Advertisement

ಮೌಲ್ಯಗಳಿಂದ ಬದುಕು ಸುಂದರ

01:26 PM Mar 31, 2019 | Team Udayavani |

ಚಿತ್ತಾಪುರ: ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಮುಲ್ಲಾಮಾರಿ ತೀರಕ್ಷೇತ್ರದ ಶಂಕರಲಿಂಗ ಆಶ್ರಮದ ಅಭಿನವ ಶರಣ ಶಂಕರಲಿಂಗ ಮಹಾರಾಜರು ಹೇಳಿದರು.

Advertisement

ಪಟ್ಟಣದ ಭೋವಿ ವಡ್ಡರ ಗಲ್ಲಿಯಲ್ಲಿ ಮುಲ್ಲಾಮಾರಿ ತೀರಕ್ಷೇತ್ರ ಸೊಂತದ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ 38ನೇ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಮದ್ಯಪಾನ ಇನ್ನಿತರೆ ದುಶ್ಚಟಗಳಿಂದ ಸಾಂಸಾರಿಕಕ ಬದುಕು ಹಾಳಾಗುತ್ತದೆ. ದುಡಿತಕ್ಕೆ, ಕಾಯಕಕ್ಕೆ ಒಳಗಾಗಿ ಸುಂದರ ಬದುಕು ಕಟ್ಟಿಕೊಳ್ಳಲು ಶ್ರಮಿಸಬೇಕು ಎಂದು ಹೇಳಿದರು. ಏಪ್ರಿಲ್‌ 12 ರಿಂದ 14 ರವರೆಗೆ ಸೊಂತದ ಮುಲ್ಲಾಮಾರಿ ತೀರಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಭೋವಿ ವಡ್ಡರ ಸಮಾಜದವರು ದುಡಿದು ಜೀವನ ಸಾಗಿಸುವವರಾಗಿದ್ದು, ಅಷ್ಟೇ ಮುಗªರು ಮತ್ತು ಅವಿದ್ಯಾವಂತರು. ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ಶಂಕರಲಿಂಗ ಮಹಾರಾಜರ ಕಾರ್ಯ ಶ್ಲಾಘನೀಯ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಬರಗಾಲದ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಅದರಲ್ಲಿ ಶಂಕರಲಿಂಗ ಮಹಾರಾಜರು ಗೋಶಾಲೆ ಪ್ರಾರಂಭಿಸಿ 100 ಗೋವುಗಳ ರಕ್ಷಣೆ ಮತ್ತು ಲಾಲನೆ ಪಾಲನೆ ಮಾಡುತ್ತಿರುವ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.

Advertisement

ಪುರಸಭೆ ಸದಸ್ಯ ನಾಗರಾಜ ಭಂಕಲಗಿ, ಆಶ್ರಮದ ಸಂಚಾಲಕ ಎಸ್‌.ಎಂ.ಭಕ್ತಕುಂಬಾರ ಮಾತನಾಡಿದರು. ಪುರಸಭೆ ಸದಸ್ಯರಾದ ವಿನೋದ ಗುತ್ತೇದಾರ, ಸಂತೋಷ ಚೌಧರಿ, ಎಎಸ್‌ಐ ಅಂಬವ್ವ, ಮುಖಂಡರಾದ ಭೀಮರಾಯ ಹೋತಿನಮಡಿ, ಬಸವರಾಜ ಚಿನ್ನಮಳ್ಳಿ, ಕರಣಕುಮಾರ
ಅಲ್ಲೂರ, ಭೀಮಾಶಂಕರ ಚೌಧರಿ, ರಾಮು ಹರವಾಳ, ವಿಜಯಕುಮಾರ ಹರವಾಳ, ಸಂಜು ಚೌಧರಿ, ತಮ್ಮಣ್ಣ ಚೌಧರಿ, ಯಂಕಪ್ಪ ಚೌದರಿ, ಹಣಮಂತ ಚೌಧರಿ, ನಾಗಮೂರ್ತಿ ಚೌಧರಿ, ಚೌಡಪ್ಪ ಚೌಧರಿ, ಶಾಮರಾವ ಚೌಧರಿ, ಕೃಷ್ಣ ಚೌಧರಿ, ಜಗನ್ನಾಥ ಗಾಯಕವಾಡ ಇದ್ದರು.

ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ರೈಲ್ವೆ ನಿಲ್ದಾಣದಿಂದ ಪ್ರಮುಖ ಬೀದಿಗಳ ಮೂಲಕ ಭೋವಿ ವಡ್ಡರ ಗಲ್ಲಿವರೆಗೆ ಶಂಕರಲಿಂಗ ಮಹಾರಾಜರ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next