ತೆಲಂಗಾಣ: ದೇಶದಲ್ಲಿ ಎಂತೆಂತಾ ಜನರೆಲ್ಲಾ ಇರುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ, ಕೆಲವೊಂದು ಸನ್ನಿವೇಶ ಅವರನ್ನು ಆ ರೀತಿಯಾಗಿ ಮಾಡಬಹುದು ಎಂದು ಹೇಳಿದರು ತಪ್ಪಾಗಲಾರದು ಯಾಕೆಂದರೆ ಇಲ್ಲಿ ನಾವು ಹೇಳಲು ಹೊರಟಿರುವ ವಿಚಾರವು ಹಾಗೆ ಇದೆ.
ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿರುವ ಹೊಳೆಯೊಂದರಲ್ಲಿ ಮೃತದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಅಲ್ಲಿನ ಸ್ಥಳೀಯರು ಕಂಡಿದ್ದಾರೆ ಕೂಡಲೇ ಈ ವಿಚಾರವನ್ನು ಪಕ್ಕದ ಪೊಲೀಸ್ ಠಾಣೆಗೆ ಮಾಹಿತಿಯನ್ನೂ ನೀಡಿದ್ದಾರೆ, ವಿಚಾರ ತಿಳಿದ ಪೊಲೀಸರು ತಮ್ಮ ಸಿಬಂದಿಗಳ ಜೊತೆಗೆ ಹೊಳೆಯ ಸಮೀಪ ಬಂದು ನೋಡಿದ್ದಾರೆ ಈ ವೇಳೆ ನೀರಿನಲ್ಲಿ ತೇಲುತ್ತಿರುವ ದೇಹವೊಂದು ಕಂಡಿದೆ ಇದನ್ನು ಮನಗಂಡ ಪೊಲೀಸರು ವ್ಯಕ್ತಿ ಮೃತಪಟ್ಟಿರಬೇಕು ಎಂದು ತಮ್ಮ ಸಿಬಂದಿಗಳ ಸಹಾಯದಿಂದ ದೇಹವನ್ನು ದಡಕ್ಕೆ ಎಳೆಯಲು ಮುಂದಾಗಿದ್ದಾರೆ.
ಪೊಲೀಸ್ ಸಿಬಂದಿಗಳು ಹೊಳೆಯ ದಡದಲ್ಲಿ ತೇಲುತ್ತಿರುವ ವ್ಯಕ್ತಿಯನ್ನು ದಡಕ್ಕೆ ಎಳೆದಿದ್ದಾರೆ ಅಷ್ಟೋತ್ತಿಗೆ ನೀರಿನಲ್ಲಿ ತೇಲುತ್ತಿದ್ದ ವ್ಯಕ್ತಿ ಏಕಾಏಕಿ ಎದ್ದು ನಿಂತಿದ್ದಾನೆ. ಇದರಿಂದ ಪೊಲೀಸರೇ ಒಮ್ಮೆ ತಬ್ಬಿಬ್ಬಾಗಿದ್ದಾರೆ.
ಬಳಿಕ ಆತನ ಬಳಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ಕಳೆದ ಹತ್ತು ದಿನಗಳಿಂದ ಕಲ್ಲು ಕ್ವಾರಿಯಲ್ಲಿ ಹನ್ನೆರಡು ಗಂಟೆ ಬಿಸಿಲಿನಲ್ಲಿ ಕೆಲಸ ಮಾಡಿ ಮಾಡಿ ದೇಹ ತಂಪಾಗಿಸಲು ನೀರಿನಲ್ಲಿ ಮಲಗಿದ್ದೆ ಎಂದು ವಿವರಿಸಿದ್ದಾನೆ. ಇದನ್ನು ಕೇಳಿದ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಬಂದ ದಾರಿಯಲ್ಲೇ ಹಿಂತಿರುಗಿದ್ದಾರೆ.