Advertisement

ಲಾಕ್‌ಡೌನ್‌ ನಿಯಂತ್ರಣದಲ್ಲಿ: ಬೊಮ್ಮಾಯಿ

02:12 AM Jul 17, 2020 | Hari Prasad |

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಜಾರಿಯಲ್ಲಿರುವ ಲಾಕ್‌ಡೌನ್‌ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಗುರುವಾರ ಲಾಕ್‌ಡೌನ್‌ ಜಾರಿಯಲ್ಲಿರುವ ವ್ಯಾಪ್ತಿಯ ನಗರ ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ದೂರವಾಣಿ ಮೂಲಕ ಚರ್ಚಿಸಿದ ಬಳಿಕ ಅವರು ಮಾಹಿತಿ ನೀಡಿದರು.

ಕೆಲವೆಡೆ ಲಾಕ್‌ಡೌನ್‌ ಉಲ್ಲಂಘಿಸಿ ವಾಹನ, ಜನರ ಅನಗತ್ಯ ಸಂಚಾರದ ಮಾಹಿತಿ ಇದ್ದು, ಮುಲಾಜಿಲ್ಲದೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದೇನೆ ಎಂದರು.

ನಾವು ಕೋವಿಡ್ 19 ಜತೆ ಹೋರಾಟ ಮಾಡಲೇಬೇಕು. ಆದರೆ ಆತಂಕ ಪಡುವ ಅಗತ್ಯವಿಲ್ಲ. ಕೆಲವೊಂದು ಕಟ್ಟುನಿಟ್ಟಿನ ಕ್ರಮ ಪಾಲನೆ ಮಾಡಿದರೆ ಸಾಕು ಎಂದು ತಿಳಿಸಿದರು.


ಸಚಿವರಿಗೆ ಅವ್ಯವಸ್ಥೆ ದರ್ಶನ

ಕೋವಿಡ್ 19 ಉಸ್ತುವಾರಿ ಸಚಿವರಾದ ಡಿಸಿಎಂ ಡಾ| ಅಶ್ವತ್ಥನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಪ್ರತ್ಯೇಕವಾಗಿ ಕೋವಿಡ್ 19 ಕೇರ್‌ ಸೆಂಟರ್‌ಗಳ ಪರಿಸ್ಥಿತಿ ಅರಿಯಲು ತೆರಳಿದಾಗ ನಿಜ ದರ್ಶನವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಜಿಕೆವಿಕೆಯ ಕೋವಿಡ್ 19 ಕೇರ್‌ ಕೇಂದ್ರಕ್ಕೆ ಡಾ| ಅಶ್ವತ್ಥನಾರಾಯಣ ಭೇಟಿ ನೀಡಿದಾಗ ವೈದ್ಯರಿಲ್ಲದೆ, ರೋಗಿಗಳಿಗೆ ಸರಿಯಾಗಿ ಕುಡಿಯುವ ನೀರು, ಊಟದ ವ್ಯವಸ್ಥೆ ಇಲ್ಲದೆ ಪರದಾಡುವ ದೃಶ್ಯ ಕಂಡು ಬಂದಿದೆ.
ಡಾ| ಸುಧಾಕರ್‌ ಇಂದಿರಾ ನಗರದ ಸಿ.ವಿ. ರಾಮನ್‌ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಅವ್ಯವಸ್ಥೆಯ ದರ್ಶನ ಪಡೆದರು.  ಈ ಸಂದರ್ಭ ಅಧೀಕ್ಷಕರು ಮತ್ತು ಸಿಬಂದಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು.


Advertisement

Udayavani is now on Telegram. Click here to join our channel and stay updated with the latest news.

Next