Advertisement
ಸುವ್ಯವಸ್ಥಿತವಾಗಿ ಅಭಿವೃದ್ಧಿಗತಿಯಲ್ಲಿ ಸಾಗಿರುವ ಈ ವಾರ್ಡ್‌ನ ಬಹುತೇಕ ರಸ್ತೆಗಳು ಕಾಂಕ್ರೀಟಿಕರಣಗೊಂಡಿವೆೆ. ಆದರೆ ಅಭಿವೃದ್ಧಿಯ ವೇಗಕ್ಕೆ ಸ್ಥಳೀಯವಾಗಿ ಇರುವ ಕೆಲವು ತಾಂತ್ರಿಕ ಹಾಗೂ ಕಾನೂನು ತೊಡಕುಗಳು ಅಡ್ಡಿಯಾಗಿವೆ. ಮಂಗಳೂರು ಮಹಾನಗರ ಪಾಲಿಕೆಯ ಇತರ ವಾರ್ಡ್ ಗಳಂತೆ ಇಲ್ಲೂ ಒಳಚರಂಡಿ ಸಮಸ್ಯೆ ಕಾಡುತ್ತಿದೆ. ಕೆಲವು ಪ್ರದೇಶಗಳಲ್ಲಿ ಒಳಚರಂಡಿ ಪುನರ್ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಕೆಲವು ಕಾಮಗಾರಿಗಳನ್ನು ಎಡಿಬಿ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಒಳಚರಂಡಿ ವ್ಯವಸ್ಥೆಯು ಇಲ್ಲಿನ ಪ್ರಮುಖ ಸಮಸ್ಯೆ. ಒಳಚರಂಡಿ ವ್ಯವಸ್ಥೆಯನ್ನು ಪುನರ್‌ನಿರ್ಮಾಣಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಸಮಸ್ಯೆಗೆ ಪೂರ್ಣ ಪರಿಹಾರ ಸಿಕ್ಕಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಒಳಚರಂಡಿಗೆ ಮಳೆನೀರು ಬಿಡುವುದರಿಂದ ಮಳೆಗಾಲದಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕಿ ರಸ್ತೆಗಳಲ್ಲೆ ಹರಿಯುವುದರಿಂದ ಸಮಸ್ಯೆಗಳು ಸೃಷ್ಟಿಯಾಗಿ ಕೆಲವು ಪ್ರದೇಶಗಳಲ್ಲಿ ಈ ಹಿಂದೆ ಒಳಚರಂಡಿ ಪೈಪ್‌ಗ್ಳು ಖಾಸಗಿ ಜಾಗದಲ್ಲಿ ಹಾದುಹೋಗಿದ್ದು ಇದು ಇದೀಗ ಸಮಸ್ಯೆ ಸೃಷ್ಟಿಸಿದೆ ಹಿಂದೂರುದ್ರಭೂಮಿ ಸಮೀಪ ಮಳೆಗೆ ಗುಡ್ಡ ಕುಸಿತವಾಗಿದ್ದು ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನ ಮಂಜೂರು ಆಗಿದ್ದರೂ ಕೆಆರ್‌ಡಿಸಿಎಲ್‌ನಿಂದ ಕಾಮಗಾರಿ ಆರಂಭಗೊಂಡಿಲ್ಲ. ವಾರ್ಡ್‌ನ ಹೆಚ್ಚಿನ ರಸ್ತೆಗಳು ಕಾಂಕ್ರೀಟೀ ಕರಣಗೊಂಡು ಅಭಿವೃದ್ಧಿ ಯಾಗಿದೆ. ಈ ವಾರ್ಡ್ ಹೆಚ್ಚು ವಸತಿ ಸಮುಚ್ಚಯಗಳನ್ನು ಹೊಂದಿದೆ. ಅದಕ್ಕನು ಗುಣವಾಗಿ ಒಳಚರಂಡಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಉನ್ನತೀಕರಣ ಆಗಿಲ್ಲ. ಮಳೆಯ ನೀರು ಒಳಚರಂಡಿಗೆ ಬಿಡುವುದರಿಂದ ಮಳೆಗಾಲದಲ್ಲಿ ಒಳಚರಂಡಿ ನೀರು ಉಕ್ಕೇರಿ ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ಸಮಸ್ಯೆ ಸೃಷ್ಠಿಸುತ್ತಿದೆ. ಎಂದು ಸ್ಥಳೀಯರೋರ್ವರು ಹೇಳುತ್ತಾರೆ.
