Advertisement

ಸುವರ್ಣ ವಿಧಾನಸೌಧ: ಕೊರೊನಾ, ಲಾಕ್‌ ಡೌನ್‌ದಿಂದ ರಾಜ್ಯದ ಸಾರ್ವಜನಿಕ ಸಾಲದ ಪ್ರಮಾಣವು 2019-20 ಮತ್ತು 2020-21ನೇ ಸಾಲಿನಲ್ಲಿ ಶೇ. 31.38 ಹೆಚ್ಚಾಗಿದೆ ಎಂದು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿರುವ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಯಿಂದ ತಿಳಿದು ಬಂದಿದೆ.

Advertisement

ಲಾಕ್‌ಡೌನ್‌ ಸಮಯದಲ್ಲಿ ಉಂಟಾಗಿದ್ದ ಆದಾಯದ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರ ಹೆಚ್ಚುವರಿ ಸಾಲ ಮಾಡಿದೆ. ಇದು ಒಟ್ಟಾರೆ ಸಾಲದ ಪ್ರಮಾಣದಲ್ಲಿ ಏರಿಕೆಗೆ ಕಾರಣ ವಾಗಿದೆ. 2019-20ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಸಾರ್ವಜನಿಕ ಸಾಲ 2.34 ಲಕ್ಷ ಕೋಟಿ ಇತ್ತು.

2020-21ರ ವೇಳೆಗೆ ಇದು 3.07 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದಿಂದ 2019-20ರ ಅಂತ್ಯದಲ್ಲಿ 13908 ಕೋಟಿ ಸಾಲ ಮತ್ತು ಮುಂಗಡವಿತ್ತು, 2020-21ರಲ್ಲಿ ಇದು ಕೂಡ ದ್ವಿಗುಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದೆ. ಹಾಗೆಯೇ ಕಳೆದ ಹಣಕಾಸು ವರ್ಷದಲ್ಲಿ ಜಿಎಸ್‌ಡಿಪಿಯ ಶೇ.5ರಷ್ಟು (ಸುಮಾರು 80 ಸಾವಿರ ಕೋಟಿ) ಸಾಲವನ್ನು ಪಡೆದಿರುವುದು ಸಾಲದ ಹೊರೆ ಹೆಚ್ಚಳಕ್ಕೆ ಇನ್ನೊಂದು ಕಾರಣವಾಗಿದೆ.

ಇದನ್ನೂ ಓದಿ:- ಮಡಿಕೇರಿ: ಪಿಎಸ್‍ಐ ಹೃದಯಾಘಾತದಿಂದ ನಿಧನ

ಕೊರೊನಾದಿಂದ ಜಿಎಸ್‌ಟಿ ಆದಾಯದಲ್ಲೂ ಕೊರತೆಯಾಗಿತ್ತು. ಇದರ ಜತೆಗೆ ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಹಾರವನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಇದರಿಂದ ಸಾಲದ ಹೊರೆ 18 ಸಾವಿರ ಕೋಟಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಆದಾಯವೂ ಕುಸಿತವಾಗಿತ್ತು. ಇದು ಕೂಡ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ.

Advertisement

ರಾಜ್ಯದ ಆದಾಯದ ಮೂಲಗಳಲ್ಲೂ ಕುಸಿತವಾಗಿದೆ. ಜಿಎಸ್‌ಟಿ 2019-20ರಲ್ಲಿ 42.147 ಕೋಟಿ ರೂ.ಗಳಿಂದ 2020-21ರಲ್ಲಿ 37.711 ಕೋಟಿ ರೂ.ಗಳಿಗೆ ಇಳಿಸಿದೆ. ಸರ್ಕಾರದ ವಿವಿಧ ಆದಾಯದ ಮೂಲಗಳಾದ ರಾಜ್ಯ ಅಬಕಾರಿ, ಅಂಚೆಚೀಟಿಗಳು, ನೋಂದಣಿ ಶುಲ್ಕ ಹಾಗೂ ಇತರೆ ತೆರಿಗೆಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಸರ್ಕಾರದ ಸಾಲವು ವರ್ಷದಲ್ಲಿ 96506 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಇದರಲ್ಲಿ 18,421 ಕೋಟಿ ರೂ. ಬಜೆಟ್‌ ಸಾಲವು ಒಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next