Advertisement
ಪುತ್ತೂರಿನ ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರರು ಮಾನ್ಯ, ಉಪ್ಪಿನಂಗಡಿಯ ಸತ್ಯಶಾಂತಾ ಪ್ರೊಡಕ್ಷನ್ಸ್ ಹಾಗೂ ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಘಟಕದ ಸಂಯುಕ್ತ ಆಶ್ರಯದಲ್ಲಿ ನೀರ್ಚಾಲು ಸಮೀಪದ ಪುದುಕೋಳಿ ಶೇಷ ಸಭಾಭವನದಲ್ಲಿ ಆಯೋಜಿಸಲಾದ ಸಾಹಿತ್ಯ ಸಂಭ್ರಮ 2018-19 ಕಾರ್ಯ ಕ್ರಮದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆ ಉಪಸ್ಥಿತರಿದ್ದು ಮಾತನಾಡಿ, ಸಾಹಿತ್ಯದಲ್ಲಿ ನಿತ್ಯಜೀವನದ ನವುರಾದ ಹಾಸ್ಯದ ಲೇಪವಿದ್ದಾಗ ಆಪ್ಯಾಯತೆ ಮೂಡಿ ಬರುತ್ತದೆ. ಚಿವುಟುವ ಇಂತಹ ಪ್ರಕ್ರಿಯೆ ಬಳಿಕ ಸುದೀರ್ಘ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಜೀವ ಪ್ರೀತಿಯ, ಭಿನ್ನತೆಗೆ ಆಸ್ಪದ ನೀಡದ ಬರಹಗಳು ಮೂಡಿಬರಲೆಂದು ಹಾರೈಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು, ಇಂದು ಕನ್ನಡವನ್ನು ಹಿಸುಕುವ ಯತ್ನಗಳು ನಡೆಯುತ್ತಿವೆ. ಆದರೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಮಾಡುತ್ತಿರುವ ಯತ್ನಗಳು ಮುಂದುವರಿಯುತ್ತಿರುವುದು ಸ್ತುತ್ಯರ್ಹ ಎಂದು ತಿಳಿಸಿದರು.
Related Articles
Advertisement
ಬಾಲ ಕವಿಗೋಷ್ಠಿಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾಹಿತ್ಯ ಸಂಭ್ರಮದ ಮೊದಲ ಭಾಗದಲ್ಲಿ ಬಾಲ ಕವಿಗೋಷ್ಠಿ ನಡೆಯಿತು. ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ ಪೆರ್ಲ ಅಧ್ಯಕ್ಷತೆ ವಹಿಸಿದ್ದರು ಕವಿಗೋಷ್ಠಿಯಲ್ಲಿ ಆದ್ಯಂತ್ ಅಡೂರು, ಅಭಿಲಾಷ್ ಪೆರ್ಲ, ಉಪಾಸನಾ ಪಂಜರಿಕೆ, ಸ್ವಸ್ತಿಶ್ರೀ ಮಂಗಳೂರು, ವೈಷ್ಣವಿ ಮಾನ್ಯ ಮೊದಲಾದವರು ಕವನ ವಾಚಿಸಿದರು. ಸತ್ಯಾತ್ಮ ಕುಂಟಿನಿ ಸ್ವಾಗತಿಸಿದರು. ಚಿತ್ತರಂಜನ್ ಕಡಂದೇಲು ವಂದಿಸಿದರು. ಸೃಷ್ಟಿ ಶೆಟ್ಟಿ ಪೆರ್ಲ ಹಾಗೂ ಸೌರಭ ಕುಂಟಿನಿ ನಿರ್ವಹಿಸಿದರು. ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರು ಕವಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಯುವ ಕವಿಗೋಷ್ಠಿ
