ಗೋರಖ್‌ಪುರ: ರಾಖೀ ಶ್ರೀವಾತ್ಸವ ಎಂಬ ಮಹಿಳೆ ಮೃತಪಟ್ಟು 7 ತಿಂಗಳ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಜೀವಂತವಾಗಿದ್ದಳು. ಪ್ರತಿದಿನ ಆನ್‌ಲೈನ್‌ನಲ್ಲಿದ್ದು, ಫೇಸ್‌ಬುಕ್, ಟ್ವಿಟರ್ ಅಪ್‌ಡೇಟ್ ಮಾಡುತ್ತಾ, ತಾನು ಇಹಲೋಕ ತ್ಯಜಿ ಸಿರುವ ವಿಷಯ ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದಳು!
ಅರೆ, ಯಾವುದೋ ಹಾರರ್ ಸಿನಿಮಾದ ಕಥೆ ಹೇಳುತ್ತಿದ್ದೀರಾ ಎಂದು ಕೇಳಬೇಡಿ. ಇದು ಕಥೆಯಲ್ಲ. ಉತ್ತರ ಪ್ರದೇಶದ ಗೋರಖ್ ಪುರ ದಲ್ಲಿ ನಡೆದ ಸತ್ಯ ಕಥೆ!
ಆದರೆ ಇಲ್ಲಿ ಸತ್ತವಳನ್ನು 7 ತಿಂಗಳ ಕಾಲ ಜಾಲತಾಣಗಳಲ್ಲಿ ಜೀವಂತವಾಗಿ ಇರಿಸಿದ್ದು ಆಕೆಯ ಪತಿ, ಖ್ಯಾತ ಸರ್ಜನ್ ಡಾ. ಧಮೇಂದ್ರ ಪ್ರತಾಪ್ ಸಿಂಗ್. ಆತನನ್ನು ಮತ್ತು ಕೊಲೆಗೆ ಸಹಕರಿ ಸಿದ ಆತನ ಇಬ್ಬರು ಸಹಾಯಕರನ್ನು ಪೊಲೀ ಸರು ಈಗ ಬಂಧಿಸಿದ್ದಾರೆ.
ಆಗಿದ್ದೇನು?: ರಾಖೀ ಧರ್ಮೇಂದ್ರನನ್ನು ಮದುವೆಯಾಗುವಾಗಲೇ ಆತನಿಗೆ ಮದುವೆಯಾಗಿತ್ತು. ಈ ವಿಚಾರ ಮೊದಲ ಪತ್ನಿಗೆ ತಿಳಿದು ಆತನನ್ನು ರಾಖೀಯಿಂದ ದೂರ ಮಾಡಲು ಪ್ರಯತ್ನಿಸಿದ್ದರು. ಅದೇ ವೇಳೆ ರಾಖೀಗೂ ವಿಷಯ ತಿಳಿದು ಅವರು ಧರ್ಮೇಂದ್ರ ನಿಂದ ದೂರಾಗಿ ಮನೀಶ್‌ನನ್ನು ಮದುವೆ ಯಾಗಿದ್ದಳು. ಬಳಿಕವೂ ಆಕೆ ಧರ್ಮೇಂದ್ರ ಜೊತೆ ಸಂಪರ್ಕ ದಲ್ಲಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಒಂದು ಬಾರಿ ಪತಿ ಮನೀಶ್ ಜತೆ ನೇಪಾಳಕ್ಕೆ ತೆರಳಿದ ರಾಖೀ, ಕೆಲ ದಿನಗಳ ಬಳಿಕ ಪತಿಯನ್ನು ವಾಪಸ್ ಕಳುಹಿಸಿ, ಧರ್ಮೇಂದ್ರನನ್ನು ಭೇಟಿ ಯಾಗುವ ಸಲು ವಾಗಿ ಆಕೆ ಅಲ್ಲೇ ಉಳಿದಿದ್ದಳು. ಧರ್ಮೇಂದ್ರ ನೇಪಾಳದಲ್ಲಿ ರಾಖೀ ಯನ್ನು ಕಮರಿ ಯೊಂದಕ್ಕೆ ತಳ್ಳಿ ಕೊಲೆ ಮಾಡಿದ್ದ. ಬಳಿಕ ಆಕೆಯ ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುತ್ತಿದ್ದ. ಜೂನ್‌ನಲ್ಲಿ ರಾಖೀ ಕುಟುಂಬ ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ವಿಚಾರ ಬೆಳಕಿಗೆ ಬಂತು.