Advertisement
ಮೂರು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಸುಮಾರು 20 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿದ್ದಾರೆ. ಈ ನಡುವೆಯೇ ಫ್ಲೆಕ್ಸ್, ಬ್ಯಾನರ್ ಮುದ್ರಿಸುವ ಮಳಿಗೆಗಳ ಮೇಲೂ ಶುಕ್ರವಾರ ದಾಳಿ ನಡೆಸಿದ ಅಧಿಕಾರಿಗಳು, ಮಳಿಗೆಗಳಿಗೆ ಬೀಗಮುದ್ರೆ ಹಾಕಿ ನೋಟಿಸ್ ಜಾರಿಗೊಳಿಸಿದ್ದಾರೆ.
Related Articles
Advertisement
ಗುರುವಾರ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸುವ ವೇಳೆ ಪಾಲಿಕೆಯ ಎಚ್‌ಎಎಲ್ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಭಟ್ಟಚಾರ್ ಮೇಲೆ ಹಲ್ಲೆ ನಡೆಸಿದ ರಾಜೇಂದ್ರನ್, ಸೈಮರ್, ಕಮಲನಾಥ್ ಹಾಗೂ ಸೂರ್ಯ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಸಂತೋಷ್ ಹಾಗೂ ಸರವಣ ತಲೆಮರೆಸಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಧೈರ್ಯ ತುಂಬಿದ ಮೇಯರ್: ಗುರುವಾರ ಪೈ ಬಡಾವಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸುವ ವೇಳೆ ರಾಜಕೀಯ ಮುಖಂಡರ ಬೆಂಬಲಿಗರಿಂದ ಹಲ್ಲೆಗೆ ಒಳಗಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭೇಟಿ ಮಾಡಿದ ಮೇಯರ್ ಆರ್.ಸಂಪತ್‌ರಾಜ್, ಅವರಲ್ಲಿ ಧೈರ್ಯ ತುಂಬಿ ನಿಮ್ಮ ಜತೆ ನಾವಿದ್ದೇವೆ.
ಯಾವುದಕ್ಕೂ ಹೆದರವ ಅಗತ್ಯವಿಲ್ಲ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೈಕೋರ್ಟ್ ಸೂಚನೆ ನಂತರವೂ ವಾರ್ತೂರು ವಾರ್ಡ್‌ನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ವರ್ತೂರು ವಾರ್ಡ್‌ಗೆ ಭೇಟಿ ನೀಡಿದ ಮೇಯರ್, ಫ್ಲೆಕ್ಸ್ ತೆರವುಗೊಳಿಸಲು ಮುಂದಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಾರ್ಡ್‌ನಲ್ಲಿ ಹಾಕಲವಾಗಿರುವ ಎಲ್ಲ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಕೂಡಲೇ ತೆರವುಗೊಳಿಸಬೇಕು. ನಂತರವೂ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ದೂರು ದಾಖಲಿಸಿ ವಾಟ್ಸ್‌ಆ್ಯಪ್ ಮೂಲಕ ದೂರು ಪ್ರತಿಯನ್ನು ತಮಗೆ ಕಳುಹಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫ್ಲೆಕ್ಸ್ ಮುದ್ರಣ ಮಳಿಗೆಗಳ ವಿರುದ್ಧ ಕೈಗೊಂಡ ಕ್ರಮಗಳ ವಿವರವಲಯ ವಶಕ್ಕೆ ಪಡೆದ ಫ್ಲೆಕ್ಸ್(ಕೆ.ಜಿ) ಮಳಿಗೆಗೆ ಬೀಗ ನೋಟಿಸ್ ಪಡೆದ ಮಳಿಗೆಗಳು ದಂಡ
-ಪಶ್ಚಿಮ 780 6 6 35,000
-ಪೂರ್ವ 8,500 11 0 50,000
-ದಕ್ಷಿಣ 80 2 2 0
-ಬೊಮ್ಮನಹಳ್ಳಿ 5,000 6 2 0
-ದಾಸರಹಳ್ಳಿ 2,200 0 0 0
-ಆರ್‌ಆರ್‌ನಗರ 0 5 0 0
-ಯಲಹಂಕ 2,000 0 0 0
-ಮಹದೇವಪುರ 260 6 0 7,000
-ಒಟ್ಟು 18,820 36 10 92,000