Advertisement
ಇಲ್ಲಿಯ ಶ್ರೀಮಠದ ದಾಸೋಹಭವನದಲ್ಲಿ ಇಳಕಲ್ಲ ವರ್ತಕರ ಸಂಘ (ಛೇಂಬರ್ ಆಫ್ ಕಾಮರ್) ಆಯೋಜಿಸಿದ ಚರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ, ಮುಧೋಳ ಹಾಗೂ ಜಮಖಂಡಿಗೆ ಸೀಮಿತವಾಗಿದ್ದ ಈ ಭೀಕರ ಮಹಾಮಾರಿ ಈಗ ಬಾದಾಮಿ ತಾಲೂಕಿಗೂ ಆವರಿಸಿಕೊಂಡಿರುವುದರಿಂದ ನಮ್ಮ ಜಿಲ್ಲೆ ಅಪಾಯಕ್ಕೆ ಸಿಲುಕಿದಂತಾಗಿದೆ. ಇದಲ್ಲದೇ ಬೇರೆಡೆ ದುಡಿಯಲು ಹೋಗಿದ್ದ ಸುಮಾರು 1700 ಕಾರ್ಮಿಕರು ಜಿಲ್ಲೆಗೆ ಬಂದಿದ್ದಾರೆ. ಅವರ ಮೇಲೂ ನಿಗಾ ಇಡಬೇಕು. ವ್ಯಾಪಾರ ಪ್ರಾರಂಭಿಸಲು ಅವಕಾಶ ನೀಡಿದರೇ ಸುತ್ತಮುತ್ತಲಿನ ಗ್ರಾಮಗಳ ಕಾರ್ಮಿಕರು ಬರುವುದರಿಂದ ನಾವೇ ಕೊರೊನಾ ಹರಡಲು ಅವಕಾಶ ನೀಡಿದಂತಾಗುತ್ತದೆ. ಮೇ ತಿಂಗಳು ನಮಗೆ ನಿರ್ಣಾಯಕ ಹಂತವಾಗಿದ್ದು, ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. ಅದಕ್ಕಾಗಿ ಲಾಕ್‌ಡೌನ್ ಸಡಿಲಿಕೆ ಸಾಧ್ಯವಿಲ್ಲ. ನಂತರ ಪರಿಸ್ಥಿತಿ ನೋಡಿಕೊಂಡು ಮುಂದುವರಿಯುವ ಅಭಿಪ್ರಾಯವನ್ನು ಜಿಲ್ಲಾಧಿಕಾರಿಗಳು ಹೊಂದಿದ್ದಾರೆ ಎಂದು ಹೇಳಿದರು.
Advertisement
ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯ
02:25 PM May 07, 2020 | Suhan S |
Advertisement
Udayavani is now on Telegram. Click here to join our channel and stay updated with the latest news.