ಶಿವಮೊಗ್ಗ: ಅವಧಿ ಮುಗಿದ ಎರಡೂವರೆ ವರ್ಷಗಳ ಬಳಿಕ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯತ್‌ಗೆ ಕೊನೆಗೂ ಚುನಾವಣೆಘೋಷಣೆಯಾಗಿದೆ. ವಾರ್ಡ್ ಮೀಸಲಾತಿ ಆಕ್ಷೇಪಣೆ ಕಾರಣಕ್ಕೆ ಚುನಾವಣೆ ಮುಂದೂಡಿಕೆಯಾಗಿತ್ತು. ಸರಕಾರ ತಿಂಗಳ ಹಿಂದೆ ಪರಿಷ್ಕೃತ ಮೀಸಲಾತಿಪ್ರಕಟಿಸಿದ್ದು ಯಾವುದೇ ತಕರಾರು ಇಲ್ಲದೇ ಅಂತಿಮಗೊಂಡಿದೆ.
ಬಹಳ ವರ್ಷದಿಂದ ಚುನಾವಣೆ ನಿರೀಕ್ಷೆಯಲ್ಲಿದ್ದಅಭ್ಯರ್ಥಿಗಳು ಚುನಾವಣೆಗೆ ಅಣಿಯಾಗಿದ್ದಾರೆ.ಪರಿಷ್ಕೃತ ಮೀಸಲಾತಿ ಅಂತಿಮಗೊಂಡದಿನದಿಂದಲೇ ಚುನಾವಣೆ ಎದುರು ನೋಡುತ್ತಿದ್ದರು.ಭದ್ರಾವತಿಯ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ನಿಧನದ ನಂತರ ರಾಜಕೀಯ ಸಮೀಕರಣಬದಲಾವಣೆಗೊಂಡಿದ್ದು ತ್ರಿಕೋನ ಸ್ಪರ್ಧೆನಡೆಯುವ ಸಾಧ್ಯತೆ ಇದೆ. ಇನ್ನು ತೀರ್ಥಹಳ್ಳಿಯಲ್ಲಿ15ರಲ್ಲಿ 14 ಸ್ಥಾನದಲ್ಲಿ ಗೆಲುವು ಸಾಧಿ ಸಿದ್ದಬಿಜೆಪಿ ಈ ಬಾರಿಯೂ ಅ ಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಬದಲಾದ ಸಮೀಕರಣ: 40 ವರ್ಷದ ಭದ್ರಾವತಿಯರಾಜಕೀಯ ಇತಿಹಾಸದಲ್ಲಿ ಸಂಗಮೇಶ್, ಅಪ್ಪಾಜಿ ಗೌಡ ನಡುವೆಯೇ ನೇರ ಹಣಾಹಣಿ ಇರುತ್ತಿತ್ತು.ಇದೇ ಮೊದಲ ಬಾರಿಗೆ ಬಿಜೆಪಿಯೂ ಅಖಾಡದಲ್ಲಿ ಮಿಂಚುವ ಸಾಧ್ಯತೆಗಳಿವೆ. ಕಳೆದ ಚುನಾವಣೆಯಲ್ಲಿಅಪ್ಪಾಜಿ ಗೌಡ ಬಣದವರು ಮೇಲುಗೈ ಸಾಧಿಸಿದ್ದರು. ನಂತರ ಸ್ಥಾನದಲ್ಲಿ ಸಂಗಮೇಶ್ ಬಣ ಇತ್ತು. ಈಗ ಜೆಡಿಎಸ್‌ಗೆ ನಾಯಕರೇ ಇಲ್ಲದಂಥ ಸ್ಥಿತಿ ಇದೆ.ಅಪ್ಪಾಜಿ ಗೌಡ ಪುತ್ರ ಅಜಿತ್‌ಗೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ. ಜೈ ಶ್ರೀರಾಮ್ ಘೋಷಣೆ ವಿವಾದದಿಂದ ಬಿಜೆಪಿ ಜತೆ ನೇರ ಯುದ್ಧಕ್ಕೆಇಳಿದಿರುವ ಶಾಸಕ ಸಂಗಮೇಶ್‌ಗೂ ಕೂಡ ಇದು ಪ್ರತಿಷ್ಠೆಯ ಚುನಾವಣೆ.
