Advertisement

ಸ್ಥಳ ವಿವಾದ ಇತ್ಯರ್ಥಕ್ಕೆ ಆಗ್ರಹ 

07:26 AM Mar 15, 2019 | |

ಚಿಂತಾಮಣಿ: ಚೌಡದೇನಹಳ್ಳಿಯ ಗ್ರಾಮದ ದಲಿತ ಮತ್ತು ಸವರ್ಣಿàಯರ ಮಧ್ಯೆ ಸರ್ಕಾರಿ ಜಮೀನಿಗಾಗಿ ಉದ್ಬವಿಸಿದ್ದ ವಿವಾದವನ್ನು ಶೀಘ್ರ ಪರಿಹರಿಸಬೇಕೆಂದು ದಲಿತರು ತಹಶೀಲ್ದಾರ್‌ ವಾಹನವನ್ನು ಅಡ್ಡಗಟ್ಟಿ ಒತ್ತಾಯಿಸಿದ ಪ್ರಸಂಗ ಗುರುವಾರ ನಗರದ ತಾಲೂಕು ಕಚೇರಿ ಮುಂದೆ ನಡೆಯಿತು.

Advertisement

ಪ್ರಕರಣ ಠಾಣೆ ಮೆಟ್ಟಿಲೇರಿತ್ತು: ತಾಲೂಕಿನ ಚೌಡದೇನಹಳ್ಳಿ ಗ್ರಾಮದ ಸರ್ವೆ ನಂ.52 ರಲ್ಲಿ 3 ಎಕರೆ 5 ಗುಂಟೆ ಸರ್ಕಾರಿ ಜಮೀನಿದ್ದು ಈ ಜಮೀನಿಗಾಗಿ ಗ್ರಾಮದ ದಲಿತರು ಮತ್ತು ಸವರ್ಣಿàಯರ ಮಧ್ಯೆ ಹಲವು ತಿಂಗಳುಗಳಿಂದ ವಾದ ವಿವಾದಗಳು ನಡೆದು ಪ್ರಕರಣ ಠಾಣೆ ಮೆಟ್ಟಿಲೇರಿತ್ತು.

ಅಂದಿನ ತಹಶೀಲ್ದಾರ್‌ ಮತ್ತು ಜಿಲ್ಲಾ ಉಪವಿಭಾಗಾಧಿಕಾರಿಗಳು ಚೌಡದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸರ್ವೆ ನಂ.52ರ ಜಮೀನನ್ನು ಸರ್ವೇ ಮಾಡಿ ಸರ್ಕಾರಿ ಜಮೀನೆಂದು ಗುರುತಿಸಿ ಸದರಿ ಜಮೀನಿನಲ್ಲಿ ಯಾರು ಯಾವುದೇ ರೀತಿಯ ಕೆಲಸ ಮಾಡಬಾರದು ಹಾಗೂ ಸರ್ಕಾರಿ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಂತೆ ತಹಶೀಲ್ದಾರ್‌ ಅವರಿಗೆ ತಿಳಿಸಿದ್ದರು. 

ವಾಹನ ತಡೆದು ಆಕ್ರೋಶ: ಸವರ್ಣಿಯರು ಸದರಿ ಜಮೀನಿನಲ್ಲಿ 60-70 ಗಜ ವಿಸ್ತೀರ್ಣದ ಜಮೀನಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅವರಿಗೆ ಇಷ್ಟ ಬಂದ ರೀತಿಯಲ್ಲಿ ಜಮೀನಿನಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ತಹಶೀಲ್ದಾರ್‌ ವಿಶ್ವನಾಥರ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ತಾರತಮ್ಯ ಧೋರಣೆ: ವಿವಾದಿತ ಸ್ಥಳದಲ್ಲಿ ಯಾರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬಾರದೆಂದು ಹಿಂದಿನ ಪ್ರೊಬೇಷನರಿ ಎಸಿ ಅಶೋಕ್‌ ತೇಲಿ ಆದೇಶಿಸಿದ್ದರೂ ಸಹ ವಿವಾದಿತ ಸ್ಥಳದಲ್ಲಿ ದಲಿತರು ಹಾಕಿದ್ದ ಗುಡಿಸಲುಗಳನ್ನು ಕಿತ್ತು ಸವರ್ಣಿàಯರು ವಾಹನ ನಿಲ್ಲಿಸಿ, ದನಕರುಗಳನ್ನು ಕಟ್ಟುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. 

Advertisement

ಆದರೆ ಸರ್ಕಾರದಿಂದ ಮಂಜೂರಾಗಿದ್ದ ಮನೆಯನ್ನು ನಿರ್ಮಾಣ ಮಾಡಲು ಮುಂದಾದರೆ ಖುದ್ದು ಅಧಿಕಾರಿಗಳೇ ಸ್ಥಳಕ್ಕೆ ಬಂದು ಮನೆ ಕಾಮಗಾರಿ ನಿಲ್ಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಕಚೇರಿಗೆ ಬಂದ ತಹಶೀಲ್ದಾರ್‌ ವಿಶ್ವನಾಥ ರವರು ಚೌಡದೇನಹಳ್ಳಿಯ ಗ್ರಾಮಸ್ಥರು ಬೇಡಿಕೆ ಇಟ್ಟಿರುವ ಜಾಗವು ಸರ್ಕಾರಿ ಜಾಗವಾಗಿದ್ದು, ಪಂಚಾಯ್ತಿಯ ಅಧಿಕಾರಿಗಳ ಕೈ ತಪ್ಪಿನಿಂದ ಆ ಜಾಗವನ್ನು ಗ್ರಾಮಠಾಣ ಎಂದು ಮಂಜೂರು ಮಾಡಲಾಗಿದೆ.

ಈಗಾಗಲೇ ಈ ಕಡತಕ್ಕೆ ಸಂಬಂಧಿಸಿದಂತೆ ಸಿವಿಲ್‌ ಕೋರ್ಟ್‌ನಲ್ಲಿ  ಸ್ಟೇ ತಂದಿದ್ದು ಈ ಪ್ರಕರಣದಲ್ಲಿ ಭಾಗಿಯಾಗಿ ಇದ್ದನ್ನು ಇತ್ಯರ್ಥಗೊಳಿಸಲು ಎಸಿ ಸೂಚನೆಯಂತೆ ಜಾಗವನ್ನು ಯಾರು ಒತ್ತುವರಿ ಮಾಡಿಕೊಂಡಿರುತ್ತಾರೋ ಅವರಿಗೆ ನೋಟಿಸ್‌ ಕಳುಹಿಸಿ ತೆರವುಗೂಳಿಸುವುದಾಗಿ ಭರವಸೆ ನೀಡಿದರು. ಚೌಡದೇನಹಳ್ಳಿಯ ಯುವ ಮುಖಂಡ ನಾಗೇಶ್‌, ಮುನಿರಾಜು, ಮುನಿವೆಂಕಟಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next