Advertisement

ನಕಲಿ ಕ್ಲಿನಿಕ್‌ಗೆ ಬೀಗಮುದ್ರೆ

05:43 AM Jun 21, 2020 | Suhan S |

ಧಾರವಾಡ: ಕೆಪಿಎಂಇ ನೋಂದಣಿ ಇಲ್ಲದ ಆಸ್ಪತ್ರೆಯೊಂದಕ್ಕೆ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಕಲಘಟಗಿ ತಾಲೂಕು ಚಳಮಟ್ಟಿ ಗ್ರಾಮದಲ್ಲಿ ಸಂಜಯ್‌ ಸಿಂಗ್‌ ಎಂಬುವರು ಪೂನಮ್‌ ಪಾಲಿ ಕ್ಲಿನಿಕ್‌ ಹೆಸರಿನಲ್ಲಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಸ್ತ್ರಚಿಕಿತ್ಸಕ, ಕಲಘಟಗಿ ನೋಡಲ್‌ ಅಧಿಕಾರಿ ಡಾ| ಬಸವರಾಜ ಬಾಸೂರ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ವೈದ್ಯರು ಬಿಎಚ್‌ಎಂಎಸ್‌ ಪದವಿ ಹೊಂದಿರುವುದಾಗಿ ಹೇಳಿದರು.

Advertisement

ಆದರೆ ಪ್ರಮಾಣಪತ್ರ ಹಾಜರುಪಡಿಸಲಿಲ್ಲ ಹಾಗೂ ಕೆಪಿಎಂಇ ಕಾಯ್ದೆಯಡಿ ನೋಂದಣಿಯನ್ನು ಹೊಂದಿರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೀಗ ಹಾಕಲಾಯಿತು. ಅನಧಿಕೃತ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಜಿಲ್ಲಾಡಳಿತದ ಸಹಾಯವಾಣಿ 1077ಕ್ಕೆ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next