Advertisement

ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!

03:42 PM Apr 13, 2021 | Team Udayavani |

ನವ ದೆಹಲಿ : ಭಾರತ ಸಂಸ್ಕ್ಋತಿಯ ನೆಲೆಬೀಡು. ದೇವನಾಗರಿ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯ ಜನನವಾಗಿದ್ದು ಭಾರತದ ಪುಣ್ಯ ವೇದ ಭೂಮಿಯಲ್ಲಿ ಎನ್ನುವ ನಂಬಿಕೆ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಹಾಗೂ ಬಳಸುವ ಮತ್ತು ಉಳಿಸುವ ಜವಾಬ್ದಾರಿ ಭಾರತದಲ್ಲಿ ಜನಸಿದವರ ಎಲ್ಲರಿಗೂ ಇದೆ.

Advertisement

ಸಂಸ್ಕೃತವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಸಂಸ್ಕೃತ ಭಾಷೆ ಕಲಿಯಲು ಬಯಸುವ ಜನರಿಗೆ ಕೇಂದ್ರವು ಇತ್ತೀಚೆಗೆ ‘ಲಿಟಲ್ ಗುರು’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ನನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಭಿವೃದ್ಧಿಪಡಿಸಿದ್ದು, ಸಂಸ್ಕೃತವನ್ನು ಕಲಿಯುವುದಕ್ಕೆ ಸುಲಭಗೊಳಿಸುವ ಮತ್ತು ಮನರಂಜನೆಯನ್ನು ನೀಡುವ ಉದ್ದೇಶವನ್ನು ಈ ಆ್ಯಫ್ ಹೋಂದಿದೆ.

ಬೆಂಗಳೂರು ಮೂಲದ ಗ್ಯಾಮ್ ಆ್ಯಫ್ ಸ್ಪೋರ್ಟ್ಸ್ ವಿಜ್ ಅವರು ಈ ಅಪ್ಲಿಕೇಶನ್ ನನ್ನು ನಿರ್ಮಿಸಿದ್ದಾರೆ ಮತ್ತು ಇದು ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಲಭ್ಯವಿದೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಐ ಸಿ ಸಿ ಆರ್ ಡಿ.ಜಿ. ದಿನೇಶ್ ಕೆ ಪಟ್ನಾಯಕ್ ಅವರು, “ಲಿಟಲ್ ಗುರು ನಾವು ವಿಶ್ವದಾದ್ಯಂತ ಬೋಧನೆಗೆ ಏನು ಮಾಡಬೇಕೆಂದು ಪ್ರಸ್ತಾಪಿಸಿದ್ದೇವೆ ಎಂಬುದರ ಸುಂದರ ಸಂಕೇತವಾಗಿದೆ. ಈ ಅಪ್ಲಿಕೇಶನ್ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಹಾಯ ಮಾಡುತ್ತದೆ. ತಮಗೆ ಬೇಕಾದ ಸಮಯದಲ್ಲಿ ಈ ಅಪ್ಲಿಕೇಶನ್ ನ ಮೂಲಕ ಸಂಸ್ಕೃತವನ್ನು ಕಲಿತುಕೊಳ್ಳಬಹುದಾಗಿದೆ. ಎಂದಿದ್ದಾರೆ.

Advertisement

ಸಂಸ್ಕೃತ  ಈಗಾಗಲೇ ವಿಶ್ವಾದ್ಯಂತ ವಿಶ್ವವಿದ್ಯಾಲಗಳಲ್ಲಿ ಕಲಿಸಲಾಗುತ್ತಿದ್ದು, ಭಾರತ ಸರ್ಕಾರ ಬಿಡುಗಡೆಗೊಳಿಸಿದ ಈ ಆ್ಯಪ್  ಸಹಾಯದಿಂದ ಅವರಿಗೆ ಮತ್ತಷ್ಟು ಸಹಾಯವಾಗುತ್ತದೆ ಎಂದು ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next