Advertisement

ಸಾಲದ ಕಂತು ಪಾವತಿ ಮುಂದೂಡಿಕೆ ಅವಧಿ ಅಂತ್ಯ?

12:07 PM Aug 30, 2020 | sudhir |

ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ದೇಶದ ಉದ್ಯಮಗಳು, ಖಾಸಗಿ ವ್ಯಕ್ತಿಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌, 6 ತಿಂಗಳು ಸಾಲದ ಕಂತು ಪಾವತಿ ಮುಂದೂಡುವುದಕ್ಕೆ ಅವಕಾಶ ನೀಡಿತ್ತು. ಈ ಅವಧಿಯನ್ನು ಆ.31ಕ್ಕೇ ಸೀಮಿತಗೊಳಿಸುವ ಸಾಧ್ಯತೆಯಿದೆಯೆಂದು ವಿಶ್ಲೇಷಿಸಲಾಗಿದೆ. ಅದಕ್ಕೂ ಜಾಸ್ತಿ ಮುಂದುವರಿಸಿದರೆ, ಸಾಲ ಕಟ್ಟಬೇಕೆಂಬ ಬಗ್ಗೆ ಸಾಲಗಾರರ ಬದ್ಧತೆಯೇ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂದೂಡಿಕೆ ಅವಧಿ ಈ ತಿಂಗಳಾಂತ್ಯಕ್ಕೆ ನಿಲ್ಲಲಿದೆ ಎನ್ನಲಾಗಿದೆ.

Advertisement

ಎಚ್‌ಡಿಎಫ್ಸಿ ಮುಖ್ಯಸ್ಥ ದೀಪಕ್‌ ಪಾರೆಖ್‌, ಕೊಟಕ್‌ ಮಹೀಂದ್ರ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಉದಯ್‌ ಕೊಟಕ್‌ ಮುಂದೂಡಿಕೆ ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕೆಲವರು ಅನಗತ್ಯವಾಗಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಭಾರತದಲ್ಲಿ ಕೋವಿಡ್ ತನ್ನ ತೀವ್ರಸ್ವರೂಪಕ್ಕೆ ಮುಟ್ಟಿದಾಗ ಆರ್‌ಬಿಐ ಮಧ್ಯಪ್ರವೇಶಿಸಿ, ಮಾ.1ರಿಂದ ಆ.31ರವರೆಗೆ ಕಂತು ಪಾವತಿ ಮುಂದೂಡಬಹುದು ಎಂದು ಹೇಳಿತ್ತು. ಆದರೆ ಈ ವೇಳೆ ಬಡ್ಡಿಯನ್ನು ಯಥಾಸ್ಥಿತಿ ಕಟ್ಟಬೇಕೆಂದು ಹೇಳಲಾಗಿತ್ತು. ಇದು ಹಲವರ ವಿರೋಧಕ್ಕೂ ಕಾರಣವಾಗಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲೂ ಬಡ್ಡಿ ರದ್ದು ಮಾಡಬೇಕೆಂದು ವಾದಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next