Advertisement

ಶೀಘ್ರದಲ್ಲೇ ಲೋಕಲ್‌ ಟ್ರೈನ್‌ ಹಾಡುಗಳು

10:54 AM Jan 09, 2020 | Suhan S |

ಮದರಂಗಿ ಕೃಷ್ಣ ನಾಯಕರಾಗಿ ನಟಿಸಿರುವ “ಲೋಕಲ್‌ ಟ್ರೈನ್‌’ ಚಿತ್ರದ ಹಾಡುಗಳು ಬಿಡುಗಡೆಗೆ ತಯಾರಾಗಿದೆ. “ಸಂಜನಾ ಸಿನಿ ಆರ್ಟ್ಸ್’ ಬ್ಯಾನರ್‌ನಲ್ಲಿ ಎಸ್‌.ಹೆಚ್‌ ವಾಳ್ಕೆ ನಿರ್ಮಿಸುತ್ತಿರುವ “ಲೋಕಲ್‌ ಟ್ರೈನ್‌’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರ್ಜುನ್‌ ಜನ್ಯ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

Advertisement

ಈಗಾಗಲೇ “ಲೋಕಲ್‌ ಟ್ರೈನ್‌’ ಚಿತ್ರಕ್ಕೆ ಬೆಂಗಳೂರು, ಹೈದರಾಬಾದ್‌ ಮುಂತಾದ ಕಡೆ ಸುಮಾರು 70 ದಿನಗಳ ಚಿತ್ರೀಕರಣ ನvಸಲಾಗಿದ್ದು, ಸದ್ಯ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ನ ಅಂತಿಮ ಹಂತದ ಕೆಲಸಗಳಲ್ಲಿ ನಿರತವಾಗಿದೆ. ಇದರ ನಡುವೆಯೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೂ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಚಿತ್ರತಂಡದ ಮೂಲಗಳ ಪ್ರಕಾರ ಇದೇ ತಿಂಗಳಾಂತ್ಯಕ್ಕೆ “ಲೋಕಲ್‌ ಟ್ರೈನ್‌’ ಹಾಡುಗಳು ಬಿಡುಗಡೆಯಾಗಲಿದ್ದು, ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು “ಲೋಕಲ್‌ ಟ್ರೈನ್‌’ ಚಿತ್ರದಲ್ಲಿ ನಾಯಕ ಮದರಂಗಿ ಕೃಷ್ಣಗೆ ಮೀನಾಕ್ಷಿ ದೀಕ್ಷಿತ್‌, ಎಸ್ಟರ್‌ ನರೋನ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಸಾಧುಕೋಕಿಲ, ಚಿ.ಗುರುದತ್‌, ಮೈಸೂರು ಗೋಪಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಲೋಕಲ್‌ ಟ್ರೈನ್‌’ ಚಿತ್ರಕ್ಕೆ ನಿರ್ಮಾಪಕ ಎಸ್‌.ಹೆಚ್‌.ವಾಳ್ಕೆ ಅವರು ಕಥೆ ಬರೆದಿದ್ದು, ರುದ್ರಮುನಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ರಮೇಶ್‌ ಬಾಬು ಛಾಯಾಗ್ರಹಣ, ಪಿ.ಆರ್‌.ಸೌಂದರ್‌ ರಾಜ್‌ ಸಂಕಲನ ಕಾರ್ಯವಿದೆ. ಚಿತ್ರಕ್ಕೆ ಕೇಶವಾದಿತ್ಯ, ಮಾರುತಿ.ಟಿ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next