ಕಡೂರು: ಗ್ರಾಮ ಪಂಚಾಯಿತಿ ಚುನಾವಣೆ ಡಿ.22 ರಂದು ನಡೆಯಲಿದ್ದು, ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಲ್ಲಿ ಅಸಮಾಧಾನ ಮೂಡುತ್ತಿರುವುದಾಗಿ ಅನೇಕ ಗ್ರಾಮಗಳಲ್ಲಿನ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಬೆನ್ನೆಲುಬು. ವಿಧಾನಸಭೆ,ಪರಿಷತ್, ಸಂಸತ್ ಹೀಗೆ ಅನೇಕಚುನಾವಣೆಗಳಲ್ಲಿ ತಮ್ಮ ತಮ್ಮ ನಾಯಕರ ಪರವಾಗಿ ದುಡಿಯುವ ಗ್ರಾಮೀಣ ಭಾಗಗಳಲ್ಲಿನಜನರೇ ನಿಜವಾದ ಕಾರ್ಯಕರ್ತರು. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಬಹುತೇಕ ಎಲ್ಲಾ ಪಕ್ಷಗಳಲ್ಲಿನ ಮುಖಂಡರೇಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಗಳ ಚಿಹ್ನೆ ಇಲ್ಲದಿದ್ದರೂ ಪಕ್ಷದ ಬೆಂಬಲಿತಅಭ್ಯರ್ಥಿಗಳಿರುತ್ತಾರೆ. ಆದರೆ ಕಡೂರು ಕ್ಷೇತ್ರದಲ್ಲಿಇದುವರೆಗೂ ಯಾವುದೇ ಪಕ್ಷದ ಬೆಂಬಲಿತಅಭ್ಯರ್ಥಿಗಳ ಬಗ್ಗೆ ಚಕಾರವೆತ್ತದ ಮುಖಂಡರು,ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು ನಮ್ಮಬೆಂಬಲಕ್ಕೆ ಬಾರದಿರುವುದು ವಿಪರ್ಯಾಸ. ನಾವುಗಳು ನಮ್ಮ ನಾಯಕರೆಂದು ಹಗಲಿರುಳುದುಡಿದು ಎಂಎಲ್‌ಎ, ಎಂಎಲ್‌ಸಿ, ಎಂಪಿಗಳನ್ನಾಗಿ ಮಾಡಿದ್ದೇವೆ. ಆದರೆ ನಮ್ಮ ಚುನಾವಣೆಗಳಲ್ಲಿ ಇವರು ತೋರುತ್ತಿರುವ ತಾತ್ಸಾರ ಗ್ರಾಮೀಣ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆಎಂದು ಹೆಸರೇಳಲಿಚ್ಛಿಸದ ಗ್ರಾಮ ಪಂಚಾಯಿತಿಚುನಾವಣೆಗೆ ಸ್ಪ ರ್ಧಿಸಿರುವ ಅಭ್ಯರ್ಥಿಯ ಅಳಲಾಗಿದೆ.
ಗ್ರಾಪಂ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ತಕ್ಷಣ ಇವನು ನಮ್ಮ ಪಕ್ಷದವನು,ನಾವೇ ನಿಲ್ಲಿಸಿ ಗೆಲ್ಲಿಸಿದ್ದು, ನಮ್ಮ ಪಕ್ಷ 30-40 ಗ್ರಾಮ ಪಂಚಾಯಿತಿಗಳಲ್ಲಿ ಜಯ ಸಾ ಧಿಸಿದೆ. ನಮ್ಮೆಲ್ಲರ ಹೋರಾಟ ಮತ್ತು ಕಾರ್ಯಕರ್ತರ ಸಂಘಟನೆಯೆ ಗೆಲುವಿಗೆ ಕಾರಣವಾಗಿದೆ ಎಂದು ಅಬ್ಬರದ ಪ್ರಚಾರ ಪಡೆಯಲು ಮುಂದಾಗುವ ನಾಯಕರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟಎದುರಾಗಲಿದೆ ಎಂಬ ಆರೋಪಗಳು ಗ್ರಾಮ ಪಂಚಾಯಿತಿಗಳಿಂದ ಕೇಳಿ ಬರುತ್ತಿದೆ.ಮೊದಲೆಲ್ಲ ಮತದಾರರನ್ನು ಹುಡುಕಿಕೊಂಡುಅವರ ಮನೆಯ ಬಾಗಿಲಿಗೆ ತೆರಳುತ್ತಿದ್ದೆವು.ಇದೀಗ ಸಂಜೆಯಾಗುತ್ತಿದ್ದಂತೆ ಅವರೆ ನಮ್ಮನ್ನು ಹುಡುಕುತ್ತಿರುತ್ತಾರೆ. ಎಲ್ಲಿ ಹೋದೆಯೊಮಾರಾಯ ನಾವೆಲ್ಲ ನಿಮ್ಮ ಪರವಾಗಿ ಬಂದಿದ್ದೇವೆ. ಏನು ವ್ಯವಸ್ಥೆ ಇದೆ ಎಂದು ಕೇಳುತ್ತಾರೆ. ವ್ಯವಸ್ಥೆ ಕಲ್ಪಿಸದಿದ್ದರೆ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಾರೆ. ಎದುರಾಳಿಗೆ ಇದರಿಂದ ಲಾಭವಾಗುತ್ತದೆ ಎಂಬ ಭಯ, ಆತಂಕದಿಂದ ಸಾಲ ಮಾಡಿಯಾದರೂ ವ್ಯವಸ್ಥೆ ಮಾಡಬೇಕಾದ ಸ್ಥಿತಿ ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾಲ ಮಾಡಿಯಾದರೂ ಗೆಲ್ಲುವ ಅನಿವಾರ್ಯತೆ :
ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ನಡೆದಂತೆ ಚುನಾವಣೆಗಳು ನಡೆಯುತ್ತಿಲ್ಲ. ಗೆಲ್ಲಬೇಕೆಂದರೆಎದುರಾಳಿ ಸರಿ ಸಮಾನವಾಗಿ ಹೋರಾಟ ಮಾಡಬೇಕು ಹಣ, ಮದ್ಯ, ಬಾಡೂಟ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ನೀಡಬೇಕಾದ ಅನಿವಾರ್ಯತೆ ಕಂಡು ಬಂದಿದ್ದು, ಸುಮಾರು 8ಲಕ್ಷಕ್ಕೂ ಹೆಚ್ಚಿನ ವೆಚ್ಚವಾಗುತ್ತದೆ. ಸಾಲ ಮಾಡಿಯಾದರು ತುಪ್ಪ ತಿನ್ನು ಎಂಬ ಗಾದೆಯಂತೆ ಸಾಲ ಮಾಡಿಯಾದರೂ ಗೆಲ್ಲಬೇಕಾದ ಅನಿವಾರ್ಯತೆ ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
–ಎ.ಜೆ.ಪ್ರಕಾಶಮೂರ್ತಿ