Advertisement

ತೆರಿಗೆ ಪಾವತಿಸದ ಕಂಪನಿಗೆ ಬೀಗ

02:42 PM Oct 19, 2019 | Team Udayavani |

ಮುಳಗುಂದ: ಸಮೀಪದ ಸೊರಟೂರ, ಯಲಿಶಿರೂರ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಗಾಳಿ ವಿದ್ಯುತ್‌ ಉತ್ಪಾದನಾ ಕಂಪನಿಯು ಗ್ರಾಪಂಗೆ ತುಂಬಬೇಕಾದ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕಗಳ ಪ್ರಮುಖ ಕಚೇರಿಗಳಿಗೆ ಬೀಗ ಜಡಿದು ವಿದ್ಯತ್‌ ಉತ್ಪಾದನೆ ಸ್ಥಗಿತಗೊಳಿಸಲಾಯಿತು.

Advertisement

ಸೊರಟೂರ ಹಾಗೂ ಯಲಿಶಿರೂರ ಗ್ರಾಪಂ ವ್ಯಾಪ್ತಿಗಳಲ್ಲಿ ಒಟ್ಟು 18 ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಬೋರೋಕೊ ಕಂಪನಿ ಸ್ಥಾಪಿಸಿದ್ದು, 2015ರಿಂದ 2018ರ ವರೆಗೆ ಒಟ್ಟು 33.75 ಲಕ್ಷ ರೂ.ಗಳ ತೆರಿಗೆ ಪಾವತಿಸಬೇಕಾಗಿದ್ದು, ಈವರೆಗೂ ತೆರಿಗೆ ಪಾವತಿಯಾಗಿಲ್ಲ. ಈ ಕುರಿತು ಹಲವು ಬಾರಿ ನೋಟಿಸ್‌ ಮೂಲಕ ತಿಳಿಸಿ ಸದ್ಯ ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್‌ ರಾಜ್‌ ಅಧಿನಿಯಮದ ಕಾನೂನಿನ ಪ್ರಕಾರ ಇವರೆಗೂ ತುಂಬಬೇಕಾದ ತೆರಿಗೆ ಶೇ. 10 ಬಡ್ಡಿ ಸಮೇತ ತುಂಬಲು ತಾಪಂ ಇಒ ಎಚ್‌.ಎಸ್‌. ಜಿನಗಿ ಕಂಪನಿಗೆ ನೋಟಿಸ್‌ ಮೂಲಕ ತಿಳಿಸಿದರು.

ಇವರೆಗೂ ತೆರಿಗೆ ಪಾವತಿಸದ ಕಾರಣ ಇಂದು ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸೊರಟೂರ ಗ್ರಾಮದ ಅತ್ತಿಕಟ್ಟಿ ರಸ್ತೆ ಉತ್ಪಾದನಾ ಘಟಕ ಹಾಗೂ ಯಲಿಶಿರೂರ ಮುಳಗುಂದ ರಸ್ತೆಯಲ್ಲಿರುವ ಘಟಕಕ್ಕೆ ಬೀಗ ಜಡಿಯಲಾಯಿತು. ತಾಪಂ ಇಒ ಎಚ್‌.ಎಸ್‌. ಜಿನಗಿ, ಗ್ರಾಪಂ ಅಧ್ಯಕ್ಷೆ ಶಾರದಾ ಜಂಗವಾಡ, ಸದಸ್ಯರಾದ ಮರಿಯಪ್ಪ ಸಣ್ಣತಂಗಿಯವರ, ಬಸವರಾಜ ಕುರಿ, ಸಿಪಿಐ ರವಿ ಕಪ್ಪತ್ತನವರ,ಹೆಸ್ಕಾಂ ಎಇಇ ಕುರಿ, ಪಿಎಸ್‌ಐ ಶಿವರಾಜ ಧನಿಗೋಳ, ಪಿಡಿಒ ಮಾಲತೇಶ ಮೇವುಂಡಿ, ಗೋವಿಂದರಡ್ಡಿ ಕಿಲಬನವರ, ಎಸ್‌. ಎಸ್‌. ತೊಂಡಿಹಾಳ, ಇಸ್ಮಾಯಿಲ್‌ ಅರಗಂಜಿ, ರಾಜು ಕಲ್ಲಗುಡಿ, ಪರಶುರಾಮ ಹರಿಜನ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next