Advertisement

“ಪ್ರಾದೇಶಿಕ ಪಕ್ಷದಿಂದ ಸ್ಥಳೀಯ ಸಮಸ್ಯೆ ನಿವಾರಣೆ’

02:26 PM Nov 20, 2017 | |

ದೇವನಹಳ್ಳಿ: ಜನರಿಗೆ ಪ್ರಾದೇಶಿಕ ಪಕ್ಷ ದಿಂದ ಮಾತ್ರ ಸ್ಥಳೀಯ ಜ್ವಲಂತ ಸಮಸ್ಯೆ ನಿವಾರಣೆ ಸಾಧ್ಯವೆಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

Advertisement

ನಗರದ ಪ್ರವಾಸಿಮಂದಿರ ಆವರಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ಹಾಗೂ ಯುವ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಪಕ್ಷ ತಾಯಿ ಇದ್ದಂತೆ. ಪಕ್ಷದ ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದಿಗೂ ಮಾಡುವುದಿಲ್ಲ. ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಇರುತ್ತೇನೆಯೇ ಹೊರತು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕ್ಷೇತ್ರದ ಮುಖಂಡರ ತೀರ್ಮಾನಕ್ಕೆ ತಲೆಬಾಗುತ್ತೇನೆ. ವಿರೋಧಪಕ್ಷದ ಶಾಸಕನಾಗಿದ್ದರೂ ಹೆಚ್ಚಿನ ಅನುದಾನ ತಾಲೂಕಿಗೆ ತರುವುದರ ಮೂಲಕ ಕ್ಷೇತ್ರ ಅಭಿವೃದ್ಧಿ ಪಡಿಸುತ್ತಿದ್ದೇನೆ. ಯುವಕರು ಪ್ರತಿ ಬೂತ್‌ಗೆ ಹೋಗಿ ಪಕ್ಷವನ್ನು ಸಂಘಟಿಸಬೇಕು. ಎಲ್ಲರನ್ನೂ ಒಗ್ಗೂಡಿಸಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಳ್ಳಲು ಶ್ರಮಿಸಬೇಕು ಎಂದು ಹೇಳಿದರು.

ಮಾದರಿ ಸಿಎಂ ಎಚ್ಡಿಕೆ: ತಾಲೂಕು ಜೆಡಿಎಸ್‌ ಮುಖಂಡ ನಿಸರ್ಗ ಡಾ. ಎಲ್‌.ಎನ್‌. ನಾರಾಯಣಸ್ವಾಮಿ  ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳು ಅಧಿಕಾರಾವಧಿಯಲ್ಲಿ ಎಲ್ಲಾ ವರ್ಗದ ಜನರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುವುದರ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಬೇರುಮಟ್ಟ ದಿಂದ ಸಂಘಟಿಸಬೇಕು ಎಂದು ಸಲಹೆ ನೀಡಿದರು.

ನೀರಾವರಿ ಸಮಸ್ಯೆಗೆ ಪ್ರಾದೇಶಿಕ ಪಕ್ಷದಿಂದ ಸಾಧ್ಯ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಟಿ.ರವಿ ಮಾತನಾಡಿ, ಕಾವೇರಿ, ಮಹದಾಯಿ ಇತರೆ ನದಿಗಳ ಸಮಸ್ಯೆ ಪರಿಹಾರ ಮಾಡಲು ರಾಷ್ಟ್ರೀಯ ಪಕ್ಷಗಳಿಗೆ ಇಚ್ಛಾಶಕ್ತಿ ಇಲ್ಲ. ಈ ಸಮಸ್ಯೆಗಳು ಪರಿಹಾರ ಆಗಬೇಕಾದರೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂದರು.

Advertisement

ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ನವರು ಮೂಗು ತೂರಿಸುತ್ತಿದ್ದಾರೆ: ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಹಾಗೂ ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಆರ್‌.ಮುನೇಗೌಡ, ತಾಲೂಕಿನಲ್ಲಿ ಶಾಸಕರು ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಆದರೆ ಶಾಸಕರ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ನವರು ಮೂಗು ತೂರಿಸುತ್ತಿದ್ದಾರೆ. ಸರ್ಕಾರ ಅವರದೇ ಇರಬಹುದು. ಶಾಸಕರಾಗಿ ಅವರ ಕೆಲಸವನ್ನು ಅವರು ಮಾಡುತ್ತಾರೆ. 125 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಸಂಸ್ಕೃತಿ ಬಗ್ಗೆ ಸರಿಯಾದ ರೀತಿ ತಿಳಿದುಕೊಂಡಿಲ್ಲ ಎಂದು ಕಿಡಿಕಾರಿದರು.

ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ ಸುನೀಲ್‌, ಎಪಿಎಂಸಿ ನಿರ್ದೇಶಕ ಕೆ.ವಿ.ಮಂಜುನಾಥ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಶ್ರೀನಿವಾಸ್‌, ಜಿಲ್ಲಾಪ್ರಧಾನ ಕಾರ್ಯದರ್ಶಿ ಚಿದಾನಂದ್‌, ಹಾಪ್‌ ಕಾಮ್ಸ್‌ ನಿರ್ದೇಶಕ ಎಚ್‌.ಶ್ರೀನಿವಾಸ್‌ ಮಾತನಾಡಿದರು.

ಪದಾಧಿಕಾರಿಗಳ ನೇಮಕ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್‌ ಅಧ್ಯಕ್ಷ ಆರ್‌.ಭರತ್‌ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಎಲ್ಲಾ ಹೋಬಳಿ, ಟೌನ್‌, ತಾಲೂಕು ಪದಾಧಿಕಾರಿಗಳನ್ನು ನೇಮಕಮಾಡಿ ಪಕ್ಷ ಬಲವರ್ಧನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
 
ಜೆಡಿಎಸ್‌ ಸೇರ್ಪಡೆ: ಬಿಜೆಪಿ ತೊರೆದು ಹಾಪ್‌ ಕಾಮ್ಸ್‌ ನಿರ್ದೇಶಕ ಹುರುಳುಗುರ್ಕಿ ಎಚ್‌. ಶ್ರೀನಿವಾಸ್‌, ಪೀಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಮುನಿನಾರಾಯಣಪ್ಪ ತಮ್ಮ ಬೆಂಬಲಿಗರೊಂದಿಗೆ ಹಾಗೂ ಕಾಂಗ್ರೆಸ್‌ನಿಂದ ಸಹ ಹಲವರು ಈ ಸಂದರ್ಭದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭಾ ಅಧ್ಯಕ್ಷ ನರಸಿಂಹಮೂರ್ತಿ, ತಾಪಂ ಸದಸ್ಯರಾದ ಎಸ್‌. ಮಹೇಶ್‌, ಕಾರಹಳ್ಳಿ ಶ್ರೀನಿವಾಸ್‌, ಭೀಮರಾಜ್‌, ಗೋಪಾಲಸ್ವಾಮಿ, ಶೈಲಜಾ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಬೀರಪ್ಪ, ಮಾಜಿ ಸದಸ್ಯರಾದ ಎಂ.ವೀರಪ್ಪ, ಎಂ ಬಸವರಾಜು, ಜಿಲ್ಲಾ ಜೆಡಿಎಸ್‌ ಎಸ್ಸಿ ವಿಭಾಗದ ಅಧ್ಯಕ್ಷ ಎಸ್‌.ಗುರಪ್ಪ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎನ್‌.ಸೊಣ್ಣಪ್ಪ, ತಾಲೂಕು ಜೆಡಿಎಸ್‌ ಹಿಂದುಳಿದ ವರ್ಗ ಅಧ್ಯಕ್ಷ ಲಕ್ಷ್ಮಣ್‌, ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷ ವಿ.ಹನುಮಂತಪ್ಪ, ತಾಲೂಕು ಸೊಸೈಟಿ ಉಪಾಧ್ಯಕ್ಷೆ ಭಾರತಿ, ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಮೀನಾಕ್ಷಿ, ಕಸಬಾ ಹೋಬಳಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜು, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ತಾಲೂಕು ಯುವ ಜೆಡಿಎಸ್‌ ಉಪಾಧ್ಯಕ್ಷ ಕಾಂತರಾಜು, ಶಂಕರ್‌, ಎಸ್‌.ಕೆ.ರವಿಕುಮಾರ್‌, ಎ.ಎಸ್‌.ಅರ್ಜುನ್‌, ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್‌, ಖಜಾಂಚಿ ದಾಸ್‌, ವಕ್ತಾರ ಜಿ.ಎಂ.ಮನೋಹರ್‌, ನಿಕಟಪೂರ್ವ ಅಧ್ಯಕ್ಷ ದೊಡ್ಡಸೊಣ್ಣೆ ಮುನಿರಾಜು, ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ವಿ.ಗೋಪಾಲ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next