Advertisement

ಶ್ರಮದಾನದಿಂದ ರಸ್ತೆ ಬದಿಯ ಹೊಂಡಗಳಿಗೆ ಮುಕ್ತಿ

12:11 AM May 09, 2019 | Team Udayavani |

ಸಿದ್ದಾಪುರ: ಶಂಕರನಾರಾಯಣ ಸಮೃದ್ಧಿ ಯುವಕ ಮಂಡಲ ಕುಳ್ಳುಂಜೆ, ಪೊಲೀಸ್‌ ಠಾಣೆ ಮತ್ತು ಜೆಸಿಐಇವರ ಜಂಟಿ ಆಶ್ರಯದಲ್ಲಿ ವಲಯ ಅರಣ್ಯ ಕಚೇರಿಯಿಂದ ಶೇಟ್ ಎಂಟರ್‌ ಪ್ರೈಸಸ್ಸ್ ಪೆಟ್ರೋಲ್ ಬಂಕ್‌ ತನಕ ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯ ರಸ್ತೆ ಇಕ್ಕೆಲಗಳಲ್ಲಿ ಹೊಂಡಗಳಿಗೆ ಕಲ್ಲು ಮಣ್ಣನ್ನು ತುಂಬಿಸುವ ಮೂಲಕ ಶ್ರಮದಾನ ನಡೆಸಲಾಯಿತು.

Advertisement

ಹೆದ್ದಾರಿಯ ಬದಿಯಲ್ಲಿ ಮಳೆಗಾಲದ ನೀರು ಹರಿದು, ಕಂದಕಗಳು ನಿರ್ಮಾಣಗೊಂಡಿತ್ತು. ವಾಹನಗಳಿಗೆ ದಾರಿ ನೀಡುವಾಗ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಿತ್ತು. ಇದನ್ನು ಮನಗಂಡು ಸ್ಥಳೀಯ ಠಾಣಾಧಿಕಾರಿ ಪ್ರಕಾಶ್‌ ಕೆ. ಅವರು ಸಮೃದ್ಧಿ ಯುವಕ ಮಂಡಲದ ಸದಸ್ಯರನ್ನು ಸಂಪರ್ಕಿಸಿ, ಶ್ರಮದಾನ ನಡೆಸುವ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತರಾದರು. ಆ ಮೂಲಕ ಸಂಭವನೀಯ ಅಪಾಯ ಮತ್ತು ಅಪಘಾತವನ್ನು ತಪ್ಪಿಸುವಲ್ಲಿ ಯುವಕರು ಶ್ರಮಿಸಿದರು.

ಯುವಕ ಮಂಡಲದ ಅಧ್ಯಕ್ಷ ನರಸಿಂಹ ದೇವಾಡಿಗ, ಕಾರ್ಯದರ್ಶಿ ಸಂತೋಷ ನಾಯ್ಕ, ಜೆಸಿಐ ಅಧ್ಯಕ್ಷ ರಾಜೇಶ್‌ ಆಚಾರ್ಯ, ಯುವಕ ಮಂಡಲದ ಪೂರ್ವಾಧ್ಯಕ್ಷ ರಘುರಾಮ ಕುಳ್ಳುಂಜೆ, ಗೋಪಾಲ್ ದೇವಾಡಿಗ, ಪ್ರವೀಣ್‌ ಬಾಳೆ ಕೋಡ್ಲು, ಉದಯ ನಾಯ್ಕ, ಕೃಷ್ಣ ಕೇರಿ, ಚಂದ್ರ ನಾಯ್ಕ, ಸುಭಿಕ್ಷ ಎಂಜಿನಿಯರಿಂಗ್‌ ವರ್ಕ್ಸ್ನ ಮಾಲಕ ಉದಯ್‌ ರಾವ್‌ ಮತ್ತು ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಪೊಲೀಸ್‌ ಠಾಣಾ ಅಧಿಕಾರಿ ಪ್ರಕಾಶ್‌ ಕೆ, ಉಪ ಠಾಣಾಧಿಕಾರಿ ಶುಭಕರ್‌, ಸಿಬಂದಿ ಸುರೇಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ನಾಗರಾಜ್‌ ತಲ್ಲಂಜೆ ಹಾಗೂ ಜೆಸಿಐನ ಸದಸ್ಯರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next