ನನ್ನ ತಂಗಿಯ ಮಗಳು ಶ್ವೇತಾ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ನನ್ನ ಬೆಂಗಳೂರು ಓಡಾಟ ಹೆಚ್ಚಾಗಿದೆ. ಒಮ್ಮೆ ಹೋದರೆ 20-25 ದಿನಗಳು ಅಲ್ಲಿರಬೇಕು. ಅಲ್ಲಿಂದ ಹಿಂದಿರುಗಿದ ನಂತರ ಬಿಟ್ಟುಹೋಗಿದ್ದ ಮನೆಯನ್ನು ಕ್ಲೀನ್ ಮಾಡಿಸುವ ಸಂಭ್ರಮ. ಮನೆಯಲ್ಲಿ ಯಾವ ಸಾಮಾನು ಇದೆಯೋ, ಯಾವುದನ್ನು ತರಿಸಬೇಕೋ ನೋಡಿ ತರಿಸಬೇಕು. ನಾನು ಸೋಪು, ಸೋಪಿನ ಪೌಡರ್, ಹಾರ್ಪಿಕ್ ಇತ್ಯಾದಿ ಹಾಕಿಡುವ ಬುಟ್ಟಿ ಹೊರಗೆ ತೆಗೆದಾಗ, ಲಿರಿಲ್ ಸೋಪು ಕಣ್ಣಿಗೆ ಬಿತ್ತು. ನಾನು ಸಂತೂರ್ ಪ್ರಿಯೆ. ನನ್ನ ಸಹೋದರಿಗೆಂದು ಎರಡು ತಿಂಗಳ ಹಿಂದೆ ಲಿರಿಲ್ ಸೋಪು ತರಿಸಿ¨ªೆ. ಅವಳು ನನ್ನಂತೆ ಕೆಲವು ವಿಚಾರಗಳಲ್ಲಿ ಮರೆವಿನ ಮಹಾಮೂರ್ತಿ. ಎಲ್ಲಿಗಾದರೂ ಹೊರಟಾಗ ಮರೆಯದೆ ತೆಗೆದುಕೊಂಡು ಹೋಗಬೇಕೆಂದು ಸೋಪು, ಬ್ರಶ್, ಟೂತ್‌ಪೆಸ್ಟ್, ಔಷಧಿಗಳನ್ನು ಬಹಳ ಜೋಪಾನವಾಗಿ ತೆಗೆದಿಟ್ಟುಕೊಂಡು ಮರೆತುಹೋಗಿರುವ ಉದಾಹರಣೆಗಳೂ ಇವೆ. ಕಳೆದ ಸಲ ಅವಳು ನಮ್ಮ ಮನೆಗೆ ಬಂದಾಗ ಸೋಪು ಮರೆತು ಬಂದಿದ್ದಳು. ನಮ್ಮ ಮನೆಯಲ್ಲಿ ತತ್‌ಕ್ಷಣ ಅಂಗಡಿಗೆ ಹೋಗಿ ತಂದು ಕೊಡುವವರು ಯಾರೂ ಇಲ್ಲ. ಆದ್ದರಿಂದ ಲಿರಿಲ್ ಸೋಪು ತರಿಸಿಟ್ಟಿ¨ªೆ. ಅವಳು ಈ ಸಲ ಬಂದಾಗ, “”ನನಗೇನೋ ಅಲರ್ಜಿ ಆಯ್ತು ಕಣೆ. ಅದಕ್ಕೆ ಈಗ ಮೆಡಿಮಿಕ್ಸ್ ಉಪಯೋಗಿಸ್ತಿದ್ದೀನಿ” ಎಂದಳು.
