Advertisement
ನಗರದ ಅಂರಸನಹಳ್ಳಿ ಹೂ, ಹಣ್ಣು ತರಕಾರಿ ಮಾರುಕಟ್ಟೆ ಶ್ರೀ ಸಿದ್ಧಿವಿನಾಯಕ ತರಕಾರಿ ಮಾರುಕಟ್ಟೆಹೊರ ಪೇಟೆ ತರಕಾರಿ ಮಾರುಕಟ್ಟೆಗಳಲ್ಲಿ ಬೆಳಗ್ಗೆ 6ಗಂಟೆಯಿಂದ 10ರವರೆಗೆ ಹೂ,ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶವಿದ್ದು, ಬೆಳಗ್ಗೆ 10 ಗಂಟೆಯ ನಂತರ ಮಾರಾಟಕ್ಕೆ ಅವಕಾಶವಿಲ್ಲ. ಇದರಿಂದ ಬೆಳಗಿನ ಜಾವವೇ ಎದ್ದು ತರಕಾರಿ ತೆಗೆದುಕೊಂಡು ಮಾರುಕಟ್ಟೆಗೆ ಬಂದಿ ರುವ ರೈತರಿಗೆ ಸಂಕಷ್ಟ ಎದುರಾಗಿದೆ. ಮಾರುಕಟ್ಟೆಗೆ ಬಂದಿರುವ ಹೂವು ಕೇಳುವವರಿಲ್ಲ, ತರಕಾರಿ ಕೊಳ್ಳುವ ವರಿಲ್ಲ ಮಾರುಕಟ್ಟೆಗೆ ಹೂ, ತರಕಾರಿ ತಂದಿದ್ದ ರೈತರು ಪರದಾಟ ನಡೆಸಿದ ದೃಶ್ಯ ಶುಕ್ರವಾರ ಕಂಡು ಬಂದಿತು.
Related Articles
Advertisement
ಸಮಯ ತೀರಾ ಕಡಿಮೆ ಇದೆ. ದೂರದ ಊರುಗಳಿಂದ ಹೊತ್ತು ತಂದಿದ್ದ ತರಕಾರಿಯನ್ನು ರಸ್ತೆ ಬದಿಯಲ್ಲಿ ಮಾರಾಟಕ್ಕೆ ಮುಂದಾದ ರೈತರಿಗೆ ಅವಕಾಶ ನೀಡದೆ ಪೊಲೀ ಸರು ತರಕಾರರು ತೆಗೆದಿದ್ದರು. ಇದಕ್ಕೆ ತರಕಾರಿ ಬೆಳೆದ ರೈತರ ನೋವು ಹೇಳತೀರದಾಗಿದೆ. ತರಕಾರಿ ಯನ್ನು ಮಾರುಕಟ್ಟೆಗೆ ತಂದಿರುವ ರೈತರು ಆಡಳಿತ ನಡೆಸುವ ಅಧಿಕಾರಿಗಳು ಮತ್ತು ಕರ್ತವ್ಯ ನಿರತ ಪೊಲೀಸರ ಕೆಲ ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಹೂವಿನ ಬೆಲೆ ಕುಸಿತ: ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಿರೀಕ್ಷೆಯಂತೆ ಕಂಡುಬರಲಿಲ್ಲ. ಹೂವಿನ ದರ ಪಾತಾಳಕ ಕ್ಕೆ ಕುಸಿದಿದ್ದರಿಂದ ಹೂವು ಬೆಳೆಗಾ ರರುಬೇಸರ ವ್ಯಕ್ತಪಡಿಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಊರುಗಳಿಗೆ ತೆರಳಿದರು. ಕನಕಾಂಬರ, ಕಾಕಡ, ಸೇವಂತಿಗೆ ಸೇರಿದಂತೆ ಇನ್ನಿತರೆ ಹೂವುಗಳ ಸಂಪೂರ್ಣ ಕುಸಿದಿದ್ದು, ಹೂ ಕೇಳುವವರೇ ಇಲ್ಲ 10 ರೂ.ಗೆ ಮಾರು ಎಂದರೂ ಬೇಡ ಎನ್ನುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಯಾವುದೇ
ದೇವತಾ ಕಾರ್ಯಗಳು, ಸಭೆ, ಸಮಾರಂಭಗಳು ನಡೆಯದಿರು ವುದು ಹೂವಿನ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಹಾಲಿನ ಮತ್ತು ಹಾಲಿನ ಉತ್ಪನ್ನಗ ಳಿಗೆ ರಾತ್ರಿವರೆಗೂ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣುಗಳ ಮಾರಾಟಕ್ಕೆ ಸಾಮಾಜಿಕ ಅಂತರದಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು. ಈ ಬಗ ಜಿಲ್ಲಾಡಳಿತ, ಜಿಲ್ಲಾ ಸಚಿವರು ಗಮನ ಹರಿಸಬೇಕು ಎಂದು ರೈತರು, ಮಂಡಿ ವರ್ತಕರು ಆಗ್ರಹಿಸಿದ್ದಾರೆ.
