ಮುಂಬಯಿ: ಮುಂಬಯಿ ಉಪನಗರಗಳ ಲೋಕಲ್ ರೈಲು ಸೇವೆಗಳು ಸಾರ್ವಜನಿಕವಾಗಿ ಜ. 29 ಅಥವಾ ಫೆ. 1ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮುಂಬಯಿ ಮನಪಾ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
ಈ ಬಗ್ಗೆ ಚರ್ಚಿಸಲು ಮುಂಬಯಿ ಮಹಾನಗರ ಪಾಲಿಕೆ ಆಯುಕ್ತರು ಸಭೆ ಕರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರೆಲ್ಲರಿಗೂ ಲೋಕಲ್ ರೈಲು ಪ್ರಾರಂಭಿಸುವ ವಿಚಾರ ಕೇಳಿದ್ದೇನೆ. ಒಂದೊಮ್ಮೆ ಲೋಕಲ್ ರೈಲು ಸೇವೆ ಪ್ರಾರಂಭಿಸಿದರೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಮುಂಬಯಿ ಮಹಾನಗರ ಪಾಲಿಕೆ ನೌಕರರ ಹಾಜರಾತಿಗಾಗಿ ಹೊಸ ವ್ಯವಸ್ಥೆಯನ್ನು ಪರಿಚ ಯಿಸಲಾಗಿದೆ. ಮುಂಬಯಿ ಮಹಾನಗರ ಪಾಲಿಕೆ ಕಚೇರಿ ಯಲ್ಲಿ ಬಯೋ ಮೆಟ್ರಿಕ್ ಬದಲಿಗೆ ಮುಖ ಗುರುತಿಸುವಿಕೆ ಮತ್ತು ಆಧಾರ್ ಪರಿಶೀಲಿಸಿ ಹಾಜರಾತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಿಂದ ಕಚೇರಿಗೆ ಬರುವ ಅಧಿಕಾರಿಗಳು ಮತ್ತು ನೌಕರರು ಮುಖ ಗುರುತಿಸುವಿಕೆಯ ವ್ಯವಸ್ಥೆಯ ಮೂಲಕ ಹಾಜರಿ ಪಡೆಯಲಾಗುತ್ತಿದೆ. ಇದನ್ನು ಬುಧವಾರ ಮುಂಬಯಿಯ ಡಿ ವಾರ್ಡ್ ಕಚೇರಿಯಲ್ಲಿ ಉದ್ಘಾಟಿಸ ಲಾಯಿತು. ಕೋವಿಡ್ ಅಪಾಯ ವನ್ನು ಕಡಿಮೆ ಮಾಡುವ ಮತ್ತು ಆರೋಗ್ಯದ ದೃಷ್ಟಿಕೋನದಿಂದಈ ವ್ಯವಸ್ಥೆಯನ್ನು ಇತರ ಬಿಎಂಸಿ ಕಚೇರಿಗಳಿಗೆ ವಿಸ್ತರಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.
ಇದನ್ನೂ ಓದಿ:ಕಲ್ವಾ ಶ್ರೀ ಸದ್ಗುರು ಅಯ್ಯಪ್ಪ ಚಾರಿಟೆಬಲ್ ಟ್ರಸ್ಟ್ : ಗಣ್ಯರಿಗೆ ಗೌರವಾರ್ಪಣೆ
ಅಲ್ಲದೆ ಮುಂಬಯಿಯಲ್ಲಿ ಶಾಲೆ ಪ್ರಾರಂಭಿಸಲು ನಿಧಾನ ನಿರ್ಧಾರ ತೆಗೆದುಕೊಳ್ಳೋಣ. ಮಕ್ಕಳಿಗೆ ಶಾಲೆ ಪ್ರಾರಂಭಿಸುವುದು ಅಪಾಯ ಎಂಬುವುದು ನನ್ನ ವೈಯಕ್ತಿಕ ಭಾವನೆ ಎಂದು ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.