ಯಾಕೋ ಏನೋ ತಕ್ಷಣ ನನ್ನ ಬಾಲ್ಯದ ನೆನಪಾಯಿತು. ನಾವು ಚಿಕ್ಕವರಿ¨ªಾಗ ಒಂದೇ ಸೋಪನ್ನು ಮನೆಯಲ್ಲಿ ಎಲ್ಲರೂ ಉಪಯೋಗಿಸುತ್ತಿ¨ªೆವು. ಪೇಸ್ಟ್, ಬ್ರಶ್ ಹೆಸರೇ ಗೊತ್ತಿರಲಿಲ್ಲ. ನಂಜನಗೂಡಿನ ಹಲ್ಲುಪುಡಿಯನ್ನೇ ಉಪಯೋಗಿಸುತ್ತಿ¨ªೆವು. ಇನ್ನೊಂದು ತರಹ ಹಲ್ಲುಪುಡಿ ಬರುತ್ತಿತ್ತು. ತ್ರಿಕೋನಾಕಾರದ ಹಸಿರು ಬಿಳಿಮಿಶ್ರಿತ ಪ್ಯಾಕೆಟ್‌ನಲ್ಲಿ ಬಿಳಿ ಹಲ್ಲುಪುಡಿ ಇರುತ್ತಿತ್ತು. ಹಾಗೆಯೇ ತಿನ್ನಬೇಕೆನ್ನುವಷ್ಟು ರುಚಿಯಾಗಿರುತ್ತಿತ್ತು. ಬೇರೆ ಊರಿಗೆ ಹೋಗುವಾಗ ಪ್ರತ್ಯೇಕ ಸೋಪು, ಟವೆಲ್ ತೆಗೆದುಕೊಂಡು ಹೋಗಬೇಕೆಂಬ ತಿಳಿವಳಿಕೆಯೂ ಇರಲಿಲ್ಲ. ನಮ್ಮನೆಯಲ್ಲಿ ನಮ್ಮಮ್ಮನದು ಒಂದು ವಾಚ್, ಒಂದು ಪರ್ಸ್ ಇತ್ತು. ಯಾರೇ ಊರಿಗೆ ಹೋದರೂ ಅವುಗಳನ್ನು ತೆಗೆದುಕೊಂಡು ಹೋಗುತ್ತಿ¨ªೆವು. ನಾವು ರಜೆಗಳಲ್ಲಿ ಆಗಾಗ್ಗೆ ಭೇಟಿ ಮಾಡುತ್ತಿದ್ದ ನಮ್ಮ ದೊಡ್ಡಮ್ಮನ ಅಣ್ಣನ ಮಕ್ಕಳು ಈ ಬಗ್ಗೆ ನಮ್ಮನ್ನು ಹಾಸ್ಯ ಮಾಡಿದರೂ ನಾವು ಪೆದ್ದುಪೆ¨ªಾಗಿರುತ್ತಿ¨ªೆವು.
ಆಗೆÇÉಾ ಚಪ್ಪಲಿ ಕಿತ್ತಾಗ ಮಾತ್ರ ಮತ್ತೂಂದು ಜೊತೆ ಚಪ್ಪಲಿ ತೆಗೆದುಕೊಡುತ್ತಿದ್ದರು. ಕೆಲಸಕ್ಕೆ ಸೇರಿದ ಮೇಲೂ ಈ ಪದ್ಧತಿಯಲ್ಲಿ ಬದಲಾವಣೆಯಾಗಿರಲಿಲ್ಲ. ಕೆಲಸಕ್ಕೆ ಸೇರಿದ ನಂತರ ನಮ್ಮ ನಮ್ಮ ಪೆನ್ನು, ಪುಸ್ತಕ, ಊಟದ ಡಬ್ಬಿ ಇಟ್ಟುಕೊಳ್ಳಲು ಹ್ಯಾಂಡ್‌ಬ್ಯಾಗ್ ಕೊಳ್ಳಬೇಕಾಯಿತು. ಊರಿಗೆ ಹೊರಟಾಗ ಒಂದು ಅಥವಾ ಎರಡು ಕಿಟ್‌ಬ್ಯಾಗ್‌ಗಳಲ್ಲಿ ಎಲ್ಲರ ಬಟ್ಟೆ ತುರುಕುತ್ತಿ¨ªೆವು.
ಈಗ ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ನಾಲ್ವರಿಗೂ ಬೇರೆ ಬೇರೆ ಸೋಪ್, ಟವಲ್, ಶ್ಯಾಂಪೂ, ಬಾಚಣಿಗೆ, ಟೂತ್‌ಪೇಸ್ಟ್, ಹೇರ್ ಆಯಿಲ್, ಡಿಯೋಡ್ರೆಂಟ್, ಜೊತೆಗೆ ಫೇಸ್‌ವಾಷ್, ನೇಲ್‌ಪಾಲಿಶ್, ಕ್ರೀಮ್‌ಗಳು, ಐಲೈನರ್, ಲಿಪ್‌ಸ್ಟಿಕ್ ಇವೆÇÉಾ ನೋಡುತ್ತಿದ್ದರೆ ಈಗಿನ ಕಾಲದವರು ಎಷ್ಟು ಅದೃಷ್ಟವಂತರು ಎನ್ನಿಸುತ್ತದೆ. ನಮ್ಮ ಕಾಲದಲ್ಲಿ ನಮ್ಮ ಹತ್ತಿರ ಹೆಚ್ಚಿನ ಬಟ್ಟೆಗಳು ಇರುತ್ತಿರಲಿಲ್ಲ. ಇರುತ್ತಿದ್ದ ಮೂರು ಅಥವಾ ನಾಲ್ಕು ಜೊತೆ ಬಟ್ಟೆ ಒಗೆಸಿ, ಅದನ್ನು ದಿಂಬಿನ ಕೆಳಗಿಟ್ಟು ಐರನ್ ಮಾಡಿಕೊಂಡು ಧರಿಸುತ್ತಿ¨ªೆವು. ಈಗಿನವರಲ್ಲಿ ಹೆಚ್ಚಿನ ಮಂದಿ ಪ್ರತಿದಿನ ಬೇರೆ ಉಡುಪು ತೊಡುತ್ತಾರೆ. ಹದಿನೈದು ದಿನಗಳಿಗೊಮ್ಮೆ ಒಗೆದ ಬಟ್ಟೆಗಳನ್ನೆಲ್ಲ ದೊಡ್ಡಬ್ಯಾಗ್‌ಗೆ ಹಾಕಿ ಐರನ್ ಅಂಗಡಿಗೆ ಕಳಿಸುತ್ತಾರೆ. ಮನೆಯಲ್ಲಿ ಐರನ್ ಬಾಕ್ಸ್ ಇದ್ದರೂ ಅದನ್ನು ಬಳಸಲು ಮನಸ್ಸಿಲ್ಲವೋ, ಬಿಡುವಿಲ್ಲವೋ ತಿಳಿಯದು.
