Advertisement

ಎಲ್‌ಒಸಿ ವಹಿವಾಟು ಸ್ಥಗಿತ

06:06 AM Apr 19, 2019 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಎರಡು ಸ್ಥಳಗಳಲ್ಲಿ ಪಾಕಿಸ್ಥಾನದ ಜತೆಗಿನ ವ್ಯಾಪಾರ ವಹಿವಾಟನ್ನು ಭಾರತ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಎರಡೂ ದೇಶಗಳ ಗಡಿಗಳ ನಡುವೆ ವ್ಯಾಪಾರದ ಹೆಸರಿನಲ್ಲಿ ಶಸ್ತ್ರಾಸ್ತ್ರಗಳು, ಅಮಲು ಪದಾರ್ಥಗಳು ಹಾಗೂ ನಕಲಿ ಕರೆನ್ಸಿಗಳನ್ನು ಕಳ್ಳಸಾಗಣೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗುರುವಾರ ಈ ನಿಷೇಧ ಹೇರಲಾಗಿದೆ. ಬಾರಾಮುಲ್ಲಾದ ಸಲಾಮಾಬಾದ್‌ ಹಾಗೂ ಪೂಂಛ… ಜಿಲ್ಲೆಯ ಚಕ್ಕನ್‌-ದಾ-ಬಾಗ್‌ನಲ್ಲಿ ವ್ಯಾಪಾರ-ವಹಿವಾಟುಗಳನ್ನು ಸ್ಥಗಿತಗೊಳಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಕಣಿವೆ ರಾಜ್ಯದ ರಾಜಕೀಯ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದು, “ಇದೊಂದು ಚುನಾವಣಾ ಗಿಮಿಕ್‌’ ಎಂದು ಆರೋಪಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next