ಸಿಡ್ನಿ: ಪೆಸಿಫಿಕ್ ದ್ವೀಪ ದೇಶಗಳಾದ ಕಿರಿಬಾಟಿ ಮತ್ತು ಸಮೋಆ ಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿಗೆ ಸೆಡ್ಡು ಹೊಡೆದು ನಿಂತಿದ್ದ ದೇಶಗಳಲ್ಲೀಗ ಲಾಕ್ ಡೌನ್ ಜಾರಿಗೊಳಿಸಲಾಗಿದೆ.
ಕೋವಿಡ್ ಆರಂಭವಾದಾಗಿನಿಂದ ಕಳೆದ ತಿಂಗಳವರೆಗೆ ಕಿರಿಬಾಟಿ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿರಲಿಲ್ಲ. ಮತ್ತು ಸಮುಆ ದಲ್ಲಿ ಎರಡು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೆ ಫಿಜಿಯಿಂದ ಕಿರಿಬಾಟಿಗೆ ಬಂದ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣ ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಜನರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದಾರೆ. ವಿಮಾನಯಾನ ನಿರ್ಬಂಧಗಳು ತೆರವಾದ ಬಳಿಕ ಕಿರಿಬಾಟಿಗೆ ಬಂದ ಮೊದಲು ವಿಮಾನ ಇದಾಗಿತ್ತು.
ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ!: ಸಲ್ಮಾನ್ ಖಾನ್ ಮೇಲೆ ಆರೋಪ
ಸಮೋಆ ದಲ್ಲಿ ಬ್ರಿಸ್ಬೇನ್‌ನಿಂದ ಬಂದ ವಿಮಾನ ಪ್ರಯಾಣಿಕರಿಗೆ ಸಂಬಂಧಿಸಿದ ಪ್ರಕರಣಗಳು 15 ಕ್ಕೆ ಏರಿಕೆಯಾಗಿದೆ. ಹೀಗಾಗಿ ನಿರ್ಬಂಧನೆಗಳನ್ನು ಹೇರಲಾಗಿದೆ ಎಂದು ಪ್ರಧಾನ ಮಂತ್ರಿ ಫಿಯಾಮ್ ನವೋಮಿ ಮಾತಾಫಾ ಹೇಳಿದ್ದಾರೆ.
ಕಿರಿಬಾಟಿಯ ಜನಸಂಖ್ಯೆ (120,000) ಯ ಅರ್ಧದಷ್ಟು ಮಂದಿ ರಾಜಧಾನಿಯಲ್ಲಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಜನರು ಮನೆಯಲ್ಲಿಯೇ ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿಯಮಗಳ ಪ್ರಕಾರ ಆಹಾರ ಮತ್ತು ಔಷಧಿ ಹೊರತು ಪಡಿಸಿ ಬೇರೆ ಯಾವುದೇ ಕೆಲಸಗಳಿಗೆ ಜನರು ಮನೆಯಿಂದ ಹೊರಬರುವಂತಿಲ್ಲ.