Advertisement
ಏಪ್ರಿಲ್ 25ರಿಂದ ಇನ್ನಷ್ಟು ವಿನಾಯ್ತಿಯನ್ನು ಘೋಷಿಸಿದ್ದು ಲಾಕ್ ಡೌನ್ ನಡುವೆಯೂ ಅಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದೆ. ಪುರಸಭೆ ವ್ಯಾಪ್ತಿಯೊಳಗಿನ ಹಾಗೂ ಪುರಸಭೆ ವ್ಯಾಪ್ತಿ ಹೊರಗಿನ ಸ್ಥಳೀಯ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಗಳನ್ನು ತೆರೆಯಲು ಅವಕಾಶ ನೀಡಿದೆ ಎಂದು ವರದಿ ತಿಳಿಸಿದೆ. ಆದರೆ ಪುರಸಭೆ ವ್ಯಾಪ್ತಿಯೊಳಗಿನ ಮಾರುಕಟ್ಟೆ ಕಾಂಪ್ಲೆಕ್ಸ್ ತೆರೆಯಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
1)ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯಡಿ ದಾಖಲಾದ ಎಲ್ಲಾ ಅಂಗಡಿಗಳು. ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಅಂಗಡಿಗಳು, ಮಾರ್ಕೆಟ್ ಕಾಂಪ್ಲೆಕ್ಸ್ ತೆರೆಯಲು ಅವಕಾಶ
2)ಪುರಸಭೆ ವ್ಯಾಪ್ತಿಯ ಸ್ಥಳೀಯ ಅಂಗಡಿಗಳು, ಸಣ್ಣ ಅಂಗಡಿ ತೆರೆಯಲು ಅವಕಾಶ
3)ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಪುರಸಭೆಯ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಹುದು.
4)ಇಂದಿನಿಂದ ಸ್ಥಳೀಯ ಸೆಲೂನ್ ಮತ್ತು ಪಾರ್ಲರ್ ಗಳು ತೆರೆಯಬಹುದಾಗಿದೆ
5)ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಾರ್ಕೆಟ್ ಅನ್ನು ತೆರೆಯಬಹುದಾಗಿದೆ
6)ನಗರ ಪ್ರದೇಶದಲ್ಲಿ ತುರ್ತುಯೇತರ ವಸ್ತು ಮತ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ.
7)ಗ್ರಾಮೀಣ ಪ್ರದೇಶದಲ್ಲಿನ ತುರ್ತು ಅಗತ್ಯವಲ್ಲದ ಸೇವೆಯ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಲು ಅವಕಾಶವಿದೆ
Related Articles
1)ಪುರಸಭೆ ವ್ಯಾಪ್ತಿಯ ಮಲ್ಟಿ ಬ್ರಾಂಡ್ ಅಂಗಡಿಗಳು, ಸಿಂಗಲ್ ಬ್ರಾಂಡ್ ಮಾಲ್ಸ್ ಗಳು ತೆರೆಯುವಂತಿಲ್ಲ
2)ಮಾರ್ಕೆಟ್ ಕಾಂಪ್ಲೆಕ್ಸ್ ನ ಅಂಗಡಿ, ಮಲ್ಟಿ ಬ್ರಾಂಡ್, ಸಿಂಗಲ್ ಬ್ರಾಂಡ್ ಮಾಲ್ ಗಳನ್ನು ತೆರೆಯುವಂತಿಲ್ಲ
3)ಸಿನಿಮಾ ಹಾಲ್, ಮೇಲ್ಸ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್ನೇಶಿಯಂ, ಸ್ಫೋರ್ಟ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ಸ್, ಮಕ್ಕಳ ಪಾರ್ಕ್, ಬಾರ್ ಮತ್ತು ಅಡಿಟೋರಿಯಂ, ಅಸೆಂಬ್ಲಿ ಹಾಲ್ ಗಳನ್ನು ತೆರೆಯುವಂತಿಲ್ಲ.
4)ದೊಡ್ಡ ಮಳಿಗೆ, ಮಾರುಕಟ್ಟೆ ಸ್ಥಳಗಳ ಬಂದ್ ಮುಂದುವರಿಯಲಿದೆ
5)ನೆಹರು ಸ್ಥಳ, ಲಾಜ್ ಪತ್ ನಗರದಂತಹ ಸ್ಥಳಗಳಲ್ಲಿನ ಮಾರ್ಕೆಟ್ ಕಾಂಪ್ಲೆಕ್ಸ್ ಗಳು ತೆರೆಯುವಂತಿಲ್ಲ
Advertisement
ವಿನಾಯ್ತಿ ಇವುಗಳಿಗೆ ಅನ್ವಯವಾಗುವುದಿಲ್ಲ:ಗೃಹ ಸಚಿವಾಲಯ ಸ್ಪಷ್ಟಪಡಿಸಿರುವ ಪ್ರಕಾರ, ಮದ್ಯದ ಅಂಗಡಿಗಳನ್ನು ತೆರೆಯುವಂತಿಲ್ಲ. ಆಲ್ಕೋಹಾಲ್ ಪ್ರತ್ಯೇಕ ಕಾಯ್ದೆಯಡಿ ಬರಲಿದ್ದು, ಇದು ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯಡಿ ಬರುವುದಿಲ್ಲ. ಹೀಗಾಗಿ ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.