮಂದಿರದಲ್ಲಿ ಮೂರ್‍ನಾಲ್ಕು ದಿನಗಳ ಕೆಳಗೆ ಈ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಪಾರ್ಟಿ ಮಾಡಿದ ನಂತರ ರೂಮ್‌ನಲ್ಲಿ ಎಣ್ಣೆ ಬಾಟಲ್‌ಗ‌ಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಅದರ ಪೋಟೋ ಹಾಗೂ ವಿಡಿಯೋ ಇದೀಗ ವೈರಲ್‌ ಆಗಿದೆ. ಪಾರ್ಟಿ ಮಾಡಿದ ಕುರಿತು ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ತಪಾಸಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ದೂರು ನೀಡಬೇಕು. ಅಲ್ಲದೆ, ಕೋಣೆ ನೀಡಿದ ಸಿಬ್ಬಂದಿ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next