Advertisement
ಕೋವಿಡ್ 19 ಸೋಂಕು ಕಾರಣ ರಾಜಕೀಯ ಚಟುವಟಿಕೆಗಳು ತಣ್ಣಗಿತ್ತು. ಗ್ರಾಮಪಂಚಾಯ್ತಿಗಳಚುನಾವಣೆಗೆಚುನಾವಣಾಆಯೋಗ ತಯಾರಿ ಆರಂಭಿಸಿದೊಡನೆ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಗರಿಗೆದರಿತ್ತು. ಇದೀಗ ನಗರ ಸಂಸ್ಥೆಗಳ ಅಧ್ಯಕ್ಷ, ಉಪಾದ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆಯಾಗಿರುವುದರಿಂದ ನಗರ ಪ್ರದೇಶಗಳಲ್ಲೂ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ.
Related Articles
Advertisement
ರಾಮನಗರ: 2016ರಲ್ಲಿ ಗ್ರಾಮ ಪಂಚಾಯ್ತಿಯಾಗಿದ್ದಬಿಡದಿ ಸ್ಥಳೀಯ ಸಂಸ್ಥೆ ಪುರಸಭೆಯಾಗಿ ಬಡ್ತಿ ಪಡೆದುಕೊಂಡಿದೆ. ಅದೇ ವರ್ಷ ಬಿಡದಿ ಪುರಸಭೆ ಅಸ್ತಿತ್ವಕ್ಕೆ ಬಂದಿದೆ. ಮೊದಲ ಅವಧಿ ಪೂರ್ಣಗೊಂಡು 22 ತಿಂಗಳುಕಳೆದು ಹೋಗಿದೆ. ಎರಡನೇ ಅವಧಿಗೆ ಈ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ವಿಳಂಬ ಏಕೆ?: ಬಿಡದಿ ಪುರಸಭೆ ಎರಡನೇ ಅವದಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆಯಾಗಿ ಹೆಲವಾರು ತಿಂಗಳಾಗಿವೆ. ಪ್ರಥಮ ಅವಧಿಯಲ್ಲಿ ಅಧ್ಯಕ್ಷಸ್ಥಾನಪರಿಶಿಷ್ಟಜಾತಿಮಹಿಳೆಗೆಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನದಲ್ಲಿ ವೆಂಕಟೇಶಮ್ಮ ರಾಮಕೃಷ್ಣಯ್ಯ, ಉಪಾಧ್ಯಕ್ಷ ಸ್ಥಾನದಲ್ಲಿ ವೈಶಾಲಿ ಮತ್ತು ಲಕ್ಷ್ಮೀ ದೇವಿ ಅಧಿಕಾರ ಚಲಾಯಿಸಿದ್ದಾರೆ. ಮೊದಲ ಅವಧಿ ಮುಗಿದು 2018ರ ಡಿಸೆಂಬರ್‌ನಲ್ಲಿ ಮೊದಲ ಅವಧಿ ಮುಕ್ತಾಯವಾಗಿದೆ.
ಬಿಡದಿ ಸೇರಿದಂತೆ ರಾಜ್ಯದ ಇನ್ನು ಕೆಲವು ಪುರಸಭೆ, ನಗರಸಭೆಗಳಿಗೆ ಮೀಸಲಾತಿ ನಿಗದಿಪಡಿಸಿತು. ಆದರೆ ಈಮೀಸಲಾತಿಪ್ರಶ್ನಿಸಿ ರಾಜ್ಯದ ಬೇರೆಡೆ ನ್ಯಾಯಾಲಯದ ಮೆಟ್ಟಿಲೇರಿರಿಂದ್ದರಿಂದ ಬಿಡದಿ ಪುರಸಭೆಯ ಮೀಸಲಾತಿ ನೆನೆಗುದಿಗೆ ಬಿತ್ತು. 2019ರ ಡಿಸೆಂಬರ್‌ನಲ್ಲಿ ಸರ್ಕಾರ ಮೀಸಲು ಮರು ನಿಗದಿಯಾಗಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಬಿಸಿಎಂ(ಎ) ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗಧಿಯಾಗಿದೆ. ಆದರೆ
ಇನ್ನು ಚುನಾವಣೆ ನಿಗದಿಯಾಗಿಲ್ಲ. ರಾಜ್ಯ ಸರ್ಕಾರ ಕೆಲವು ನಗರಸಭೆಗಳ 9ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಹೊರೆಡಿಸಿದೆ. ಚುನಾವಣಾ ಆಯೋಗಇನ್ನಷ್ಟೇಈ ಸಂಸ್ಥೆಗಳಿಗೆ ಚುನಾವಣೆ ದಿನ ನಿಗದಿ ಮಾಡಬೇಕಿದೆ. ಇದೇ ಸಂದರ್ಭ ದಲ್ಲಿ ಬಿಡದಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಆಡಲಿತದಚುಕ್ಕಾಣಿ ಪುನಃ ಜನಪ್ರತಿನಿಧಿಗಳಿಗೆ ಕೈಗೆ ಬರಲಿದೆ ಎಂದು ನಾಗರಿಕರು ಕಾಯುತ್ತಿದ್ದಾರೆ.