Advertisement

Google: ಲೊಕೇಶನ್‌ ಟ್ರ್ಯಾಕ್‌: ಗೂಗಲ್‌ಗೆ 700 ಕೋಟಿ ರೂ. ದಂಡ

12:20 AM Sep 16, 2023 | Team Udayavani |

ವಾಷಿಂಗ್ಟನ್‌: ಬಳಕೆದಾರರ ಅನುಮತಿ ಇಲ್ಲದೇ ಅವರು ಇರುವ ಸ್ಥಳವನ್ನು ಟ್ರ್ಯಾಕ್‌ ಮಾಡುವುದನ್ನು ಗೂಗಲ್‌ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದ ನ್ಯಾಯಾಲಯ ಟೆಕ್‌ ದಿಗ್ಗಜ ಕಂಪೆನಿಗೆ ಬರೋಬ್ಬರಿ 700 ಕೋಟಿ ರೂ. ದಂಡ ವಿಧಿಸಿದೆ.

Advertisement

ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌ ರಾಬ್‌ ಬೊಂಟಾ ಅವರು ಗೂಗಲ್‌ ಕಂಪೆನಿ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಗೂಗಲ್‌ ಕಂಪೆನಿಯು ತನ್ನ ಬಳಕೆದಾರರನ್ನು ದಾರಿ ತಪ್ಪಿಸುತ್ತಿದೆ. ಲೊಕೇಶನ್‌ ಆಕ್ಸೆಸ್‌ ಡಿಸೇಬಲ್‌ ಮಾಡಿದರೆ, ಗ್ರಾಹಕರ ಸ್ಥಳವನ್ನು ಟ್ರ್ಯಾಕ್‌ ಮಾಡುವುದಿಲ್ಲ ಎಂದು ಕಂಪೆನಿ ಹೇಳುತ್ತದೆ. ಆದರೆ ತನ್ನ ವಾಣಿಜ್ಯ ಲಾಭಕ್ಕಾಗಿ, ಆಕ್ಸೆಸ್‌ ಡಿಸೇಬಲ್‌ ಮಾಡಿದರೂ, ಲೊಕೇಶನ್‌ ಟ್ರ್ಯಾಕ್‌ ಮಾಡುವುದು ಕಂಪೆನಿ ಮುಂದುವರಿ­ಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಸಂಬಂಧ ಗೂಗಲ್‌ ಕಂಪೆನಿಗೆ ದೊಡ್ಡ ಮೊತ್ತದ ದಂಡ ವಿಧಿಸಿದೆ. ಗೂಗಲ್‌ನಲ್ಲಿ ಗ್ರಾಹಕರು ಹುಡುಕಾಟ ನಡೆಸಿದ್ದು ಮತ್ತು ಅವರಿರುವ ಸ್ಥಳಕ್ಕೆ ತಕ್ಕಂತೆ ಜಾಹೀರಾತುಗಳನ್ನು ಬಳಕೆದಾರರು ಗಮನಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next