Related Articles
-ಕದ್ರಿ ಮೈದಾನಿನಲ್ಲಿ ಸುಸಜ್ಜಿತ ಬಯಲು ರಂಗಮಂದಿರ ಹಾಗೂ ಸುಸಜ್ಜಿತ ಶೌಚಾಲಯ
– ಕದ್ರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣ, ಭೂಗತ ಕೇಬಲ್ ಹಾಗೂ ಪಾರಂಪರಿಕ ವಿನ್ಯಾಸಗಳ ಬೀದಿದೀಪ ಅಳವಡಿಕೆ
– ಕದ್ರಿ ಕೈಬಟ್ಟಲು ಒಳಚರಂಡಿ ಪುನರ್‌ನಿರ್ಮಾಣ, ರಸ್ತೆಗಳ ಕಾಂಕ್ರಿಟೀಕರಣ
– ಹಿಂದೂ ರುದ್ರಭೂಮಿ ಪುನರ್‌ನಿರ್ಮಾಣ
-ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸಿಟಿಆಸ್ಪತ್ರೆ ವೃತ್ತ, ಮಲ್ಲಿಕಟ್ಟೆ ವೃತ್ತ ಹಾಗೂ ಕದ್ರಿ ದೇವಸ್ಥಾನ ರಸ್ತೆಯಲ್ಲಿ ಆಕರ್ಷಕ ವಿನ್ಯಾಸಗಳ ಸರ್ಕಲ್‌ಗಳ ನಿರ್ಮಾಣ
-ಒಳರಸ್ತೆಗಳ ವ್ಯವಸ್ಥಿತ ಕಾಂಕ್ರಿಟೀಕರಣ
Advertisement
ಕದ್ರಿ ದಕ್ಷಿಣ ವಾರ್ಡ್ಭೌಗೋಳಿಕ ವ್ಯಾಪ್ತಿ: ಕೃಷ್ಣ ನರ್ಸಿಂಗ್‌ಹೋಂ ಪ್ರದೇಶ, ಕರಂಗಲ್ಪಾಡಿ ಮಾರುಕಟ್ಟೆ ಎಡಭಾಗ, ಬಂಟ್‌ಹಾಸ್ಟೆಲ್, ಸಿ.ವಿ.ನಾಯಕ್ ಹಾಲ್, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ, ಯೋಗೇಶ್ವರ ಮಠ (ಜೋಗಿ), ನಂತೂರು, ಜಂಕ್ಷನ್, ಕದ್ರಿ ಕೈಬಟ್ಟಲು. ಕರಾವಳಿ ಲೇನ್, ಪಿಂಟೋಸ್ ಲೇನ್, ಕದ್ರಿಕಂಬ ಮುಂತಾದ ಪ್ರದೇಶಗಳನ್ನು ಒಳಗೊಂಡಿದೆ.
ಪಾಲಿಕೆ ಅನುದಾನ: 7 ಕೋಟಿ ರೂ. ಒಟ್ಟು ಮತದಾರರು 4950
ನಿಕಟಪೂರ್ವ ಕಾರ್ಪೊರೇಟರ್-ಅಶೋಕ್ ಡಿ.ಕೆ. (ಕಾಂಗ್ರೆಸ್) 5 ವರ್ಷಗಳಲ್ಲಿ ಬಂದ ಅನುದಾನ
2014 15 : 1.74 ಕೋಟಿರೂ.
2015 16 : 57.89 ಲಕ್ಷ ರೂ.
2016 17 : 2.03 ಕೋಟಿ ರೂ.
2017 18 : 1.31 ಕೋಟಿ ರೂ.
2018 19 : 1.76 ಕೋಟಿ ರೂ. ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು
ಕದ್ರಿ ದಕ್ಷಿಣ ವಾರ್ಡ್‌ನಲ್ಲಿ ಅತೀ ಹೆಚ್ಚು ವಸತಿ ಸಮುಚ್ಚಯಗಳಿವೆ. ಧಾರ್ಮಿಕವಾಗಿಯೂ ಪ್ರಾಮುಖ್ಯತೆ ಇದೆ. ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಅನುಷ್ಠಾನಗೊಳಿಸುವ ಕಾರ್ಯ ಮಾಡಿದ್ದೇನೆ.ಇಲ್ಲಿನ ಬಹುತೇಕ ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲಾಗಿದೆ. ಕೆಲವು ಕಡೆ ತಾಂತ್ರಿಕ ಹಾಗೂ ಕಾನೂನು ತೊಡಕುಗಳಿಂದ ಬಾಕಿ ಉಳಿದಿದೆ. ಕ್ಷೇತ್ರದಲ್ಲಿನ ಹಳೆಯ ಒಳಚರಂಡಿ ವ್ಯವಸ್ಥೆ ಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಈಗಾಗಲೇ ಶೇ.80 ರಷ್ಟು ಕಾರ್ಯಆಗಿದೆ.
-ಅಶೋಕ್ ಡಿ.ಕೆ.ನಿಕಟಪೂರ್ವ ಕಾರ್ಪೊರೇಟರ್ - ಕೇಶವ ಕುಂದರ್