ಈ ಸಲ ಬೆಂಗಳೂರಿಗೆ ಹೋಗಿ¨ªಾಗ ನಾನು ಹೊರಗೆ ತೆಗೆದುಕೊಂಡು ಹೋಗುವ ಹ್ಯಾಂಡ್‌ಬ್ಯಾಗ್ ಒ¨ªೆಯಾಗಿತ್ತು. “”ಶ್ವೇತಾ, ಬೇರೆ ಬ್ಯಾಗ್ ಕೊಡು” ಎಂದೆ. ಅವಳು, “”ವಾರ್ಡ್‌ರೋಬ್‌ನ ಕೆಳಗಿನ ಖಾನೆಯಲ್ಲಿ ಪರ್ಸ್‌ಗಳಿವೆ, ಯಾವುದಾದರೂ ತೆಗೆದುಕೊಂಡು ಹೋಗು” ಎಂದಳು. ವಾರ್ಡ್‌ರೋಬ್ ತೆಗೆದವಳು ಅವಾಕ್ಕಾದೆ. ಸುಮಾರು 24-25 ಪರ್ಸ್‌ಗಳಿದ್ದವು. ಅವಳು-ಅವಳ ಪತಿದೇವರು ಉಪಯೋಗಿಸುವ ಚಪ್ಪಲಿ/ಶೂಗಳಿಡಲು ಒಂದು ಕೋಣೆಯೇ ಬೇಕೇನೋ? ಈಗಿನವರಿಗೆ ಎÇÉಾ ವಸ್ತುಗಳ ಮೇಲೂ ಅತಿಮೋಹ ಎಂದುಕೊಂಡೆ. ಆ ವೇಳೆಗೆ ಕೆಲಸದ ಜಯಮ್ಮ ಬಂದಳು. ಮೈಸೂರಿನ ಸುದ್ದಿಯನ್ನೆÇÉಾ ಹೇಳಿದ ಮೇಲೆ, “”ಅಮ್ಮ, ಈದಿನ ಮನೆ ಕ್ಲೀನ್ ಮಾಡ್ಕೊಟ್ಟು ಬೇಗ ಓಗ್ತಿàನಿ. ನಾಳೆ ಅಂಗಡಿ ಕಡೆ ಓಗೋಣ” ಎಂದಳು.
“”ಯಾಕೆ?”
“”ಅಮ್ಮ ನನ್ನ ಮಗಳು ಬೆಳಗ್ಗೆ 9 ಗಂಟೆಗೆ ಕೆಲಸಕ್ಕೋದ್ರೆ ಆರು ಗಂಟೆಗೆ ವಾಪಸು ಬರ್ತಾಳೆ. ನಮ್ಮನೆ ಗುಡಿಸೋದು, ಸಾರಿಸೋದು, ಪಾತ್ರೆ ತೊಳೆಯೋದು, ಬಟ್ಟೆ ಒಗೆಯೋದು ನಾನೇನೆ…”
“”ಮೊದಲಿಂದ ನೀನೇ ತಾನೇ ಮಾಡ್ತಿರೋದು. ಅವಳು ನಾಲ್ಕು ಮನೆ ಕೆಲಸ ಮಾಡ್ತಿ¨ªಾಳೆ. ನೀನು ಮಾಡೋದು ಒಂದೇ ಮನೆ ತಾನೇ?” ನಾನು ಕೇಳಿದೆ.
