Advertisement

ಸಾಲಮನ್ನಾ ವಿವರದ ಪುಸ್ತಕ ಶೀಘ್ರ ಬಿಡುಗಡೆ

11:41 AM Sep 09, 2019 | Suhan S |

ಹಾಸನ: ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವ ವಿವರದ ಪುಸಕ್ತವನ್ನು ಜೆಡಿಎಸ್‌ ಸಿದ್ಧಪಡಿಸಿದ್ದು, ಈ ವಾರದಲ್ಲೇ ಆ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

Advertisement

500 ಕೋಟಿ ರೂ. ಕೃಷಿ ಸಾಲ ಮನ್ನಾ: ನಗರದ ಚನ್ನಪಟ್ಟಣ ಬಡಾವಣೆಯಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಭೆಯಲ್ಲಿ ಮಾತ ನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ರೈತರು ಸಹಕಾರ ಬ್ಯಾಂಕುಗಳ ಮೂಲಕ ಪಡೆದಿದ್ದ ಸುಮಾರು 500 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ 1,500 ಕೋಟಿ ರೂ. ಮನ್ನಾ ಆಗಲಿದೆ. ಜಿಲ್ಲಾ ಸಹಕಾರಿ ಬ್ಯಾಂಕಿಗೆ ಈಗಾಗಲೇ 352 ಕೋಟಿ ರೂ. ಸಾಲ ಮನ್ನಾದ ಹಣ ಬಂದಿದ್ದು, ರೈತರಿಗೂ ಹೊಸ ಸಾಲ ವಿತರಣೆಯಾಗಿದೆ. ಇನ್ನೂ 23 ಸಾವಿರ ಕುಟುಂಬಗಳ ಕೃಷಿ ಸಾಲ ಮನ್ನಾಗೆ 115 ಕೋಟಿ ರೂ. ಸಾಲ ಎಚ್‌ಡಿಸಿಸಿ ಬ್ಯಾಂಕಿಗೆ ಬರಬೇಕಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಣ ಬಿಡುಗಡೆ ಮಾಡದೇ ದ್ವೇಷದ ರಾಜ ಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತೆಂಗು ಬೆಳೆಗಾರರಿಗೆ ಪರಿಹಾರ: ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ರಾಜ್ಯದ ತೆಂಗು ಬೆಳೆ ಹಾನಿಗೆ 200 ಕೋಟಿ ರೂ. ಬಿಡುಗಡೆ ಮಾಡಿದ್ದು, ಪೈಕಿ ಹಾಸನ ಜಿಲ್ಲೆಗೆ 90 ಕೋಟಿ ರೂ. ಹಣ ಬಂದಿದೆ ಎಂದ ರೇವಣ್ಣ ಅವರು, ಆಲೂಗಡ್ಡೆ ಬಿತ್ತನೆ ಬೀಜಕ್ಕೆ ಸರ್ಕಾರ ಶೇ.50 ರಷ್ಟು ಸಹಾಯಧನ ನೀಡಿದೆ ಎಂದರು.

ಅಭಿವೃದ್ಧಿ ಯೋಜನೆ ಸ್ಥಗಿತವಾಗಲು ಬೀಡೋಲ್ಲ: ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಹಾಸನ ಜಿಲ್ಲೆಗೆ ಮಂಜೂರಾದ ಯಾವ ಅಭಿವೃದ್ಧಿ ಯೋಜ ನೆಯೂ ಸ್ಥಗಿತವಾಗಲು ಬಿಡುವುದಿಲ್ಲ. ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೆ 250 ಕೋಟಿ ರೂ., ಸರ್ಕಾರಿ ಎಂಜಿನಿ ಯರಿಂಗ್‌ ಕಾಲೇಜು ಅಭಿವೃದ್ಧಿಗೆ 60 ಕೋಟಿ ರೂ., ಮೊಸಳೆ ಹೊಸಹಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಕು ಕಟ್ಟಡಕ್ಕೆ 66 ಕೋಟಿ ರೂ., ಪಾಲಿಟೆಕ್ನಿಕ್‌ ಕಟ್ಟಡಕ್ಕೆ 18 ಕೋಟಿ ರೂ. ಹಾಸನದ ಗಂಧದ ಕೋಠಿ ಆವರಣದಲ್ಲಿ ಪಿ.ಯೂ. ಕಾಲೇಜು ಹಾಗೂ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ 50 ಕೋಟಿ ರೂ., ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ಮಂಜೂರಾಗಿದೆ. ಹಾಸನ – ದುದ್ದ ನಡುವೆ ಚತುಷ್ಫತ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ. ಮಂಜೂರಾಗಿದೆ ಈ ಯಾವುದೇ ಕೆಲಸಗಳೂ ನಿಲ್ಲಲು ಬಿಡಲ್ಲ ಎಂದರು.

ಹಾಸನದಲ್ಲಿ ಜೆಡಿಎಸ್‌ ಗೆಲ್ಲಿಸುವುದೇ ನನ್ನ ಗುರಿ: ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರವನ್ನು ಜೆಡಿಎಸ್‌ ಕಳೆದುಕೊಂಡಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾದ ನನಗೆ ಹಾಸನ ವಿಧಾನಸಭಾ ಕ್ಷೇತ್ರದ ಮತದಾರರು 15 ಸಾವಿರ ಮತಗಳ ಲೀಡ್‌ ಕೊಟ್ಟು ಜೆಡಿಎಸ್‌ ಪ್ರಬಲ ವಾಗಿದೆ ಎಂಬ ಸಂದೇಶ ನೀಡಿದ್ದಾರೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸುವುದೇ ನನ್ನ ಗುರಿ ಎಂದು ಅವರು ಶಪಥ ಮಾಡಿದರು.

Advertisement

ಈಗಿನಿಂದಲೇ ಪಕ್ಷ ಸಂಘಟನೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಸನ ಕ್ಷೇತ್ರದಲ್ಲಿ 30 ಸಾವಿರ ಲೀಡ್‌ನಿಂದ ಗೆಲ್ಲುವು ದರಲ್ಲಿ ಅನುಮಾನವಿಲ್ಲ ಎಂದರು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನಾನು ಕಟಿಬದ್ಧನಾಗಿದ್ದು, ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಸಂಘಟಿಸುವೆ ಎಂದರು.

ಶಾಸಕ ಕೆ.ಎಸ್‌.ಲಿಂಗೇಶ್‌, ಪಕ್ಷದ ಮುಖಂಡ ರಾದ ಪಟೇಲ್ ಶಿವರಾಂ, ಎಂ.ಜಿ. ದೊಡ್ಡೇಗೌಡ, ಬಿ.ವಿ.ಕರೀಗೌಡ, ರಾಜೇಗೌಡ, ಚನ್ನವೀರಪ್ಪ, ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್‌, ಹಾಸನ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌. ದ್ಯಾವೇಗೌಡ, ಜಿಲ್ಲಾ ಸಹ ಕಾರಿ ಒಕ್ಕೂಟದ ಅಧ್ಯಕ್ಷ ಶೇಷಾದ್ರಿ, ಜಿಲ್ಲಾ ಜೆಡಿಎಸ್‌ ವಕ್ತಾರ ಎಚ್.ಎಸ್‌ ರಘು, ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next