Advertisement

ಬ್ರಿಟನ್‌ ಪ್ರಧಾನಿಯಾಗಿ ಲಿಸ್‌ ಟ್ರಾಸ್‌ ಪ್ರಮಾಣ ವಚನ

09:48 PM Sep 06, 2022 | Team Udayavani |

ಲಂಡನ್‌: ಕನ್ಸರ್ವೇಟಿವ್‌ ಪಕ್ಷದ ಮುಖಂಡರಾಗಿ ನೇಮಕಗೊಂಡಿರುವ ಲಿಸ್‌ ಟ್ರಾಸ್‌ ಅವರು ಬ್ರಿಟನ್‌ನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಇದಕ್ಕಿಂತ ಮೊದಲು ಅವರು ಸ್ಕಾಟ್ಲೆಂಡ್‌ನ‌ಲ್ಲಿರುವ ಬಾಲ್‌ಮೋರಲ್‌ ಕ್ಯಾಸಲ್‌ನಲ್ಲಿ ಇರುವ ಅರಮನೆಯಲ್ಲಿ ರಾಣಿ ಎರಡನೇ ಎಲಿಜಬೆತ್‌ (96) ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಾಣಿ ಟ್ರಾಸ್‌ ಅವರನ್ನು ದೇಶದ ನೂತನ ಪ್ರಧಾನಿಯಾಗಿ ನೇಮಕ ಮಾಡಿದರು.

ಇದಕ್ಕಿಂತ ಮೊದಲು ಪ್ರಧಾನಿಯಾಗಿರುವ ಬೋರಿಸ್‌ ಜಾನ್ಸನ್‌ ಅವರು ರಾಣಿ ಎಲಿಜಬೆತ್‌ ಅವರನ್ನು ಭೇಟಿಯಾಗಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದರು. 2ನೇ ಎಲಿಜಬೆತ್‌ ಅವಧಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ 15ನೇ ಪ್ರಧಾನಿ ಲಿಸ್‌ ಟ್ರಾಸ್‌ ಆಗಿದ್ದಾರೆ.

1952ರಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ಹಾಲಿ ರಾಣಿಯ ಅವಧಿಯಲ್ಲಿ ಪ್ರಮಾಣ ಸ್ವೀಕರಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಮಾಜಿ ಸಚಿವ ರಿಷಿ ಸುನಕ್‌ ಅವರು ಹೊಸ ಸಂಪುಟದಲ್ಲಿ ಸ್ಥಾನಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next