Advertisement

ನಷ್ಟದಲ್ಲಿರುವ ಬಿಎಸ್ಸೆನ್ನೆಲ್‌ಗೆ ಬೀಗ?

12:30 AM Feb 14, 2019 | Team Udayavani |

ಹೊಸದಿಲ್ಲಿ: ದೇಶದ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಪ್ರಧಾನ ಭೂಮಿಕೆ ವಹಿಸುತ್ತಿರುವ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಅನ್ನು ಅಗತ್ಯ ಬಿದ್ದರೆ ಶಾಶ್ವತವಾಗಿ ಮುಚ್ಚುವ ಬಗ್ಗೆಯೂ ಯೋಚಿಸಿ ಎಂದು ಕೇಂದ್ರ ಸರಕಾರ ಸೂಚಿಸಿದೆ. ತೀವ್ರ ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಅನ್ನು ಪುನಶ್ಚೇತನಗೊಳಿಸಲು ಬಂಡವಾಳ ಹಿಂದೆಗೆತ ಸಹಿತ ಎಲ್ಲ ಆಯ್ಕೆಯನ್ನು ಪರಿಗಣಿಸಿ. ಸಾಧ್ಯವಾಗದೆ ಇದ್ದರೆ ಮುಚ್ಚಿಬಿಡಿ ಎಂದು ಹಿರಿಯ ಬಿಎಸ್ಸೆನ್ನೆಲ್‌ ಅಧಿಕಾರಿಗಳಿಗೆ ಕೇಂದ್ರ ದೂರಸಂಪರ್ಕ ಖಾತೆ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 

Advertisement

2017-18ನೇ ವರ್ಷದಲ್ಲಿ 31,287 ಕೋಟಿ ರೂ. ನಷ್ಟ ಉಂಟಾಗಿದೆ. ಹಾಲಿ ಇರುವ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌), ಸಂಸ್ಥೆ ಹೊಂದಿರುವ ಜಮೀನು, ಕಟ್ಟಡಗಳ ವಿಲೆವಾರಿ ಬಗ್ಗೆಯೂ ಯೋಚನೆ ನಡೆಸಲಾಗಿದೆ. ಹಾಲಿ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಚಿಂತನೆಯೂ ಇದೆ. ಇದರಿಂದಾಗಿ 3 ಸಾವಿರ ಕೋಟಿ ರೂ. ವೇತನ ನೀಡಿಕೆ ಉಳಿತಾಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next