Advertisement

ಜಿಲ್ಲೆಯಲ್ಲಿ 21ರವರೆಗೆ ಲಾಕ್‌ಡೌನ್‌ ವಿಸ್ತರಣೆ

06:17 PM Jun 11, 2021 | Team Udayavani |

ಮೈಸೂರು: ಮೈಸೂರಿನಲ್ಲಿ ಕೊರೊನಾ ಪಾಸಿಟಿವ್‌ ರೇಟ್‌ಹೆಚ್ಚಿರುವುದರಿಂದ ಜೂ.21ರವರೆಗೆ ಒಂದು ವಾರ ಕಾಲ ಲಾಕ್‌ಡೌನ್‌ ಮುಂದುವರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಲಾಕ್‌ಡೌನ್‌ ವಿಸ್ತರಣೆ ಸಂಬಂಧಶಾಸಕರು ಮತ್ತು ಸಂಸದರ ಹಾಗೂ ಅಧಿಕಾರಿಗಳೊಂದಿಗೆ ಸಭೆನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಸೂರಲ್ಲಿ ಮಂಗಳವಾರ ಪಾಸಿಟಿವ್‌ ರೇಟ್‌ ಶೇ .27 ಇತ್ತುನಂತರ 20ಕ್ಕೆ ಬಂದಿದೆ. ಅನ್‌ಲಾಕ್‌ ಮಾಡಬೇಕೆಂದರೆ ಪಾಸಿಟಿವ್‌ರೇಟ್‌ ಶೇ.5ಕ್ಕಿಂತ ಕಡಿಮೆ ಇರಬೇಕು. ಹೀಗಾಗಿ ಜೂನ್‌21ರವರೆಗೆ ಲಾಕ್‌ಡೌನ್‌ ಮುಂದುವರಿಸುವ ತೀರ್ಮಾನಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣವನ್ನು ತಗ್ಗಿಸುವನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಬೇಕಿದೆ. ಅದಕ್ಕಾಗಿಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜನಪ್ರತಿನಿಧಿಗಳಅಭಿಪ್ರಾಯ ಸಂಗ್ರಹಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು.ಲಾಕ್‌ಡೌನ್‌ ಮುಂದುವರಿದ ಭಾಗದಲ್ಲಿ ಯಾವುದಕ್ಕೆ ವಿನಾಯಿತಿಕೊಡಬೇಕು ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿಆದೇಶ ಹೊರಡಿಸಲಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹೆಚ್ಚಿರುವುದರಿಂದಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳು ಒಂದೇಕಾರಿನಲ್ಲಿ ಹೋಗಿ ಎಲ್ಲಾ ತಾಲೂಕಿನಲ್ಲಿರುವ ಆಸ್ಪತ್ರೆ, ಕೋವಿಡ್‌ಕೇರ್‌ ಸೆಂಟರ್‌ಗಳಿಗೆ ಭೇಟಿಕೊಟ್ಟು ಪರಿಸ್ಥಿತಿ ಅವಲೋಕನಮಾಡುವಂತೆ ಸೂಚಿಸಿದ್ದೇನೆ. ಒಂದೆರಡು ದಿನಗಳಲ್ಲಿ ಈ ಕೆಲಸಆಗಲಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next