Advertisement

ಎಲ್‌ಜೆಪಿ-ಬಿಜೆಪಿ ನಡುವೆ ಸೀಟು ಹಂಚಿಕೆ ಅಂತಿಮ

08:25 AM Dec 22, 2018 | Karthik A |

ಹೊಸದಿಲ್ಲಿ: ಲೋಕಸಭೆ ಚುನಾವಣೆಗಾಗಿ ಸ್ಥಾನ ಹಂಚಿಕೆ ನಿಟ್ಟಿನಲ್ಲಿ ಮುನಿಸಿಕೊಂಡಿದ್ದ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ರನ್ನು ಸಮಾಧಾನಪಡಿಸುವಲ್ಲಿ ಬಿಜೆಪಿ ಗೆದ್ದಿದೆ. ಆರ್‌ಎಲ್‌ಎಸ್‌ಪಿ ಯುಪಿಎ ಸೇರ್ಪಡೆಯಾಗಿದ್ದರಿಂದ ಎಲ್‌ಜೆಪಿಗೆ 6 ಲೋಕಸಭಾ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆಗಳಾಗಿವೆ. ಸಚಿವ ಅರುಣ್‌ ಜೇಟ್ಲಿ, ರಾಮ್‌ ವಿಲಾಸ್‌ ಪಾಸ್ವಾನ್‌, ಸಂಸದ ಚಿರಾಗ್‌ ಪಾಸ್ವಾನ್‌ ನಡುವಿನ ಮಾತುಕತೆ ವೇಳೆ ಈ ಚರ್ಚೆ ನಡೆದಿದೆ. ಈ ಬಗ್ಗೆ ಶನಿವಾರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಸೂತ್ರದ ಪ್ರಕಾರ ಪಾಸ್ವಾನ್‌ಗೆ ರಾಜ್ಯಸಭಾ ಸ್ಥಾನ, ಎಲ್‌ಜೆಪಿಗೆ ಬಿಹಾರದಲ್ಲಿ 5, ಉ.ಪ್ರ ಅಥವಾ ಝಾರ್ಖಂಡ್‌ನ‌ಲ್ಲಿ 1 ಸ್ಥಾನ ಹೀಗೆ ಒಟ್ಟು 7 ಸ್ಥಾನಗಳ ಡೀಲ್‌ ಮಾಡಲಾಗಿದೆ. 

Advertisement

25ಕ್ಕೆ ಕೆಸಿಆರ್‌-ಮೋದಿ ಭೇಟಿ: ಫೆಡರಲ್‌ ಫ್ರಂಟ್‌ ರಚಿಸಲು ಹೊರಟಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ 25ರಂದು ಪ್ರಧಾನಿ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ. 25ರಿಂದ 3 ದಿನಗಳ ಕಾಲ ದೆಹಲಿಯಲ್ಲಿರುವ ರಾವ್‌ ಅವರು ಮಾಯಾವತಿ, ಅಖಿಲೇಶ್‌ರನ್ನು  ಭೇಟಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next