Advertisement

ಕೋವಿಡ್ ಲಕ್ಷಣ ಇದ್ದವರನ್ನು ಪತ್ತೆ ಹಚ್ಚಿ

08:26 AM Jun 24, 2020 | Suhan S |

ವಿಜಯಪುರ: ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್‌-19 ನಿಯಂತ್ರಣಕ್ಕಾಗಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಲಕ್ಷಣ ಇರುವವರನ್ನು ಗುರುತಿಸುವಲ್ಲಿ ತ್ವರತಿ ಕ್ರಮ ಅನುಸರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆಸೂಚಿಸಿದರು.

Advertisement

ಮಂಗಳವಾರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಕೋವಿಡ್‌-19 ನಿಯಂತ್ರಣದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್‌-19 ಕುರಿತು ಎಲ್ಲರು ಮುನ್ನೆಚ್ಚರಿಕೆ ವಹಿಸಬೇಕು. ಐಎಲ್‌ಐ ಮತ್ತು ಸಾರಿ ಸಂಬಂಧಿತ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಜೊತೆಗೆ ಕೋವಿಡ್‌ ರೋಗದ ಲಕ್ಷಣ ಇರುವರನ್ನು ಗುರುತಿಸುವಲ್ಲಿ ತ್ವರಿತ ಕ್ರಮ ಅನುಸರಿಸಬೇಕು ಎಂದು ನಿರ್ದೇಶನ ನೀಡಿದರು. ಕಂಟೇನ್ಮೆಂಟ್‌ ವಲಯ ಸೇರಿದಂತೆ ಇತರ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಬೇಕು. ಐಎಲ್‌ಐ ಮತ್ತು ಸಾರಿ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜವಾಬ್ದಾರಿಯಿಂದ ಕೆಸಲ ಮಾಡಬೇಕು. ಸೋಂಕಿನ ಲಕ್ಷಣ ಇರುವುದು ಕಂಡುಬಂದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸುವ ಜೊತೆಗೆ ಜಿಲ್ಲಾಸ್ಪತ್ರೆಯ ವೈದ್ಯರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು. ಕೋವಿಡ್‌-19ದಿಂದ ಆಗಬಹುದಾದ ಸಾವಿನ ಪ್ರಮಾಣ ತಗ್ಗಿಸಲು ಪರಿಣಾಮಕಾರಿ ಚಿಕಿತ್ಸಾ ವಿಧಾನ ಅನುಸರಿಸುವಂತೆ ಸೂಚಿಸಿದರು.

ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, 26,989 ಜನರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 301 ಕೋವಿಡ್‌ -19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, 74 ಜನರು ಸಕ್ರಿಯ ರೋಗಿಗಳಾಗಿದ್ದಾರೆ. 26,612 ಜನರ ಗಂಟಲು ದ್ರವ ಮಾದರಿ ನೆಗೆಟಿವ್‌ ಬಂದಿದೆ. ಸೋಂಕಿತರಲ್ಲಿ 220 ಗುಣಮುಖ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸೋಂಕಿತರಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

12,808 ಜನರು 28 ದಿನಗಳ ಐಸೊಲೇಷನ್‌ ಅವಧಿ ಮುಗಿಸಿದ್ದು, 21,097 ಜನರು 28 ದಿನಗಳ ರಿಪೊರ್ಟಿಂಗ್‌ ಅವಧಿಯಲ್ಲಿದ್ದಾರೆ. 34,132 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 34 ಕಂಟೇನ್ಮೆಂಟ್‌ ವಲಯಗಳು ಚಾಲ್ತಿಯಲ್ಲಿದ್ದು, 42 ವಲಯಗಳನ್ನು ಡಿನೋಟಿಫಿಕೆಶನ್‌ ಮಾಡಲಾಗಿದೆ. ಈ ಹಿಂದೆ ಒಟ್ಟು 76 ಕಂಟೇನ್ಮೆಂಟ್‌ ವಲಯಗಳನ್ನು ಗುರುತಿಸಲಾಗಿತ್ತು ಎಂದರು.

ಜಿಲ್ಲೆಯಲ್ಲಿ ಒಟ್ಟು 596 ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರ ಮಾಡಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿದ್ದ 32,340 ಜನರಲ್ಲಿ 30,785 ಜನರನ್ನು ಬಿಡುಗಡೆ ಮಾಡಲಾಗಿದೆ. ಚಾಲ್ತಿಯಲ್ಲಿರುವ 66 ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ 1,567 ಜನರು ನಿಗಾದಲ್ಲಿದ್ದಾರೆ. ಈವರೆಗೆ 23,826 ಮಹಾರಾಷ್ಟ್ರ ರಾಜ್ಯದಿಂದ ಹಾಗೂ 2,982 ಗೋವಾ ರಾಜ್ಯದಿಂದ ಮತ್ತು 8,514 ಜನರು ಬೇರೆ ರಾಜ್ಯಗಳಿಂದ ಆಗಮಿಸಿದ್ದಾರೆ ಎಂದು ವಿವರಿಸಿದರು.

Advertisement

ಎಸ್ಪಿ ಅನುಪಮ್‌ ಅಗರವಾಲ್‌ ಮಾತನಾಡಿ, ಜಿಲ್ಲೆಯಲ್ಲಿ ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ 22 ಜನರ ಮೇಲೆ ಎಫ್‌.ಐ.ಆರ್‌ ದಾಖಲಿಸಲಾಗಿದೆ. ಜಿಲ್ಲೆಯ ಗಡಿಭಾಗ ಕಂಟೇನ್ಮೆಂಟ್‌ ವಲಯ ಮತ್ತು ಇತರೆ ಪ್ರದೇಶಗಳಲ್ಲಿ ಕಾನೂನಿನ ರಿತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ಎಂ.ಸಿ. ಮನಗೂಳಿ, ಅರುಣ ಶಹಾಪೂರ, ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಯ ಅಧಿ ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next