Advertisement

ಲಾಕ್‌ಡೌನ್‌ ಇದ್ದರೂ ಅನಗತ್ಯ ತಿರುಗಾಟ : ಕುಂದಾಪುರ ಉಪ ವಿಭಾಗದಲ್ಲಿ 41 ಬೈಕ್‌, 5 ಕಾರು ವಶ

05:32 PM Apr 11, 2020 | sudhir |

ಕುಂದಾಪುರ: ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶವ್ಯಾಪಿ ಲಾಕ್‌ಡೌನ್‌ ಆದೇಶ ಹೊರಡಿಸಲಾಗಿದ್ದರೂ, ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪ ವಿಭಾಗದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈವರೆಗೆ 41 ದ್ವಿಚಕ್ರ ವಾಹನ, 5 ಕಾರು ಹಾಗೂ 1 ಆಟೋರಿಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಆದೇಶ ಉಲ್ಲಂಘನೆ ಹಿನ್ನೆಲೆ
ಅಗತ್ಯ ವಸ್ತುಗಳ ಖರೀದಿಗೆ ಉಡುಪಿ ಜಿಲ್ಲಾಧಿಕಾರಿಗಳು ಬೆಳಗ್ಗೆ 7 ರಿಂದ ಬೆಳಗ್ಗೆ 11 ರ ವರೆಗೆ ಸಮಯ ನಿಗದಿಗೊಳಿಸಿದ್ದರೂ, ಆ ಬಳಿಕ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಟ ನಡೆಸುತ್ತಿದ್ದ ವಾಹನ ಸವಾರರನ್ನು ವಿಚಾರಿಸಿ, ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದು, ಅವರನ್ನು ಪೊಲೀಸರು ಕಾಲ್ನಡಿಗೆಯಲ್ಲೇ ಮನೆಗೆ ಕಳುಹಿಸುತ್ತಿದ್ದಾರೆ.

ಎಲ್ಲೆಲ್ಲಿ ಎಷ್ಟು ವಾಹನ ?
ಕುಂದಾಪುರ ಉಪ ವಿಭಾಗದ ಕುಂದಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಎಸ್‌ಐ ಹರೀಶ್‌ ಆರ್‌. ನೇತೃತ್ವದ ತಂಡ 13 ದ್ವಿಚಕ್ರ ವಾಹನ ಹಾಗೂ 2 ಕಾರುಗಳನ್ನು, ಕುಂದಾಪುರ ಗ್ರಾಮಾಂತರ (ಕಂಡೂÉರು) ಠಾಣೆ ವ್ಯಾಪ್ತಿಯಲ್ಲಿ ಎಸ್‌ಐ ರಾಜ್‌ಕುಮಾರ್‌ ನೇತೃತ್ವದ ತಂಡ 1 ಕಾರನ್ನು, ಶಂಕರನಾರಾಯಣದಲ್ಲಿ ಎಸ್‌ಐ ಶ್ರೀಧರ ನಾಯ್ಕ ನೇತೃತ್ವದ ತಂಡ 18 ಬೈಕ್‌, 2 ಕಾರು, ಅಮಾಸೆಬೈಲಿನಲ್ಲಿ ಎಸ್‌ಐ ಅನಿಲ್‌ ಕುಮಾರ್‌ ನೇತೃತ್ವದ ತಂಡದ 1 ದ್ವಿಚಕ್ರ ವಾಹನ, ಕೊಲ್ಲೂರು ವ್ಯಾಪ್ತಿಯಲ್ಲಿ ಎಸ್‌ಐ ಮಹಾದೇವ ಭೋಸ್ಲೆ ನೇತೃತ್ವದ ತಂಡ 3 ಬೈಕ್‌ಗಳನ್ನು, ಬೈಂದೂರು ವ್ಯಾಪ್ತಿಯಲ್ಲಿ ಎಸ್‌ಐ ಸಂಗೀತಾ ನೇತೃತ್ವದ ತಂಡ 6 ಬೈಕ್‌ಗಳನ್ನು ಹಾಗೂ ಗಂಗೊಳ್ಳಿಯಲ್ಲಿ ಎಸ್‌ಐ ಭೀಮಾಶಂಕರ್‌ ನೇತೃತ್ವದ ತಂಡ 1 ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next