“”ನನ್ನ ಮೊಮ್ಮಗ ಅಂಗಡೀಲಿ ಕೆಲ್ಸ ಮಾಡ್ತಾನÇÉಾ ಶಾನೆ ಷೋಕಿ ಕಲಿತವೆ°. ನೀವು ಊರಿಗೋಗಿದ್ರÇÉಾ ಆಗ ಸಾವಾRರತ್ರ ಸಾಲ ಮಾಡಿ ಬೈಕು ತೊಗೊಂಡವೆ°. ಈಗ ಅತ್ರದ ಜಾಗಕ್ಕೂ ಬೈಕೇ ಬೇಕು ಅಂತಾನೆ. ಅದೆಂತ¨ªೋ ಸೋಪು, ಶಾಂಪೂ, ಕ್ರೀಮು, ಪೌಡ್ರು ತಂದಿಟ್ಕೊಂಡವೆ°. ದಿನಾ ಎರಡು ಜತೆ ಬಟ್ಟೆ ಒಗೆಯಕ್ಕಾಗ್ತಾನೆ. ದಿನಾ ಐರನ್ ಮಾಡ್ಕೊತಾನೆ. ಬಟ್ಟೆ ಆಕ್ಕೊಂಡು ಅದೇನೋ ಪುಸ್-ಪುಸ್ ಅಂತ ಆಕ್ಕೋತಾನೆ. ಘಮಘಮ ಅಂತಿರತ್ತೆ ಕಣವ್ವ”
ಜಯಮ್ಮ ಕೀಕೊಟ್ಟವಳಂತೆ ಮಾತಾಡುತ್ತಲೇ ಇದ್ದಳು, “”ನಮ್ಕಾಲದಲ್ಲಿ ನಮ್ಮ ನಮ್‌ಹಳ್ಳಿ ಬುಟ್ರೆ ಏನೂ ಗೊತ್ತಿರಿ°ಲ್ಲ. ಮೈಸೂರು ನೋಡಿದ್ದೇ ಮದುವೆಯಾದ್ಮೇಲೆ. ರೈಲು, ಕಾರು ಕಂಡಿದ್ದೇ ಇತ್ತೀಚೆಗೆ. ನನ್ನ ಮೊಮ್ಮಗ ಕಾರ್ಮಾಡ್ಕೊಂಡು ಫ್ರೆಂಡ್‌ಗಳ ಜತೆ ಧರ್ಮಸ್ಥಳಕ್ಕೆ, ಸುಬ್ರಮಣ್ಯಕ್ಕೆ ಒಂಟವೆ°. ಒಂದ್ಸಲ ವಿಮಾನದಲ್ಲಿ ಓಗ್ಬೇಕೊಂತ ಕನಸು ಕಾಣಾ¤ ಕುಂತವೆ°”
“”ಈಗಿನವರು ನಮ್ಮ ತರಹ ಇರಕ್ಕಾಗಲ್ಲ ಅಲ್ವಾ? ಕಾಲ ಬದಲಾಗಿದೆ”
“”ಏನು ಬದಲಾಗದೋ ಏನೋ? ನಮ್ಮಡುಗ ಶಾನೆ ಸೋಮಾರಿಯಾಗುºಟ್ಟವೆ°. ಬೈಕ್ ತಗೊಂಡೆ¾àಲೆ ನಡೆಯೋದೆ ಮರೆತುಬುಟ್ಟವೆ°”
ಅವಳ ಮಾತು ಕೇಳಿ ನನಗೆ ನಗು ಬಂತು. ಕಾಲ ಬದಲಾಗಿದೆ. ಕಾಲ ಬದಲಾದಂತೆ ನಾವು ಬದಲಾಗಬೇಕು. ಹಿಂದಿನಂತೆ ಎಲ್ಲವೂ ಇರಬೇಕು ಎನ್ನಲು ಸಾಧ್ಯವೆ?
ನಮ್ಮ ಕಾಲದಲ್ಲಿ ಎಲ್ಲಿಗೆ ಹೋಗಬೇಕಾದರೂ ನಟರಾಜ ಸರ್ವಿàಸೇ ಗತಿಯಾಗಿತ್ತು. ಊರುಗಳಿಗೆ ಹೋಗಬೇಕಾದರೆ ರೈಲು, ಬಸ್ಸು ಅವಲಂಬಿಸಿ¨ªೆವು. ಈಗ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಟೂವ್ಹೀಲರ್ ಇದ್ದೇ ಇರುತ್ತದೆ. ಹಿಂದೆ ಕಾರು ಶ್ರೀಮಂತರ ಕುರುಹಾಗಿತ್ತು. ಈಗ ಅದೊಂದು ಆವಶ್ಯಕತೆ ಎನ್ನಿಸಿದೆ.
ಈಗಿನವರ ಕನಸುಗಳೂ ದೊಡ್ಡದು, ಆಯ್ಕೆಗಳೂ ವಿಚಿತ್ರ. ನಮಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಆದರೆ ಬದಲಾವಣೆಯೇ ಬದುಕಲ್ಲವೆ?
– ಸಿ. ಎನ್. ಮುಕ್ತಾ