ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬರಬೇಕಿದ್ದ ಹೊಸ ತಾಲೂಕುಗಳ ರಚನೆಗೆ ಗ್ರಹಣ ಹಿಡಿದಂತಾಗಿದ್ದು, ತಾಪಂ ಹಾಗೂ ಜಿಪಂ ಚುನಾವಣೆಗಳಿಗೂ ಮುನ್ನ ಹೊಸ ತಾಲೂಕುಗಳ ರಚನೆ ಆಗುತ್ತಾ ಅಥವಾ ಇಲ್ಲವಾ ಎನ್ನುವ ಮಾತು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂ ಕಾಗಿ ರಚಿಸಲು ಹಿಂದಿನ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಿರ್ಧಾರವಾದರೆ, ಗೌರಿ ಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಹೊಸ ತಾಲೂಕಾಗಿ ರಚನೆ ಮಾಡಲು ಈಗಿನ ಬಿಜೆಪಿ ಸರ್ಕಾರ ಘೋಷಿಸಿತ್ತು.
ಪ್ರಕ್ರಿಯೆ ಶುರುವಾಗಿಲ್ಲ: ಜಿಲ್ಲೆಯ ಬಾಗೇ ಪಲ್ಲಿ ತಾಲೂಕಿನ ಚೇಳೂರು ಹೊಸ ತಾಲೂಕು ರಚನೆಗೆ ಪ್ರಕ್ರಿಯೆಗಳು ಶುರುವಾದ ಬಳಿಕ ಕೊರೊನಾ ಎದುರಾಗಿದ್ದರಿಂದ ಪ್ರಕ್ರಿಯೆಗಳು ಸದ್ದಿಲ್ಲದೇ ಮೊಟಕುಗೊಂಡರೆ, ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿ ತಾಲೂಕು ರಚನೆ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದರೂ ಇದುವರೆಗೂ ಪ್ರಕ್ರಿಯೆ ಮಾತ್ರ ಶುರುವಾಗಿಲ್ಲ.
ಸಭೆ ನಡೆದಿಲ್ಲ: ಚೇಳೂರು ಹೋಬಳಿಯನ್ನು ತಾಲೂಕು ರಚನೆ ಮಾಡುವ ಸಂಬಂಧ ಜಿಲ್ಲೆಯ ಉಪ ವಿಭಾಗಾಧಿಕಾರಿ ರಘು ನಂದನ್, ಚೇಳೂರು ಹೊಸ ತಾಲೂಕುಗಳಿಗೆ ಸೇರುವ ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲೂಕಿನ ಶಾಸಕರ ಸಭೆಯನ್ನು ಒಮ್ಮೆ ಕರೆದು ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಕೊರೊನಾ ಲಾಕ್‌ಡೌನ್ ಎದುರಾದ ಪರಿಣಾಮ ಹೊಸ ತಾಲೂಕು ರಚನೆಗೆ ಬೇಕಾದ ಚಟುವಟಿಕೆಗಳು ನಡೆಯದ ಕಾರಣ ಚೇಳೂರು ತಾಲೂಕು ಸಹ ಅಸ್ತಿತ್ವಕ್ಕೆ ಬರಲಿಲ್ಲ.
ಇನ್ನೂ ಮಂಚೇನಹಳ್ಳಿ ಹೋಬಳಿ ತಾಲೂಕು ರಚನೆ ಬಗ್ಗೆ ಯಾವುದೇ ಸಭೆಯಾಗಲಿ, ಸರ್ಕಾ ರದ ಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ ಆಗಿಲ್ಲ. ಮಂಚೇನಹಳ್ಳಿ ತಾಲೂಕಿಗೆ ಗಡಿ ರಚನೆ ಬಗ್ಗೆ ಸಭೆ ನಡೆದು ಒಮ್ಮತ ತೀರ್ಮಾನ ಆಗದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಉದಯವಾಗಬೇಕಿದ್ದ ಮಂಚೇನಹಳ್ಳಿ ಹಾಗೂ ಚೇಳೂರು ತಾಲೂಕುಗಳು ನೆನ ಗುದಿಗೆ ಬಿದ್ದಿವೆ. ಮಂಚೇನಹಳ್ಳಿ ತಾಲೂಕು ರಚನೆ ವಿಚಾರ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿರುವ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ಗೆ ಉಪ ಚುನಾವಣೆಯಲ್ಲಿ ರಾಜ ಕೀಯವಾಗಿ ಸಾಕಷ್ಟು ಬಲ ತಂದುಕೊಟ್ಟಿದೆ.
ಆದರೆ ಉಪ ಚುನಾವಣೆಗೂ ಮೊದಲು ಸಿಎಂ ಬಿ.ಎಸ್.ಯಡಿಯೂರಪ್ಪ ಮಂಚೇನಹಳ್ಳಿ ಹೋಬಳಿ ಹೊಸ ತಾಲೂಕಾಗಿ ಘೋಷಿಸಿದರು. ಆದರೆ ಬಜೆಟ್‌ನಲ್ಲಿ ಯಾವುದೇ ಅನು ದಾನ ಮೀಸಲಿಡಲಿಲ್ಲ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಉಸ್ತುವಾರಿ ಸಚಿವರ ಹಾದಿಯಾಗಿ ಯಾರು ಚಕಾರ ಎತ್ತದ ಕಾರಣ ಮಂಚೇನಹಳ್ಳಿ ಹೊಸ ತಾಲೂಕು ಆಗುವ ಕನಸು ನನಸಾಗದೇ ಉಳಿದಿದೆ.
ಕೊರೊನಾ ಸೋಂಕು ಎದುರಾದ ಬಳಿಕ ಹೊಸ ತಾಲೂಕುಗಳ ಬಗ್ಗೆ ಯಾವುದೇ ಚಟುವಟಿಕೆ ನಡೆದಿಲ್ಲ. ಚೇಳೂರು ತಾಲೂಕು ರಚನೆ ಬಗ್ಗೆ ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ್ದು, ಸರ್ಕಾರಕ್ಕೆ ಸದ್ಯದಲ್ಲೇ ವರದಿ ಸಲ್ಲಿಸಲಾಗುವುದು. ಮಂಚೇನಹಳ್ಳಿ ತಾಲೂಕು ರಚನೆ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ.
-ಎ.ಎನ್.ರಘುನಂದನ್, ಉಪ ವಿಭಾಗಾಧಿಕಾರಿ
* ಕಾಗತಿ ನಾಗರಾಜಪ್ಪ