Advertisement

ಲಾಕ್ ಡೌನ್ ಗೆ ಕಾಫಿನಾಡು ಸ್ತಬ್ಧ, ಜನಜೀವನ ಸ್ಥಗಿತ: ರಸ್ತೆಗಿಳಿದರೆ ಲಾಠಿ ಏಟು

09:35 AM May 10, 2021 | Team Udayavani |

ಚಿಕ್ಕಮಗಳೂರು: ಕೋವಿಡ್ ಸೋಂಕಿನ ಚೈನ್ ಬ್ರೇಕ್ ಮಾಡಲು ಇಂದಿನಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಲಾಕ್ ಡೌನ್ ಕಾರಣದಿಂದ  ಜನಜೀವನ ಸ್ತಗಿತಗೊಂಡಿದೆ. ನಗರ, ಪಟ್ಟಣಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ನಡೆದು ಬರುತ್ತಿರುವ ದೃಶ್ಯಗಳು ಕಂಡುಬಂತು. ವಾಹನಗಳಲ್ಲಿ ಬಂದವರಿಗೆ ಪೊಲೀಸರಿಂದ ಕಾನೂನು ಕ್ರಮ ಕೈಗೊಂಡರು.

ಪೊಲೀಸರು ಧ್ವನಿವರ್ದಕಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಿನಾಕರಣ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡುತ್ತಿದ್ದು, ಸುಮ್ಮನೆ ತಿರುಗಾಡುವವರಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ ನಗರ ಪಟ್ಟಣಗಳಲ್ಲಿ ಜನ ಸಂಚಾರ ವಿರಳವಾಗಿದ್ದು, ರಸ್ತೆಗಳು ಬಿಕೊ ಎನ್ನುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next