ಲಾಕ್‌ಡೌನ್‌ನಿಂದ ಅತಂತ್ರ :
ಜಿಲ್ಲೆಯಲ್ಲಿ 30,009 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನಬೆಳೆಗಳನ್ನು ರೈತರು ಬೆಳೆಯುತ್ತಾರೆ. 7,057 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ, 2,047 ಹೆಕ್ಟೇರ್ ಪ್ರದೇಶ ದಲ್ಲಿ ಹೂವಿನ ಬೆಳೆಗಳನ್ನು ರೈತರುಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಟೊಮೇಟೊ,ಬೆಂಡೆ ಕಾಯಿ, ಗೆಣಸು, ಸೌತೇಕಾಯಿ, ಕ್ಯಾರೇಟ್, ಹುರಳಿ ಕಾಯಿ, ಮೆಣಸಿನಕಾಯಿ, ಹಾಗಲಕಾಯಿ,ಸೊಪ್ಪು ಸೇರಿದಂತೆ ವಿವಿಧ ಬಗೆಯ ತರಕಾರಿಯನ್ನು ಜಿಲ್ಲೆಯ ರೈತರು ಬೆಳೆಯುತ್ತಾರೆ.ತುಮಕೂರು ಸುತ್ತ ಮುತ್ತ ಹೆಚ್ಚು ತರಕಾರಿ ಸೊಪ್ಪು ಬೆಳೆಯುವ ರೈತರಿದ್ದಾರೆ. ಅವರ ಬದುಕು ಲಾಕ್ ಡೌನ್‌ನಿಂದ ಅತಂತ್ರವಾಗಿದೆ.
ಜಿಲ್ಲಾಡಳಿತ ಗಮನ ಹರಿಸಲಿ :
ನಾವು ಲಕ್ಷಾಂತರ ರೂ. ಖರ್ಚುಮಾಡಿ ತರಕಾರಿ ಬೆಳೆದಿದ್ದೇವೆ. ಲಾಕ್‌ಡೌನ್‌ನಿಂದ ಬೆಳೆದ ತರಕಾರಿ ಬೆಳೆ ಮಾರಲು ಅವಕಾಶ ವಿಲ್ಲ. ಸರ್ಕಾರ ಇದಕ್ಕೆ ಅನುಕೂಲ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಹಾಲು ಮಾರಾಟಕ್ಕೆ ಅವಕಾಶ ನೀಡಿರುವಂತೆ ಹೂವು, ತರಕಾರಿ ಹಣ್ಣು ಮಾರಾಟ ಮಾಡಲು ಅವಕಾಶ ಕಲ್ಪಿಸಲಿ ಎನ್ನುತ್ತಾರೆ ರೈತ ಶ್ರೀನಿವಾಸ್.
ನಂದಿನಿ ಹಾಲಿನ ಮಳಿಗೆಯಲ್ಲಿ ಹಾಲಿನ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 8 ಗಂಟೆಯವರೆಗೆ ಸರ್ಕಾರ ಅವಕಾಶ ನೀಡಿದೆ. ಅದೇ ರೀತಿ ನಮ್ಮ ರೈತರುಮಾರುಕಟ್ಟೆಗೆ ತರುವ ತರಕಾರಿ, ಹೂವು,ಹಣ್ಣು ಮಾರಿಕೊಳ್ಳಲು ಅವಕಾಶಕಲ್ಪಿಸಬೇಕು. ಇದರಿಂದ ತರಕಾರಿ ಬೆಳೆದಿರುವ ರೈತರಿಗೆ ಹೆಚ್ಚು ಅನುಕೂಲ ಆಗುತ್ತದೆ. – ಶಂಕರಪ್ಪ, ರೈತ ಮುಖಂಡ
ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ತರಕಾರಿಬೆಳೆದಿರುವ ರೈತರಿಗೆತೊಂದರೆ ಉಂಟಾಗುತ್ತಿದೆ. ಆದ್ದರಿಂದ ಅವರಿಗೆ ತೊಂದರೆ ಆಗಬಾರದು ಎಂದು ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ 0816-2970310ತೆರೆದಿದ್ದು, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುವುದು.ಇತರೆ ಮಾಹಿತಿಗೆ ರೂತರು ಸಂಪರ್ಕಿಸಬಹುದು.– ಬಿ.ರಘು, ಉಪನಿರ್ದೇಶಕ, ತೊಟಗಾರಿಕೆ ಇಲಾಖೆ
– ಚಿ.ನಿ.ಪುರುಷೋತ್ತಮ್.