Advertisement

ಸಾರ್ವಜನಿಕರಿಗೆ ಸ್ಥಳೀಯ ರೈಲುಗಳಲ್ಲಿ ಪ್ರಯಾಣ ಸದ್ಯಕ್ಕಿಲ್ಲ

09:15 PM Nov 23, 2020 | Suhan S |

ಮುಂಬಯಿ, ನ. 22: ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಸಾರ್ವಜನಿಕರು ಇನ್ನೂ ಕೆಲವು ಕಾಲ ಕಾಯಬೇಕಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ ಆಯುಕ್ತ ಇಕ್ಬಾಲ್‌ ಚಹಲ್‌, ನಾವು ಸ್ಥಳೀಯ ರೈಲುಗಳು, ಈಜುಕೊಳಗಳು ಮತ್ತು ಶಾಲೆಗಳನ್ನು ತೆರೆಯಲು ಯೋಜಿಸಿದ್ದೆವು, ಆದರೆ ಮುಂಬಯಿಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇವುಗಳನ್ನು ಸದ್ಯ ತೆರೆಯದಿರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Advertisement

ದೀಪಾವಳಿಯ ಅನಂತರ ಸ್ಥಳೀಯ ರೈಲು ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿತ್ತು. ಆದರೆ ಮಾರುಕಟ್ಟೆಯಲ್ಲಿ ಜನಸಂದಣಿ, ಸಂಬಂಧಿಕರ ಮನೆಗೆ ಭೇಟಿಯಿಂದ ಕೋವಿಡ್ ಮತ್ತೆ ಹೆಚ್ಚಾಗಿದೆ. ಕಳೆದ ಐದು ದಿನಗಳಲ್ಲಿ ಮುಂಬಯಿಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಆದ್ದರಿಂದ ಮನಪಾ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮೂರು ನಾಲ್ಕು ವಾರಗಳ ಅನಂತರ ಮುಂಬಯಿಯ ಕೊರೊನಾ ಪರಿಸ್ಥಿತಿಯನ್ನು ಗಮನಿಸಿದ ಅನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.

ಸಾರ್ವಜನಿಕರಿಗೆ ಮುಂಬಯಿ ಲೋಕಲ್‌ ಸೇವೆಯನ್ನು ತೆರೆಯಲು ರಾಜ್ಯ ಸರಕಾರ ಈ ಹಿಂದೆ ರೈಲ್ವೆಗೆ ಪತ್ರ ಬರೆದಿತ್ತು. ದೀಪಾವಳಿಯ ಅನಂತರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ದೊರೆಯುವುದು ಎಂದು ಸಾರ್ವಜನಿಕರು ಆಶಿಸಿದರು. ಆದರೆ ಈಗ ಬಿಎಂಸಿ ಆಯುಕ್ತ ಇಕ್ಬಾಲ್‌ ಚಹಲ್‌ ಅವರ ಹೇಳಿಕೆಯ ಅನಂತರ ಮತ್ತೆ ಕಾಯಬೇಕಾಗಿದೆ. ರಾಜ್ಯ ಸರಕಾರದ ಕೋರಿಕೆಯ ಮೇರೆಗೆ ತುರ್ತು ಸೇವೆಗಳಲ್ಲಿ ತೊಡಗಿರುವ ನೌಕರರು, ಬ್ಯಾಂಕ್‌ ನೌಕರರು, ವಕೀಲರು, ಡಬ್ಟಾವಾಲಾಗಳು, ಶಿಕ್ಷಕರು ಮತ್ತು ಮಹಿಳೆಯರಿಗೆ ಮಾತ್ರ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಮುಂಬಯಿಯಲ್ಲಿ ಹೊಸ ನಿಷೇಧ ಹೇರುವುದಿಲ್ಲ ಎಂದು ಆಯುಕ್ತ ಚಹಲ್‌ ಸ್ಪಷ್ಟಪಡಿಸಿದ್ದಾರೆ. ಮುಂಬಯಿ ಅನಾÉಕ್‌ನಲ್ಲಿ ಯಾವುದೇ ಬದಲಾವಣೆ ಅಥವಾ ನಿರ್ಬಂಧವಿಲ್ಲ, ಅದು ಹಾಗೆಯೇ ಉಳಿಯಲಿದೆ. ಮುಂಬಯಿಯಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಬಹಳ ಮಟ್ಟಿಗೆ ನಿಯಂತ್ರಿಸಲಾಗಿದೆ. ಇದರ ದೃಷ್ಟಿಯಿಂದ, ನಾವು ಇಲ್ಲಿ ಈಜುಕೊಳಗಳು, ಶಾಲೆಗಳು ಮತ್ತು ರೈಲುಗಳನ್ನು ತೆರೆಯಲು ಯೋಜಿಸಿದ್ದೆವು, ಆದರೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ದೃಷ್ಟಿಯಿಂದ, ಈ ಎಲ್ಲದರ ಬಗ್ಗೆ ನಾವು ಈಗ ನಿರ್ಧಾರವನ್ನು ಮುಂದೂಡಿದ್ದೇವೆ.

ಕೋವಿಡ್ ಪ್ರಕರಣಗಳು ಹೆಚ್ಚಾದರೆ ಮುಂಬಯಿಯಲ್ಲಿ ಮತ್ತೆ ಲಾಕ್‌ಡೌನ್‌ ಅಥವಾ ರಾತ್ರಿ ಕರ್ಫ್ಯೂ ವಿಧಿಸಬಹುದೆಂಬ ಎಂಬ ಹೇಳಿಕೆಗೆ ಉತ್ತರಿಸಿ ಆಯುಕ್ತ ಚಹಲ್‌ ಅವರು, ಯಾವುದೇ ಕಫ್ಯೂ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಮಕ್ಕಳಿಗೆ ಅಪಾಯ ಉಂಟಾಗಬಾರದು ಎಂಬ ಕಾರಣಕ್ಕೆ ಡಿ. 31 ರ ವರೆಗೆ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ ಆಯುಕ್ತ ಇಕ್ಬಾಲ್‌ ಚಹಲ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next