Advertisement

ಪ್ರಭಾವಿಗಳಿಂದ ನಿವೇಶನ ಒತ್ತುವರಿ

04:39 PM Sep 10, 2019 | Suhan S |

ಶಿರಾ: ತಾಪಂ ಕಚೇರಿ ಸಭಾಂಗಣದಲ್ಲಿ ಪ.ಜಾತಿ ಮತ್ತು ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ತಹಶೀಲ್ದಾರ್‌ ನಾಹಿದಾ ಜಂಜಂ ಅಧ್ಯಕ್ಷತೆಯಲ್ಲಿ ಜರುಗಿತು.

Advertisement

ಮಾನವ ಬಂಧುತ್ವ ವೇದಿಕೆಯ ರಂಗರಾಜು ಮಾತನಾಡಿ, ನಗರದ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗಿರುವ ಎಸ್‌ಸಿ, ಎಸ್‌ಟಿ ಮಕ್ಕಳ ನಿರ್ಲಕ್ಷ್ಯದ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂದಿದ್ದ ಲೋಕಾಯುಕ್ತರು ಯಾವುದೇ ಶಾಲೆಗೆ ಭೇಟಿ ನೀಡದೆ ವಾಪಸ್‌ ಹೋಗಿದ್ದಾರೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಬಿಇಒ ಪಿ. ರಾಮಯ್ಯ, ಲೋಕಾಯುಕ್ತರು ಬಂದಿ ರುವುದು ನನಗೆ ಸರಿಯಾಗಿ ಮಾಹಿತಿ ಇರಲಿಲ್ಲ ಎಂದು ತಿಳಿಸಿದರು.

ಡಿಎಸ್‌ಎಸ್‌ ಮುಖಂಡ ಟೈರ್‌ ರಂಗನಾಥ್‌ ಮಾತನಾಡಿ, ತಾಲೂಕಿನ ಸರ್ಕಾರಿ ಶಾಲೆಗಳ ನಿವೇಶನ ಸ್ಥಳೀಯ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ನಿವೇಶನ ಕಬಳಿಸುವ ಹುನ್ನಾರ ನಡೆಸು ತ್ತಿದ್ದಾರೆ ಎಂದು ಹೇಳಿದರು.

ಡಿಎಸ್‌ಎಸ್‌ ಸಂಚಾಲಕ ಲಕ್ಷಿ ್ಮೕಕಾಂತ್‌ ಮಾತನಾಡಿ, ನಗರದ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಆರ್‌ಟಿಇ ಅಡಿ ಓದುತ್ತಿರುವ ಎಸ್‌ಸಿ, ಎಸ್‌ಟಿ ಮಕ್ಕಳ ಪೋಷಕರಿಂದ ಪುಸ್ತಕ, ಸಮವಸ್ತ್ರ, ಶೂ ಖರೀದಿಗೆ ಶುಲ್ಕ ವಸೂಲು ಮಾಡು ತ್ತಿರುವ ಬಗ್ಗೆ ಸಂಸ್ಥೆಯ ಮುಖ್ಯಸ್ಥರಲ್ಲಿ ಕೇಳಿದರೆ ಉಡಾಫೆ ಉತ್ತರ ಜೊತೆಗೆ ಯಾರಿಗಾದರೂ ದೂರು ನೀಡಿ ಎಂದು ದರ್ಪ ತೋರಿಸಿರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇದಕ್ಕೆ ಉತ್ತರಿಸಿದ ಬಿಇಒ ಪಿ.ರಾಮಯ್ಯ, ಈಗಾಗಲೇ ಖಾಸಗಿ ವಿದ್ಯಾಸಂಸ್ಥೆಯ ಮುಖ್ಯಸ್ಥರಿಗೆ ಎರಡು ಬಾರಿ ಆರ್‌ಟಿಇ ಮಕ್ಕಳ ಪೋಷಕರಿಂದ ಶುಲ್ಕ ವಸೂಲು ಮಾಡ ಬಾರದೆಂದು ನೋಟಿಸ್‌ ನೀಡಿದ್ದೇನೆ. ಈ ಬಗ್ಗೆ ಗಮನ ನೀಡುತ್ತೇನೆ ಎಂದರು. ಇಒ ಮೋಹನ್‌ ಕುಮಾರ್‌, ತಾಪಂ ಸದಸ್ಯೆ ಮಂಜುಳಾಬಾಯಿ, ನಗರ ವೃತ್ತ ನಿರೀಕ್ಷಕ ರಂಗಶಾಮಯ್ಯ, ಎಇಇ ಜಲ್ದೀಶ್‌, ಆರ್‌ಎಫ್ಒ ರಾಧಾ, ಡಿಎಸ್‌ಎಸ್‌ ಮುಖಂಡ ರಾಜಸಿಂಹ, ಆರ್‌ಎಂಸಿ ಸದಸ್ಯ ರಾಮರಾಜು ಉಪಸ್ಥಿತರಿದ್ದರು.

ಅರಿವು ಮೂಡಿಸಿದ್ದೇವೆ:

ದಲಿತ ಕಾಲನಿಗಳ ವಿದ್ಯುತ್‌ ಸಮಸ್ಯೆ, ದಲಿತರ ಸ್ಮಶಾನಕ್ಕೆ ಜಾಗ ಮೀಸಲು, ನಿವೇಶನರಹಿತರಿಗೆ ನಿವೇಶನ ನೀಡು ವುದು, ದಲಿತರು ಎಲ್ಲಾ ದೇವಸ್ಥಾನಗಳಿಗೆ ಪ್ರವೇಶದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರ ನೀಡಿದ ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್‌, ಸಮಸ್ಯೆ ಇರುವ ಊರಿಗೆ ಭೇಟಿ ಕೊಟ್ಟು ಅರಿವು ಮೂಡಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next