ಮೂಡುಬಿದಿರೆ : ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿರುವ 14 ದಿನಗಳ ಲಾಕ್ ಡೌನ್ ಗೆ ಮೂಡುಬಿದಿರೆ ಪರಿಸರ ಸಂಪೂರ್ಣ ಸ್ತಬ್ಧವಾಗಿದೆ.
ಬುಧವಾರ ಬೆಳಗ್ಗೆ ನಿಗದಿತ ಅವಧಿ ಮೀರಿ ಹತ್ತು ಗಂಟೆಯ ಬಳಿಕವೂ ವ್ಯಾಪಾರ ನಿರತರಾಗಿದ್ದ ಮೂಡುಬಿದಿರೆ ಬಸ್ ನಿಲ್ದಾಣದ ತರಕಾರಿ ಅಂಗಡಿಗಳ ಮೇಲೆ ಪುರಸಭಾ ಅಧಿಕಾರಿಗಳು ಎಚ್ಚರಿಕೆ ನೀಡಿ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ಕೇಸ್ ದಾಖಲಿಸಿ ದಂಡನೆ ಕ್ರಮ ಜರಗಿಸಿದ್ದಾರೆ.
ಇದನ್ನೂ ಓದಿ : ಪ್ರೀತಿ ಅಂದ್ರೆ ಇದು : ಹೆಂಡತಿ ಆಸೆ ಈಡೇರಿಸಲು 7 ಲಕ್ಷ ಖರ್ಚು ಮಾಡಿದ ಗಂಡ..!
ಉಳಿದಂತೆ ಹತ್ತುಗಂಟೆಯವರೆಗೆ ಎಲ್ಲ ಅವಶ್ಯಸೇವೆ ಜನತೆಗೆ ಒದಗಿ ಬಂದಿವೆ. ಬಳಿಕ ಎಲ್ಲ ಮೆಡಿಕಲ್ ಹೊರತು ಎಲ್ಲ ಸೇವೆಗಳೂ ಬಂದ್. ಅಲ್ಲೊಂದಿಲ್ಲೊಂದು ಖಾಸಗಿ ವಾಹನಗಳ ಅನಿವಾರ್ಯ ಓಡಾಟ ಹೊರತುಪಡಿಸಿ ಎಲ್ಲವೂ ಬಂದ್ ಆಗಿದೆ.