ಇನ್ನು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲುಹವಣಿಸುತ್ತಿರುವ ಬಿಜೆಪಿಗೆ ಇದು ಪ್ರತಿಷ್ಠೆಯಚುನಾವಣೆ. ಈಚೆಗೆ ನಡೆದ ಗಲಾಟೆಯಲ್ಲಿ ಸಂಗಮೇಶ್ ಅವರು ಬಿಜೆಪಿಯ ಮುಖಂಡರುಕಾರ್ಪೊರೇಶನ್ ಎಲೆಕ್ಷನ್ ಗೆದ್ದು ಬರಲಿ ಎಂದು ಸವಾಲು ಹಾಕಿದ್ದನ್ನು ಇಲ್ಲಿ ಮರೆಯುವಂತಿಲ್ಲ. ಹೀಗಾಗಿ ಬಿಜೆಪಿ ಕೂಡ ಗೆಲ್ಲಲು ಎಲ್ಲಾ ತಂತ್ರಕ್ಕೆರೆಡಿಯಾಗಿದೆ. ಆದರೆ ನಾಯಕತ್ವ ಕೊರತೆ ಕಾಡುತ್ತಿದೆ.ಸ್ಥಳೀಯವಾಗಿ ಗುರುತಿಸಿಕೊಂಡಿರುವ ನಾಯಕರುಕೆಲವೇ ಏರಿಯಾಗಳಿಗೆ ಸೀಮಿತರಾಗಿದ್ದಾರೆ. ಹಾಗಾಗಿಜಿಲ್ಲಾಮಟ್ಟದ ನಾಯಕರು ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ.
ಏ.27ಕ್ಕೆ ಮತದಾನ-30ಕ್ಕೆ ಫಲಿತಾಂಶ : ಭದ್ರಾವತಿಯ 35 ವಾರ್ಡ್‌ಗಳು, ತೀರ್ಥಹಳ್ಳಿಯ15 ವಾರ್ಡ್‌ಗಳಿಗೆ ಏ.27ರಂದು ಮತದಾನನಡೆಯಲಿದೆ. ಏ.30ರಂದು ಮತ ಎಣಿಕೆನಡೆಯಲಿದೆ. ಏ.8ರಿಂದ ಅ ಧಿಸೂಚನೆ ಆರಂಭವಾಗಲಿದ್ದು ಏ.15 ನಾಮಪತ್ರ ಸಲ್ಲಿಸಲುಕೊನೆ ದಿನ. ಏ.16 ನಾಮಪತ್ರ ಪರಿಶೀಲನೆ, ಏ.19 ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಅಪ್ಪಾಜಿಗೌಡರ ಆಶೀರ್ವಾದ ನಮ್ಮಮೇಲಿದೆ. ಎಲ್ಲ ವಾರ್ಡ್‌ಗಳಲ್ಲೂನಮಗೆ ಬೆಂಬಲ ಇದೆ. ಕಳೆದ ಬಾರಿ 35ರಲ್ಲಿ23ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಈಬಾರಿಯೂ ಒಂದೆರಡರಲ್ಲಿ ವ್ಯತ್ಯಾಸ ಆಗಬಹುದು.-
ಆರ್. ಕರುಣಾಮೂರ್ತಿ, ಭದ್ರಾವತಿ ಜೆಡಿಎಸ್ ತಾಲೂಕು ಅಧ್ಯಕ್ಷ
ಬೂತ್‌ಮಟ್ಟದಲ್ಲಿ ನಮ್ಮ ಕಾರ್ಯಕರ್ತರಿದ್ದುತಳಮಟ್ಟದಲ್ಲಿ ಸಂಘಟನೆ ಮಾಡಿದ್ದೇವೆ. ಈ ಬಾರಿ ಪೂರ್ಣ ಬಹುಮತ ಪಡೆದು ನಗರಸಭೆಯಲ್ಲಿ ಅಧಿಕಾರ ಹಿಡಿಯುತ್ತೇವೆ.
– ಆರ್.ಪ್ರಭಾಕರ್,ಭದ್ರಾವತಿ ತಾಲೂಕು ಬಿಜೆಪಿ ಅಧ್ಯಕ್ಷ
-ಶರತ್ ಭದ್ರಾವತಿ