Advertisement

‘ತಾಂತ್ರಿಕ ಶಿಕ್ಷಣದಿಂದ ಸ್ವಾಭಿಮಾನದ ಬದುಕು’

12:48 AM Jun 25, 2019 | Team Udayavani |

ಮೂಡುಬಿದಿರೆ: ತಾಂತ್ರಿಕ ಶಿಕ್ಷಣದಿಂದ ಖಾಸಗಿ, ಸರಕಾರಿ ಉದ್ಯೋಗ ,ಮಾತ್ರವಲ್ಲ ಸ್ವಂತ ಉದ್ಯಮವನ್ನೂ ಸ್ಥಾಪಿಸಿ ಸ್ವಾಭಿಮಾನದ ಬದುಕು ನಡೆಸಲೂ ಅವಕಾಶವಿದೆ ಎಂದು ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.

Advertisement

ಮೂಡುಬಿದಿರೆ ಕೊಡಂಗಲ್ಲು ಎ.ಜಿ.ಸೋನ್ಸ್‌ ಐ.ಟಿ.ಐ.ಯ ವಾರ್ಷಿಕೋತ್ಸವ ಮತ್ತು 2018-19ನೇ ಸಾಲಿನ ಯಶಸ್ವೀ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶು ಪಾಲ ಮಂಜುನಾಥ ಕೋಟ್ಯಾನ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ’ಸಂಸ್ಥೆಗಳಿಗೆ ಪರಿಸರ ಸ್ನೇಹಿ ಸಂಶೋಧನಾ ಚಟುವಟಿಕೆ ಅಗತ್ಯ; ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಂಸ್ಥೆ ಯೂ ವಿದ್ಯಾರ್ಥಿಗಳೂ ಬೆಳವಣಿಗೆ ಕಾಣಲು ಸಾಧ್ಯ’ ಎಂದು ಹೇಳಿದರು.

ಹಳೆ ವಿದ್ಯಾರ್ಥಿಗಳಾದ ಅಟೋ ಝೋನ್‌ ಪಾಲುದಾರರಾದ ರತ್ನಾಕರ ನಾಯಕ್‌, ಸುಧೀರ್‌ ಕುಮಾರ್‌, ಮಂಗಳೂರು ಪ್ರೇಮ್‌ ಎಲೆಕ್ಟ್ರಾನಿಕ್ಸ್‌ನಪ್ರೇಮನಾಥ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಮಹಾವೀರ ಕಾಲೇಜ್‌ ಟ್ರಸ್ಟ್‌ನ ಕೋಶಾಧಿಕಾರಿ ರಾಮ್‌ಪ್ರಸಾದ್‌ ಭಟ್, ಸದಸ್ಯರಾದ ರಾಮನಾಥ ಭಟ್, ಜಯಪ್ರಕಾಶ್‌ ಪಡಿವಾಳ್‌, ಐ.ಟಿ.ಐ.ಪ್ರಾಂಶುಪಾಲ ಜಯರಾಮ್‌ ಶೆಟ್ಟಿಗಾರ್‌, ವಿದ್ಯಾರ್ಥಿ ನಾಯಕ ಪ್ರೇಮ್‌ ಸಾಗರ್‌, ಉಪನಾಯಕ ಸುಶಾಂತ್‌, ಕಾರ್ಯದರ್ಶಿ ವಸಂತ, ಜತೆ ಕಾರ್ಯದರ್ಶಿ ಮುಜಾಮಿಲ್, ಸಾಂಸ್ಕೃತಿಕ ಕಾರ್ಯದರ್ಶಿ ನೌಫಾಲ್, ಕ್ರೀಡಾ ಕಾರ್ಯದರ್ಶಿ ಅಜಯ್‌ ನಾಯಕ್‌ ವೇದಿಕೆಯಲ್ಲಿದ್ದರು.

ಕಳೆದ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ಪದವಿ ಪ್ರದಾನ ಹಾಗೂ ಪ್ರಸಕ್ತ ಸಾಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆದರ್ಶ ವಿದ್ಯಾರ್ಥಿ ಶ್ರೀನಿವಾಸ ಭಟ್ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next