ಮುಂಬಯಿ: ಲಿಟ್ಲ ಸ್ಟಾರ್ ಗಣೇಶೋತ್ಸವ ಮಂಡಳ ವಿಕ್ರೋಲಿ ವತಿಯಿಂದ 35ನೇ ವಾರ್ಷಿಕ ಗಣೇಶೋತ್ಸವ ಆಚರಣೆಯು ಆ. 25ರಿಂದ ಆ. 26 ರವರೆಗೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಕ್ರೋಲಿ ಪೂರ್ವದ ಠಾಕೂರ್ ನಗರದ ಬಿಲ್ಡಿಂಗ್ 41 ಸುಸ್ವಾಗತಂನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.
ಆ. 25ರಂದು ಪ್ರಾತಿಷ್ಠಾಪನೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿಪೂಜೆ, ಅನ್ನಸಂತರ್ಪಣೆ ಹಾಗೂ ಆ. 26ರಂದು ವಿವಿಧ ಪೂಜೆಗಳು, ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ವಿಸರ್ಜನ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಲಿಟ್ಲ ಸ್ಟಾರ್ ಗಣೇಶೋತ್ಸವ ಮಂಡಳ ವಿಕ್ರೋಲಿ ಸಂಸ್ಥಾಪಕರುಗಳಾದ ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷ ಗಣೇಶ್ ಎಂ. ಶೆಟ್ಟಿ, ರಜನೀಶ್ ಚೌಭೆ, ಮನೀಷ್ ಚೌಭೆ, ಹರೀಶ್ ಕೋಟ್ಯಾನ್, ಪ್ರೀತೇಶ್ ಕೋಟ್ಯಾನ್, ಸಂತೋಷ್ ಗಾಯಕ್ವಾಡ್, ಅಜಯ್ ಪಾಣಿಕ್ಯರ್, ಹರೀಶ್ ಹೊಕ್ಕೊಳಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿತು.
ಚಾರ್ಲಿ ನ್ಪೋರ್ಟ್ಸ್ ಕ್ಲಬ್ ವಿಕ್ರೋಲಿ ಇದರ ಸಂಸ್ಥಾಪಕ ಮುಖೇಶ್ ಶೆಟ್ಟಿ, ವಿಕ್ರೋಲಿ ಬಂಟ್ಸ್‌ನ ಕೋಶಾಧಿಕಾರಿ ಯುಗಾನಂದ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಕೆ. ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ವಿ. ಶೆಟ್ಟಿ, ಸುನೀಲ್ ಆಗೆ¡, ಸಂಜೀವ ಆಗೆ¡, ಸತೀಶ್ ಮಹಾಬಲ ಶೆಟ್ಟಿ, ರಮೇಶ್ ಅಂಚನ್, ಚೇತನ್ ಜೋಶಿ, ಪವಾನ್ ಪಾಟೀಲ್, ಅನಿಲ್ ಗಾಬ್ಡೆ, ವಿಕ್ರೋಲಿ ಬಂಟ್ಸ್‌ನ ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎಲ್. ಶೆಟ್ಟಿ ಪೇಜಾವರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಉದಯ್ ಶೆಟ್ಟಿ, ಕಾರ್ಯದರ್ಶಿ ಭಾರತಿ ದಯಾನಂದ ಶೆಟ್ಟಿ, ಸುನೀತಾ ಶ್ರೀಧರ ಶೆಟ್ಟಿ, ಶಶಿಕಲಾ ಹೆಗ್ಡೆ, ಸಿದ್ಧೇಶ್ ಶೆಟ್ಟಿ, ಭಾರತಿ ಕೋಟ್ಯಾನ್, ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಇನ್ನಾಬಾಳಿಕೆ, ವಿಜಯ್ ಪಾಂಡೆ, ಪರೇಶ್ ದೇಸಾಯಿ, ರಾಜರಾಂ ಗುಪ್ತ, ಜಗದೀಶ್, ರೋಶನ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಪ್ರವೀಣ್ ವಸಂತ್ ಶೆಟ್ಟಿ ಮೊದಲಾದವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿಕ್ರೋಲಿಯ ವಿವಿಧ ಜಾತೀಯ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.