ಬಳಿಕ ನಡೆದ ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಚುಟುಕು ಸಾಹಿತಿ ವಿರಾಜ್ ಅಡೂರು ವಹಿಸಿದ್ದರು. ಕವಿಗೋಷ್ಠಿಯಲ್ಲಿ ಅಕ್ಷತಾರಾಜ್ ಪೆರ್ಲ, ರಂಗಶರ್ಮ ಉಪ್ಪಂಗಳ, ವಿಜಯರಾಜ ಪುಣಿಂಚತ್ತಾಯ, ಸುಭಾಷ್ ಪೆರ್ಲ, ಸುಕುಮಾರ ಬೆಟ್ಟಂಪಾಡಿ, ಆನಂದ ರೈ ಅಡ್ಕಸ್ಥಳ, ಕೆ. ಎಸ್. ದೇವರಾಜ್, ಶ್ರೀಶಕುಮಾರ ಪಂಜಿತ್ತಡ್ಕ, ವೀರೇಶ್ವರ ಭಟ್, ಡಾ| ರತ್ನಾಕರ ಮಲ್ಲಮೂಲೆ, ಚಿನ್ಮಯಕೃಷ್ಣ ಕಡಂದೇಲು, ಭೀಮಾರಾವ್ ವಾಷ್ಟರ್ ಸುಳ್ಯ ಮೊದಲಾದವರು ಭಾಗವಹಿಸಿ ದ್ದರು. ಪತ್ರಕರ್ತ ಪುರುಷೋತ್ತಮ ಭಟ್ ನಿರ್ವಹಿಸಿದರು. ಹರೀಶ್ ಸುಲಾಯ ಒಡ್ಡಂಬೆಟ್ಟು ನಿರೂಪಿಸಿದರು. ದೇವರಾಜ್ ಕುಂಬಳೆ ಸ್ವಾಗತಿಸಿ, ಗಣೇಶ್ ಪೈ ಬದಿಯಡ್ಕ ವಂದಿಸಿದರು. ಮಹಿಳಾ ಕವಿಗೋಷ್ಠಿ ಯಲ್ಲಿ ಶಾಂತಾ ರವಿ ಕುಂಟಿನಿ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಹೆಣ್ಮಕ್ಕಳ ಸಾಹಿತ್ಯಕ್ಕೆ ಒಲವು ಹೆಚ್ಚಾಗಿ ಸಮಾಜಮುಖೀಯಾಗ ಹೊರಟಾಗ ಹಲವು ಒತ್ತಡಗಳ ಸವಾಲುಗಳಿಗೆ ಆಕೆ ಒಳಗಾಗಬೇಕಾಗುತ್ತದೆ. ಇಂತಹ ಒತ್ತಡಗಳಿಂದ ಅಂತರ್ಮುಖೀಯಾಗುವ ಹೆಣ್ಮಕ್ಕಳು ಸವಾಲುಗಳನ್ನು ದಾಟಿ ಅಕ್ಷರ ರೂಪದ ಭಾವ ಸ್ಪುರಣಕ್ಕೆ ತೆರೆದುಕೊಂಡಾಗ ಯಶಸ್ಸು ಸಾಧ್ಯ ಎಂದರು. ಶ್ಯಾಮಲಾ ರವಿರಾಜ್ ಕುಂಬಳೆ, ಅನ್ನಪೂರ್ಣಾ ಬೆಜಪ್ಪೆ, ಶ್ರದ್ಧಾ ನಾಯ ರ್ಪಳ್ಳ, ನಿರ್ಮಲಾ ಶೇಷಪ್ಪ, ಶಶಿಕಲಾ, ಚಿತ್ರಕಲಾ ದೇವರಾಜ್, ಆಶಾಲತಾ, ಗೀತಾ, ಸವಿತಾ ಎಸ್. ಭಟ್ ಅಡ್ವಾಯಿ, ರಮ್ಯಾ, ರೇಖಾ, ದಿವ್ಯಗಂಗಾ ಪಿ., ಸೌಮ್ಯಾ ಪ್ರಸಾದ್, ವಿಜಯಾ ಸುಬ್ರಹ್ಮಣ್ಯ, ಜ್ಯೋತ್ಸಾ$° ಎಂ. ಕಡಂದೇಲು, ಪ್ರಭಾವತಿ ಕೆದಿಲಾಯ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕನ್ನಡ ಕಾವ್ಯ ಪರಂಪರೆಯು ವಿಶಿಷ್ಟವಾದ ಚಾರಿತ್ರಿಕ ಮಹತ್ವಪಡೆದು ಬೆಳೆದು ಬಂದಿದ್ದು, ಪ್ರಸ್ತುತ ಸಾಹಿತ್ಯ ಗೋಷ್ಠಿಗಳು ಹೆಚ್ಚುತ್ತಿದ್ದು, ಅದರೊಳಗಿನ ಮೌಲ್ಯಗಳ ಕುಸಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಥೆ, ಕವಿತೆಗಳನ್ನು ತಿದ್ದುವ, ಚರ್ಚಿಸುವ ಹೊಸ ಕ್ರಮದತ್ತ ಯುವ ಸಾಹಿತಿಗಳು ಮನಮಾಡಬೇಕು. ಸಾಹಿತಿಗಳಾಗಬೇಕೆಂಬ ಆಸಕ್ತಿಯಿಂದ ಬರೆಯುವ ಯುವ ತಲೆಮಾರು ಅದನ್ನು ಪ್ರಸ್ತುತಪಡಿಸುವ ಮೊದಲು ತಿದ್ದುವ, ಇತರ ಬರಹಗಳನ್ನು ಓದುವ ತುರ್ತು ಅಗತ್ಯ ಇದೆ.
-ಡಾ| ರಾಧಾಕೃಷ್ಣ ಬೆಳ್ಳೂರು